ಬದಲಾಯ್ತು ಚೈತ್ರಾ ಕೋಟೂರ್​ ಹೆಸರು; ಮಾ ಪ್ರಗ್ಯಾ ಭಾರತಿ ಆಗಿ ಅಧ್ಯಾತ್ಮಕ್ಕೆ ಜಾರಿದ ನಟಿ

ಎಲ್ಲ ಕಹಿ ಘಟನೆಗಳಿಂದ ಈಗ ಚೈತ್ರಾ ಹೊರಬಂದಿದ್ದಾರೆ. ಸಿನಿಮಾ, ಸಂವಾದ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನಡುವೆ ಅಧ್ಯಾತ್ಮಕದ ಕಡೆಗೆ ಅವರಿಗೆ ಒಲವು ಮೂಡಿರುವುದು ವಿಶೇಷ.

ಬದಲಾಯ್ತು ಚೈತ್ರಾ ಕೋಟೂರ್​ ಹೆಸರು; ಮಾ ಪ್ರಗ್ಯಾ ಭಾರತಿ ಆಗಿ ಅಧ್ಯಾತ್ಮಕ್ಕೆ ಜಾರಿದ ನಟಿ
ಬದಲಾಯ್ತು ಚೈತ್ರಾ ಕೋಟೂರ್​ ಹೆಸರು; ಮಾ ಪ್ರಗ್ಯಾ ಭಾರತಿ ಆಗಿ ಅಧ್ಯಾತ್ಮಕ್ಕೆ ಜಾರಿದ ನಟಿ


ಬಿಗ್​ ಬಾಸ್​ಗೆ (Bigg Boss) ಕಾಲಿಟ್ಟ ಬಳಿಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡವರು ನಟಿ ಚೈತ್ರಾ ಕೋಟೂರ್​. ಸಿನಿಮಾ, ಸಾಹಿತ್ಯ, ರಂಗಭೂಮಿ, ಜಾಹೀರಾತು, ರಿಯಾಲಿಟಿ ಶೋ ಸೇರಿದಂತೆ ಹಲವು ಕಡೆಗಳಲ್ಲಿ ತೊಡಗಿಕೊಂಡಿರುವ ಚೈತ್ರಾ (Chaithra Kotoor) ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ. ಮ್ಯೂಸಿಕ್​ ವಿಡಿಯೋ ಮೂಲಕವೂ ಅವರು ಗುರುತಿಸಿಕೊಂಡಿದ್ದರು. ಅವರ ವೈಯಕ್ತಿಕ ಜೀವನದಲ್ಲಿ ವಿವಾದ ಕೂಡ ಆಗಿತ್ತು. ಆದರೆ ಎಲ್ಲದರ ನಡುವೆ ಅವರೀಗ ಹೆಸರು ಬದಲಾಯಿಸಿಕೊಂಡು ಅಧ್ಯಾತ್ಮದ ಸೆಳೆತಕ್ಕೆ ಸಿಲುಕಿದ್ದಾರೆ. ಇದು ಗಾಸಿಪ್​ ಅಲ್ಲ. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಚೈತ್ರಾ ಕೋಟೂರ್​ ಅವರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆ ಕ್ಷಣಗಳ ಹಲವು ಫೋಟೋ ಮತ್ತು ವಿಡಿಯೋಗಳನ್ನು ಕೂಡ ಚೈತ್ರಾ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ಅವರ ಹೆಸರು ಕೂಡ ಬದಲಾಗಿದೆ. ಮಾ ಪ್ರಗ್ಯಾ ಭಾರತಿ ಎಂದು ಅವರು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ತಮ್ಮ ಫೋಟೋವೊಂದಕ್ಕೆ ಕ್ಯಾಪ್ಷನ್​ ನೀಡಿರುವ ಅವರು, ‘ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ’ ಎಂದು ಬರೆದುಕೊಂಡಿದ್ದಾರೆ.

ಇದೇ ವರ್ಷ ಮಾರ್ಚ್​ ತಿಂಗಳಲ್ಲಿ ಚೈತ್ರಾ ಕೋಟೂರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗೆಳೆಯ ನಾಗಾರ್ಜುನ್​ ಎಂಬುವವರ ಜೊತೆ ಅವರ ಮದುವೆ ನಡೆದಿತ್ತು. ಆದರೆ ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಎರಡೂ ಕುಟುಂಬದವರ ನಡುವೆ ದೊಡ್ಡ ಜಟಾಪಟಿ ಶುರುವಾಗಿತ್ತು. ಬಲವಂತದಿಂದ ಈ ಮದುವೆ ಮಾಡಿಸಲಾಗಿದೆ ಎಂದು ನಾಗಾರ್ಜುನ್​ ಆರೋಪ ಮಾಡಿದರು. ಮದುವೆ ಮುರಿದು ಬಿದ್ದ ಬಳಿಕ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಬಳಿಕ ಕಣ್ಣೀರಿಟ್ಟು ವಿಡಿಯೋ ಮಾಡಿದ್ದ ಅವರು ತಮಗಾದ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿದ್ದರು.

ಆ ಎಲ್ಲ ಕಹಿ ಘಟನೆಗಳಿಂದ ಈಗ ಚೈತ್ರಾ ಹೊರಬಂದಿದ್ದಾರೆ. ಸಿನಿಮಾ, ಸಂವಾದ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನಡುವೆ ಅಧ್ಯಾತ್ಮಕದ ಕಡೆಗೆ ಅವರಿಗೆ ಒಲವು ಮೂಡಿರುವುದು ವಿಶೇಷ. ಮಾ ಪ್ರಗ್ಯಾ ಭಾರತಿ ಎಂದು ತಮ್ಮನ್ನು ತಾವು ಕರೆದುಕೊಂಡಿರುವ ಅವರ ಮಂದಿನ ಪಯಣ ಹೇಗಿರಲಿದೆ ಎಂಬ ಕೌತುಕ ಜನರಲ್ಲಿ ಮೂಡಿದೆ.

ಇದನ್ನೂ ಓದಿ:

ಸಾವಿನ ದವಡೆಗೆ ನೂಕುವ ಕ್ರಿಮಿ ಬದುಕಿನ ಮಹತ್ವ ತಿಳಿಸುತ್ತದೆ; ಚೈತ್ರಾ ಕೋಟೂರ್​ ಕಂಬ್ಯಾಕ್​!

ಚೈತ್ರಾ ಕೋಟೂರ್​-ನಾಗಾರ್ಜುನ್​ ಮದುವೆ ವಿವಾದ! ಏನು ಹೇಳುತ್ತಿವೆ ಈ ಫೋಟೋಗಳು?