Meghana Raj: ಚಿರು ಐ ಲವ್​ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್​

Meghana Raj Instagram Post: ಅದು ಜೂನ್​ 7. ನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರು ಮೃತಪಟ್ಟಿದ್ದರು.

  • TV9 Web Team
  • Published On - 19:32 PM, 29 Apr 2021
Meghana Raj: ಚಿರು ಐ ಲವ್​ ಯೂ, ಹಿಂದಿರುಗಿ ಬಾ; ಭಾವುಕರಾದ ನಟಿ ಮೇಘನಾ ರಾಜ್​
Meghana Raj

ನಟಿ ಮೇಘನಾ ರಾಜ್​ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆ ಆದವರು. ಆದರೆ, ಚಿರು ಹೃದಯಾಘಾತದಿಂದ ಮೃತಪಟ್ಟ ವಿಚಾರ ಅವರ ಕುಟುಂಬದವರಿಂದಾಗಲೀ ಅಭಿಮಾನಿಗಳಿಂದಾಗಲೀ ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಚಿರು ಅಗಲಿಕೆಯಿಂದ ತುಂಬಾನೇ ಕೊರಗಿದವರು ಮೇಘನಾ ರಾಜ್​. ಈಗ ಅವರು ಪೋಸ್ಟ್​ ಒಂದನ್ನು ಹಾಕಿದ್ದಾರೆ. ಈ ಭಾವನಾತ್ಮಕ ಪೋಸ್ಟ್​ ನೋಡಿ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

ಅದು ಜೂನ್​ 7. ನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಿರು ಮೃತಪಟ್ಟಿದ್ದರು. ಈ ವಿಚಾರ ಸರ್ಜಾ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿತ್ತು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ ಆಗಿದ್ದರು. ದುಃಖದಲ್ಲಿಯೇ ದಿನದೂಡಿದ ಮೇಘನಾ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಜೂನಿಯರ್​ ಚಿರು ಎಂದೇ ಕರೆಯಲಾಗಿತ್ತು.

ಈಗ ನಟಿ ಮೇಘನಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಮೇಘನಾ ಚಿರು ಜತೆ ನಿಂತಿದ್ದಾರೆ. ಈ ಫೋಟೋಗೆ ಕ್ಯಾಪ್ಶನ್​ ನೀಡಿರುವ ಅವರು, ಐ ಲವ್​ ಯೂ, ಹಿಂದಿರುಗಿ ಬಾ ಎಂದು ಮೇಘನಾ ಮನವಿ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳ ಕಣ್ಣು ಒದ್ದೆ ಆಗಿದೆ.

 

View this post on Instagram

 

A post shared by Meghana Raj Sarja (@megsraj)

ಚಿರು-ಮೇಘನಾ ಮಗುವಿಗೆ ಇತ್ತೀಚೆಗೆ ಆರು ತಿಂಗಳು ತುಂಬಿತ್ತು. ಮಗುವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮೇಘನಾ ಸಂಭ್ರಮಿಸಿದ್ದರು. ಇತ್ತೀಚೆಗೆ ಮಗುವಿಗೆ ಕೊರೊನಾ ಅಂಟುವ ಭಯ ಕಾಡಿದ ಬಗ್ಗೆ ಮೇಘನಾ ಹೇಳಿಕೊಂಡಿದ್ದರು.  ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಸೆಲ್ಫ್​ ಕ್ವಾರಂಟೈನ್​ ಆದೆ. ನನ್ನ ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ನೆನೆದು ತುಂಬಾನೇ ಭಯಗೊಂಡಿದ್ದೆ. ನನ್ನಲ್ಲಿ ಯಾವುದೇ ಕೊರೊನಾ ಲಕ್ಷಣ ಕಾಣಿಸಿಲ್ಲ. ಆದಾಗ್ಯೂ, ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟೆ. ಈ ವೇಳೆ ನೆಗೆಟಿವ್​ ಬಂದಿದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Meghana Raj: ಜೂನಿಯರ್ ಚಿರುಗೆ ಆರು ತಿಂಗಳು; ಸಂಭ್ರಮಿಸಿದ ಮೇಘನಾ ರಾಜ್​