AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್​ ನ್ಯೂಸ್​

ಮೇಘನಾ ರಾಜ್​ ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಸುಧಾರಿಸಿಕೊಳ್ಳಲು ಸಮಯ ಹಿಡಿಯಿತು. ಈಗ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ​ ಅವರು ಮತ್ತೆ ಕ್ಯಾಮೆರಾ ಮುಂದೆ ಬಂದು ನಿಂತಿದ್ದಾರೆ.

Meghana Raj: ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್​ ನ್ಯೂಸ್​
ಮೇಘನಾ ರಾಜ್​
TV9 Web
| Updated By: Digi Tech Desk|

Updated on:Jul 22, 2021 | 6:10 PM

Share

ಸ್ಯಾಂಡಲ್​ವುಡ್​ನ ಖ್ಯಾತ ನಟಿ ಮೇಘನಾ ರಾಜ್ (Meghana Raj)​ ಅವರು ಇತ್ತೀಚೆಗೆ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಪತಿ ಚಿರಂಜೀವಿ ಸರ್ಜಾ (Chiranjeevi Sarja) ನಿಧನದ ನಂತರ ಅವರ ಬದುಕಿನಲ್ಲಿ ಕತ್ತಲು ಆವರಿಸಿತ್ತು. ಬಳಿಕ ಅವರ ಮೊಗದಲ್ಲಿ ನಗು ಮೂಡಿಸಿದ್ದು ಪುತ್ರ ಜ್ಯೂ. ಚಿರು (Jr Chiru) ಆಗಮನ. ಆ ನಂತರ ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್​ ಕಾಟ ಕೊಟ್ಟಿತ್ತು. ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸಿದ ಅವರು ಈಗ ಒಂದು ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿದರೆ ಅವರ ಅಭಿಮಾನಿಗಳು ಖುಷಿ ಆಗುವುದು ಗ್ಯಾರಂಟಿ. ಹೌದು, ಮೇಘನಾ ರಾಜ್​ ಮತ್ತೆ ಕ್ಯಾಮೆರಾ ಎದುರಿಸುತ್ತಿದ್ದಾರೆ.

ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನಾ ಅವರು ಕಳೆದೊಂದು ವರ್ಷದಿಂದೀಚೆಗೆ ನಟನೆಯಿಂದ ದೂರ ಉಳಿದುಕೊಂಡಿದ್ದರು. ಮದುವೆ, ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದರು. ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಸುಧಾರಿಸಿಕೊಳ್ಳಲು ಕೂಡ ಸಮಯ ಹಿಡಿಯಿತು. ಈಗ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ ರಾಜ್​ ಅವರು ಮತ್ತೆ ನಟನೆಗೆ ಮರಳಿದ್ದಾರೆ.

ಮೇಘನಾ ರಾಜ್​-ಚಿರಂಜೀವಿ ಸರ್ಜಾ ದಂಪತಿಯ ಪುತ್ರ ಜ್ಯೂ. ಚಿರು ಜನಿಸಿ 9 ತಿಂಗಳು ಕಳೆದಿವೆ. ಈ ಸಂದರ್ಭಕ್ಕೆ ಸರಿಯಾಗಿ ಮೇಘನಾ ಈ ಗುಡ್​ ನ್ಯೂಸ್​ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿರುವ ಅವರು, ‘ಜ್ಯೂ. ಚಿರುಗೆ ಈಗ 9 ತಿಂಗಳು ಆಯಿತು. ಒಂದು ವರ್ಷದ ಬಳಿಕ ಕ್ಯಾಮೆರಾ ಎದುರಿಸುವ ಮೂಲಕ ಈ ಕ್ಷಣವನ್ನು ನಾನು ಸೆಲೆಬ್ರೇಟ್​ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Meghana Raj Sarja (@megsraj)

ಶೂಟಿಂಗ್​ ಸೆಟ್​ನಲ್ಲಿ ಡೈಲಾಗ್​ ಓದುತ್ತ ನಿಂತಿರುವ ಮೇಘನಾ ಅವರನ್ನು ಕಂಡು ಅಭಿಮಾನಿಗಳು ಖುಷಿ ಆಗಿದ್ದಾರೆ. ನಿರ್ದೇಶಕ ಸಿಂಪಲ್​ ಸುನಿ ಸೇರಿದಂತೆ ಅನೇಕರು ಮೇಘನಾಗೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಕಮ್​ಬ್ಯಾಕ್ ಮಾಡುತ್ತಿರುವ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಗುತ್ತಿದೆ. ತಾವು ಕ್ಯಾಮೆರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್​ಗಾಗಿ ಎಂಬ ಮಾಹಿತಿಯನ್ನು ಮೇಘನಾ ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ. ಸಿನಿಮಾ, ಜಾಹೀರಾತು ಅಥವಾ ಫೋಟೋಶೂಟ್​ ಈ ಪೈಕಿ ಯಾವುದಕ್ಕಾಗಿ ಶೂಟಿಂಗ್​ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಕೌತುಕದ ಪ್ರಶ್ನೆ ಇಟ್ಟಿದ್ದಾರೆ.

ಇದನ್ನೂ ಓದಿ:

Meghana Raj: ಮೇಘನಾ ರಾಜ್​ ಜನ್ಮದಿನಕ್ಕೆ ವೈರಲ್​ ಆಯ್ತು ಜ್ಯೂನಿಯರ್​ ಚಿರು ವಿಡಿಯೋ

Meghana Raj: ಚಿರು ಐ ಲವ್​ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್​

Published On - 5:41 pm, Thu, 22 July 21

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು