ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್

Chaithra Kotoor: ಕನ್ನಡದ ನಟಿ ಚೈತ್ರಾ ಕೋಟೂರ್ ಓಶೋ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಅಲ್ಲಿ ಅವರು ನೃತ್ಯ ಮಾಡಿದ್ದು ಈಗ ಎಲ್ಲರ ಗಮನ ಸೆಳೆದಿದೆ.

ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್
ನೃತ್ಯ ಮಾಡುತ್ತಿರುವ ಚೈತ್ರಾ ಕೋಟೂರ್


ಪ್ರತಿಯೊಬ್ಬರೂ ಜೀವನದಲ್ಲಿ ಕಷ್ಟದ ಸನ್ನಿವೇಷವನ್ನು ಹಾದುಬರುತ್ತಾರೆ. ಅದನ್ನು ಸ್ವೀಕರಿಸಿ ಮತ್ತೆ ಪುಟಿದು ನಿಲ್ಲುವ, ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳುವ ಯತ್ನದಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದರ ಮೇಲೆ ವ್ಯಕ್ತಿಯ ಭವಿಷ್ಯ ನಿಂತಿರುತ್ತದೆ. ಇದೇ ಮಾದರಿಯಲ್ಲಿ, ಜೀವನದ ಕಹಿ ಘಟನೆಗಳಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಟಿ, ಬರಹಗಾರ್ತಿ ಚೈತ್ರಾ ಕೋಟೂರ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಈ ಮೊದಲು ಅವರು ಓಶೋ ಧ್ಯಾನ ಶಿಬಿರದಲ್ಲಿ ಭಾಗವಹಿಸಿರುವ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ಆ ಶಿಬಿರದಲ್ಲಿ ಅವರು ನೃತ್ಯ ಮಾಡುತ್ತಿರುವ ವಿಡಿಯೊ ಲಭ್ಯವಾಗಿದ್ದು ಅದರಲ್ಲಿ ಅವರು ತನ್ಮಯರಾಗಿ ನೃತ್ಯ ಮಾಡುತ್ತಿರುವುದು ಸೆರೆಯಾಗಿದೆ. ಮನಸ್ಸನ್ನು ಹಗುರಗೊಳಿಸಲು ನೃತ್ಯ, ಹಾಡು ಮೊದಲಾದವುಗಳು ಸಹಾಯ ಮಾಡುತ್ತವೆ. ಈ ನಿಟ್ಟಿನಲ್ಲಿ ಚೈತ್ರಾ ಅವರು ತೊಡಗಿಕೊಂಡಿರಬಹುದು ಎನ್ನಲಾಗಿದೆ.

ಚೈತ್ರಾ ಅವರು ಧ್ಯಾನ ಶಿಬಿರದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಇಲ್ಲಿದೆ:

ದಾಂಪತ್ಯದ ವಿವಾದದಿಂದಾಗಿ ನೊಂದಿದ್ದ ಚೈತ್ರಾ, ಇತ್ತೀಚೆಗೆ ಜಾಲತಾಣಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ, ಸಂವಾದ, ಬರಹ ಹೀಗೆ ಹಲವು ಸೃಜನಶೀಲ ಚಟುವಟಿಕೆಗಳಲ್ಲಿ ಸತತವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿ ತೊಡಗಿಸಿಕೊಂಡ ಮೇಲೆ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಕಾರಣ, ಫೇಸ್​ಬುಕ್​ನಲ್ಲಿ ಚೈತ್ರಾ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಅದರಲ್ಲಿ ಮಾ ಪ್ರಗ್ಯಾ ಭಾರತಿ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Muttiah Muralitharan: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕ್ರಿಕೆಟ್ ಕೆರಿಯರ್ ಕಟ್ಟಿದ್ರು: ಮುರಳಿಯ ವಿಶ್ವ ದಾಖಲೆಗೆ 11 ವರ್ಷ..!

ಇದನ್ನೂ ಓದಿ: Muttiah Muralitharan: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕ್ರಿಕೆಟ್ ಕೆರಿಯರ್ ಕಟ್ಟಿದ್ರು: ಮುರಳಿಯ ವಿಶ್ವ ದಾಖಲೆಗೆ 11 ವರ್ಷ..!

(Chaithra Kotoor dance in Osho meditation Camp)