Muttiah Muralitharan: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕ್ರಿಕೆಟ್ ಕೆರಿಯರ್ ಕಟ್ಟಿದ್ರು: ಮುರಳಿಯ ವಿಶ್ವ ದಾಖಲೆಗೆ 11 ವರ್ಷ..!

Muttiah Muralitharan: ನಾಲ್ಕನೇ ದಿನದಾಟದಲ್ಲಿ ಭಾರತದ 2ನೇ ಇನಿಂಗ್ಸ್​ನಲ್ಲಿ ಲಸಿತ್ ಮಾಲಿಂಗ 5 ವಿಕೆಟ್​ ಪಡೆದು ಮಿಂಚಿದರು. ಇತ್ತ ಮುರಳೀಧರನ್​ಗೆ 3 ವಿಕೆಟ್​ಗಳ ಅವಶ್ಯಕತೆಯಿತ್ತು. ಆದರೆ ಭಾರತದ ಬ್ಯಾಟ್ಸ್​ಮನ್​ಗಳು ಸ್ಪಿನ್ ಮಾಂತ್ರಿಕ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು.

Muttiah Muralitharan: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕ್ರಿಕೆಟ್ ಕೆರಿಯರ್ ಕಟ್ಟಿದ್ರು: ಮುರಳಿಯ ವಿಶ್ವ ದಾಖಲೆಗೆ 11 ವರ್ಷ..!
Muttiah Muralitharan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 22, 2021 | 6:22 PM

ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳು ಇರುವುದೇ ಮುರಿಯಲು ಎಂಬ ಮಾತಿದೆ. ಆದರೆ ಕೆಲವೊಂದು ದಾಖಲೆಯನ್ನು ಮುರಿಯುವುದಿರಲಿ, ಅದರ ಅಸುಪಾಸು ತಲುಪುವುದು ಕೂಡ ಕಷ್ಟಸಾಧ್ಯ. ಅಂತಹದೊಂದು ದಾಖಲೆ ನಿರ್ಮಿಸಿದವರಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು.

ಅದು 2010, ಜುಲೈ ತಿಂಗಳು..ಭಾರತ-ಶ್ರೀಲಂಕಾ ನಡುವೆ ಟೆಸ್ಟ್ ಸರಣಿ ಘೋಷಣೆಯಾಗಿತ್ತು. ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಲಂಕಾ ಸ್ಪಿನ್ ದಂತಕಥೆ ಮುರಳೀಧರನ್ ಕ್ರಿಕೆಟ್​ಗೆ ವಿದಾಯ ಹೇಳುವುದಾಗಿ ತಿಳಿಸಿದ್ದರು. 18 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ಭಾರತದ ವಿರುದ್ದದ ಮೊದಲ ಟೆಸ್ಟ್ ಮೂಲಕ ಗುಡ್​ ಬೈ ಹೇಳುವ ಗಟ್ಟಿ ನಿರ್ಧಾರ ಮಾಡಿದ್ದರು. ಆದರೆ ಅತ್ತ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಏಕೆಂದರೆ ಅದಾಗಲೇ ಟೆಸ್ಟ್​ನಲ್ಲಿ 792 ವಿಕೆಟ್ ಉರುಳಿಸಿದ್ದ ಮುರಳಿಗೆ ವಿಶ್ವ ದಾಖಲೆಯ ಬರೆಯುವ ಅವಕಾಶವಿತ್ತು. ಇದಾಗ್ಯೂ ಮುರಳೀಧರನ್ ಅವರ ನಿರ್ಧಾರವು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.

ಅದರಂತೆ ಶ್ರೀಲಂಕಾದ ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಜುಲೈ 18 ರಿಂದ ಭಾರತದ ವಿರುದ್ದದ ಟೆಸ್ಟ್ ಸರಣಿ ಆರಂಭವಾಗಿತ್ತು. ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ನಡೆಸಿ 520 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಇತ್ತ ಮೊದಲ ಇನಿಂಗ್ಸ್​ನಲ್ಲಿ ಭಾರತದ ಮೂರು ವಿಕೆಟ್ ಉರುಳಿದರೂ ಮುರಳೀಧರನ್​ಗೆ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಆದರೆ ಟೀ ಬ್ರೇಕ್ ಬಳಿಕ ಮುರಳಿ ತಮ್ಮ ಕೈಚಳಕ ತೋರಿಸಲು ಆರಂಭಿಸಿದರು. ತಮ್ಮ ಕೊನೆಯ ಟೆಸ್ಟ್ ಪಂದ್ಯದ ಮೊದಲ ವಿಕೆಟ್​ ಆಗಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದರು. 2ನೇ ಬಲಿ ಯುವರಾಜ್ ಸಿಂಗ್. ಇದರ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿಗೂ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮದಲ್ಲಿ ಪ್ರಗ್ಯಾನ್ ಓಜಾ ಹಾಗೂ ಅಭಿಮನ್ಯು ಮಿಥುನ್ ವಿಕೆಟ್ ಉರುಳಿಸುವ ಮೂಲಕ ಮುತ್ತಯ್ಯ ಮುರಳೀಧರನ್ ಒಟ್ಟು 5 ವಿಕೆಟ್ ಪಡೆದರು. ಅದರೊಂದಿಗೆ ಒಟ್ಟಾರೆ ವಿಕೆಟ್​ಗಳ ಸಂಖ್ಯೆ 797ಕ್ಕೆ ಬಂದು ನಿಂತಿತು. ಇನ್ನೇನು 2ನೇ ಇನಿಂಗ್ಸ್​ನಲ್ಲಿ ದಾಖಲೆ ಬರೆಯಲಿದ್ದಾರೆ ಅನ್ನುವಷ್ಟರಲ್ಲಿ ಪಂದ್ಯಕ್ಕೆ ಮಳೆ ಬರಲಾರಂಭಿಸಿತು.

ಮೂರನೇ ದಿನ ಸಂಪೂರ್ಣ ಮಳೆಗೆ ಆಹುತಿಯಾದ ಕಾರಣ ಮುರಳಿ ಹೆಸರಿನಲ್ಲಿ ವಿಶ್ವ ದಾಖಲೆ ನಿರ್ಮಾಣವಾಗಲಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಆದರೆ ನಾಲ್ಕನೇ ದಿನದಾಟದಲ್ಲಿ ಭಾರತದ 2ನೇ ಇನಿಂಗ್ಸ್​ನಲ್ಲಿ ಲಸಿತ್ ಮಾಲಿಂಗ 5 ವಿಕೆಟ್​ ಪಡೆದು ಮಿಂಚಿದರು. ಇತ್ತ ಮುರಳೀಧರನ್​ಗೆ 3 ವಿಕೆಟ್​ಗಳ ಅವಶ್ಯಕತೆಯಿತ್ತು. ಆದರೆ ಭಾರತದ ಬ್ಯಾಟ್ಸ್​ಮನ್​ಗಳು ಸ್ಪಿನ್ ಮಾಂತ್ರಿಕ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೆ ಯುವರಾಜ್ ಸಿಂಗ್ ಮುರುಳಿ ಎಸೆತದಲ್ಲಿ ಜಯವರ್ಧನೆಗೆ ಕ್ಯಾಚ್ ನೀಡಿದರು. ಇನ್ನು ಎರಡು ವಿಕೆಟ್​ಗಳು ಬೇಕಿತ್ತು. ಇದರ ಬೆನ್ನಲ್ಲೇ ಹರ್ಭಜನ್ ಸಿಂಗ್ ಅವರನ್ನು ಔಟ್ ಮಾಡಿ ಒಟ್ಟು ವಿಕೆಟ್​ಗಳ ಸಂಖ್ಯೆಯನ್ನು 799ಕ್ಕೆ ತಂದು ನಿಲ್ಲಿಸಿದರು. ಅದಾಗಲೇ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 9 ವಿಕೆಟ್​ ಕಳೆದುಕೊಂಡಿತು.

ನಾಯಕ ಕುಮಾರ್ ಸಂಗಾಕ್ಕರ ಬ್ಯಾಕ್ ಟು ಬ್ಯಾಕ್ ಮುರಳೀಧರನ್ ಕೈಗೆ ಚೆಂಡು ನೀಡಿದರು. ಅದರಂತೆ 44.2 ಓವರ್​ಗಳನ್ನು ಎಸೆದರು. ಆದರೆ ವಿಕೆಟ್​ ಮಾತ್ರ ಸಿಗುತ್ತಿರಲಿಲ್ಲ. ಅಂತಿಮವಾಗಿ 45ನೇ ಓವರ್​ನ 3ನೇ ಎಸೆತದಲ್ಲಿ ಪ್ರಗ್ಯಾನ್ ಓಜಾ ಬ್ಯಾಟ್ ಸವರಿ ಚೆಂಡು ಜಯವರ್ಧನೆಯತ್ತ ಚಿಮ್ಮಿತು. ಜಯವರ್ಧನೆ ಬಾಲ್​ನ್ನು ಅತ್ಯುತ್ತಮವಾಗಿ ಕ್ಯಾಚ್ ಹಿಡಿದರು. ಅದರೊಂದಿಗೆ ತಮ್ಮ ಟೆಸ್ಟ್ ಕೆರಿಯರ್​ನ ಕೊನೆಯ ಎಸೆತದಲ್ಲಿ ಮುತ್ತಯ್ಯ ಮುರಳೀಧರನ್ 800ನೇ ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದರು. ಈ ಐತಿಹಾಸಿಕ ದಾಖಲೆಗೆ ಇಂದು 11ನೇ ವರ್ಷ.

ಶ್ರೀಲಂಕಾ ತಮಿಳಿಯನ್ ಕುಟುಂಬಕ್ಕೆ ಸೇರಿರುವ ಮುತ್ತಯ್ಯ ಮುರಳೀಧರನ್ ಕಡು ಬಡತನದಲ್ಲೇ ಬೆಳೆದು ಬಂದವರು. ಅವರ ತಂದೆ ಕ್ಯಾಂಡಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗನ ಕ್ರಿಕೆಟ್​ ಕೆರಿಯರ್​ಗಾಗಿ ಅವರು ಹೆಚ್ಚುವರಿ ಸಮಯವನ್ನು ಕೆಲಸದಲ್ಲೇ ಕಳೆಯುತ್ತಿದ್ದರು. ಅದರಿಂದ ಸಿಗುತ್ತಿದ್ದ ಹೆಚ್ಚಿನ ವೇತನವನ್ನು ಮುರಳೀಧರನ್ ಅವರ ಕ್ರಿಕೆಟ್ ಜೀವನಕ್ಕಾಗಿ ಮೀಸಲಿಡುತ್ತಿದ್ದರು. ತಂದೆಯ ಆಸೆಯಂತೆ ಮುರಳೀಧರನ್ ಛಲ ಬಿಡದೆ ಯಶಸ್ಸು ಸಾಧಿಸಿದರು. ಅದು ಕೂಡ ಕ್ರಿಕೆಟ್ ಇತಿಹಾಸದಲ್ಲೇ 1347 ವಿಕೆಟ್ ಪಡೆಯುವ ಮೂಲಕ ಎಂಬುದು ವಿಶೇಷ.

ಹೌದು, ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ ಟೆಸ್ಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಟಿ20 ಯಲ್ಲಿ 13 ವಿಕೆಟ್ ಉರುಳಿಸಿದ್ದಾರೆ. ಸದ್ಯ ಮುತ್ತಯ್ಯ ಮುರಳೀಧರನ್ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್

(Muttiah Muralitharan picks 800th Test wicket off last ball of his career)

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು