IND vs ENG: ಇಂಗ್ಲೆಂಡ್ನಲ್ಲಿ ಮುಂದುವರೆದ ಕೊಹ್ಲಿ ಪಡೆಯ ಇಂಜುರಿ ಸಮಸ್ಯೆ; ಸರಣಿಯಿಂದ ಈ ಯುವ ಬೌಲರ್ ಔಟ್!
IND vs ENG: ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಗಾಯಗಳ ಸರಣಿ ಹೆಚ್ಚುತ್ತಿದೆ. ಓಪನರ್ ಶುಬ್ಮನ್ ಗಿಲ್ ನಂತರ, ಈಗ ವೇಗದ ಬೌಲರ್ ಅವೇಶ್ ಖಾನ್ ಕೂಡ ಗಾಯದಿಂದಾಗಿ ಈ ಪ್ರವಾಸದಿಂದ ಹೊರಗುಳಿದಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಗಾಯಗಳ ಸರಣಿ ಹೆಚ್ಚುತ್ತಿದೆ. ಓಪನರ್ ಶುಬ್ಮನ್ ಗಿಲ್ ನಂತರ, ಈಗ ವೇಗದ ಬೌಲರ್ ಅವೇಶ್ ಖಾನ್ ಕೂಡ ಗಾಯದಿಂದಾಗಿ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಡರ್ಹಾಮ್ನಲ್ಲಿ ನಡೆದ ಭಾರತದ ಪ್ರಥಮ ದರ್ಜೆ ಅಭ್ಯಾಸದ ಮೊದಲ ದಿನದಂದು ಕೌಂಟಿ ಇಲೆವೆನ್ ಪರ ಆಡುತ್ತಿದ್ದಾಗ ಯುವ ವೇಗದ ಬೌಲರ್ ಅವೇಶ್ ಖಾನ್ ಎಡಗೈ ಹೆಬ್ಬೆರಳಿಗೆ ಪೆಟ್ಟಾಗಿದೆ. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ, ಅವರು ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕೂಡ ಗಾಯದಿಂದಾಗಿ ಅಭ್ಯಾಸ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ.
ಬಿಸಿಸಿಐ ಬುಧವಾರ ಅವೇಶ್ ಅವರ ಗಾಯದ ಬಗ್ಗೆ ವಿಸ್ತಾರವಾಗಿ ಹೇಳಲಿಲ್ಲ ಆದರೆ “ವೇಗದ ಬೌಲರ್ ಅವೇಶ್ ಖಾನ್ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಿದರು. ಜೊತೆಗೆ ಅಭ್ಯಾಸ ಪಂದ್ಯದ ಎರಡನೇ ಮತ್ತು ಮೂರನೇ ದಿನದ ಆಟದಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದಿದ್ದರು.
ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಮಂಗಳವಾರ ಮೊದಲ ದಿನದ ಊಟದ ನಂತರದ ಅಧಿವೇಶನದಲ್ಲಿ ಅವೇಶ್ ತಮ್ಮ 10 ನೇ ಓವರ್‌ನ ಐದನೇ ಎಸೆತದಲ್ಲಿ ಗಾಯಗೊಂಡಿದ್ದರು. ಅವರು ಹನುಮಾ ವಿಹಾರಿ ಅವರ ಹೊಡೆತವನ್ನು ತಡೆಯುವ ಯತ್ನದಲ್ಲಿ ಗಾಯಗೊಂಡಿದ್ದರು. ನಂತರ ಅವರು ತುಂಬಾ ನೋವಿನಿಂದ ಬಳಲುತ್ತಿದ್ದ ಕಾರಣ ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಡರ್ಹಾಮ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಕಾಮೆಂಟೆಟರ್ ಸಹ ಗಾಯವು ಗಂಭೀರವಾಗಿರಬಹುದು ಎಂದು ಹೇಳಿದ್ದರು. 24 ವರ್ಷದ ಅವೇಶ್ ಇದುವರೆಗೆ 26 ಪ್ರಥಮ ದರ್ಜೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಚೊಚ್ಚಲ ಪಂದ್ಯವನ್ನು ಆಡಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು.
ಇದನ್ನೂ ಓದಿ: Howzzat! ಕ್ರಿಕೆಟ್ ಕುರಿತಾದ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೇ? ಹಾಗಿದ್ರೆ ಟಿವಿ9 ನೀಡುತ್ತಿದೆ ಸುವರ್ಣಾವಕಾಶ
ಮ್ಯಾಂಚೆಸ್ಟರ್ನಲ್ಲಿ ಇನ್ನೊಂದು ಘಟನೆ: ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಯಸಿಗೆ ಪ್ರಪೋಸ್ ಮಾಡುವುದು ಹೊಸ ಸಂಪ್ರದಾಯವೇ?
