Rahul Dravid: ಶ್ರೀಲಂಕಾ ವಿರುದ್ದದ ರೋಚಕ ಗೆಲುವಿನ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?
ಕ್ರೀಸ್ಗೆ ಇಳಿಯುವ ಮುನ್ನ ಡ್ರೆಸಿಂಗ್ ರೂಮ್ನಲ್ಲಿ ದೀಪಕ್ ಚಹರ್ ಜೊತೆ ಮಾತನಾಡಿದ್ದ ದ್ರಾವಿಡ್, ಎಲ್ಲಾ ಬಾಲ್ಗಳನ್ನು ಆಡಲು ತಿಳಿಸಿದ್ದರು. ಅಷ್ಟೇ ಅಲ್ಲದೆ ದ್ರಾವಿಡ್ ಕೋಚಿಂಗ್ನಲ್ಲಿ ನಾನು ಭಾರತ ಎ ತಂಡದ ಪರ ಕೂಡ ಆಡಿದ್ದೇನೆ. ಅವರು ನನ್ನ ಬ್ಯಾಟಿಂಗ್ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದರು.
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ದಾಖಲಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ಈ ವಿಜಯದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಡ್ರೆಸ್ಸಿಂಗ್ ಕೋಣೆಯಲ್ಲಿ ಯುವ ಆಟಗಾರರನ್ನು ಮೆಚ್ಚುಗೆಯ ಮಾತುಗಳೊಂದಿಗೆ ಹುರಿದುಂಬಿಸಿದರು. ಭಾರತದ ಯುವ ಕ್ರಿಕೆಟಿಗರನ್ನು ದ್ರಾವಿಡ್ ಉದ್ದೇಶಿಸಿ ಮಾತನಾಡಿದ್ದ ದ್ರಾವಿಡ್, ಶ್ರೀಲಂಕಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿರುವುದು ಅತ್ಯುತ್ತಮ ಸಾಧನೆ. ಆದರೆ ಈ ಪಂದ್ಯವನ್ನು ಸೋತಿದ್ದರೂ ಸಹ ನನಗೆ ಯಾವುದೇ ಆಕ್ಷೇಪವಿರುತ್ತಿರಲಿಲ್ಲ. ಏಕೆಂದರೆ ನಮ್ಮ ತಂಡವು ಕೊನೆಯವರೆಗೂ ತೋರಿಸಿದ ಹೋರಾಟದ ಮನೋಭಾವ ಮಹತ್ವದಾಗಿತ್ತು. ನಾವು ಚಾಂಪಿಯನ್ ತಂಡದಂತೆ ಹೋರಾಡಿ ಗೆದ್ದಿದ್ದೇವೆ ಎಂದು ದ್ರಾವಿಡ್ ಹೇಳಿದ್ದಾರೆ.
“ನಿಸ್ಸಂಶಯವಾಗಿ ನಾವು ಪಂದ್ಯದ ಫಲಿತಾಂಶದ ದೃಷ್ಟಿಯಿಂದ ಸರಿಯಾದ ಸ್ಥಾನದಲ್ಲಿದ್ದೇವೆ. ಇದು ನಂಬಲಾಗದ ಮತ್ತು ಅದ್ಭುತವಾದ ಜಯ. ಆದರೆ ನಾವು ಈ ಪಂದ್ಯವನ್ನು ಸೋತಿದ್ದರೂ ಸಹ, ಇದು ಸಂಪೂರ್ಣವಾಗಿ ಅದ್ಭುತವಾದ ಹೋರಾಟದ ಪಂದ್ಯವಾಗಿರುತ್ತಿತ್ತು. ನೀವೆಲ್ಲರೂ ಅದ್ಭುತವಾಗಿ ಪ್ರಯತ್ನಿಸಿದ್ದೀರಿ. ದೀಪಕ್ ಚಹರ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಚಹರ್ ಅಜೇಯ 69 ರನ್ ಗಳಿಸಿದರು. ಜೊತೆಗೆ ಭುವನೇಶ್ವರ್ (19) ಜೊತೆಗೂಡಿ ಎಂಟನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವನ್ನು ನೀಡಿದರು ಎಂದು ದ್ರಾವಿಡ್ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಮಾತನಾಡಲು ಇದು ಸಮಯವಲ್ಲ ಎಂದ ದ್ರಾವಿಡ್, ನೀವು ಇಡೀ ಪಂದ್ಯವನ್ನು ನೋಡಿದಾಗ, ತಂಡದ ಸಾಧನೆ ತುಂಬಾ ಚೆನ್ನಾಗಿತ್ತು. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನವಿತ್ತು. ಇದು ಉತ್ತಮ ತಂಡದ ಅತ್ಯುತ್ತಮ ಪ್ರದರ್ಶನವಾಗಿತ್ತು ಎಂದು ದ್ರಾವಿಡ್ ಯುವ ಆಟಗಾರರ ಪ್ರದರ್ಶನಕ್ಕೆ ಬಹುಪರಾಕ್ ಎಂದರು.
ಶ್ರೀಲಂಕಾ ನೀಡಿದ 276 ರನ್‍ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡವು ಒಂದು ಹಂತದಲ್ಲಿ 193 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಎಚ್ಚರಿಕೆಯ ಆಟದೊಂದಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂದರೆ 8 ವಿಕೆಟ್‌ಗೆ ಚಹರ್-ಭುವಿ ಜೋಡಿ ಬರೋಬ್ಬರಿ 84 ರನ್ಗಳನ್ನು ಕಲೆಹಾಕಿದ್ದರು.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ 8ನೇ ಕ್ರಮಾಂಕದಲ್ಲಿ ದೀಪಕ್ ಚಹರ್ ಕಣಕ್ಕಿಳಿದಿರುವುದು. ಸಾಮಾನ್ಯವಾಗಿ ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 8ನೇ ಕ್ರಮಾಂಕದಲ್ಲಿ ಆಡುತ್ತಾರೆ. ಆದರೆ ಲಂಕಾ ವಿರುದ್ದ ಭಾರತ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಬದಲಾವಣೆ ಮಾಡಿದ್ದರು. ಭುವಿ ಬದಲಿಗೆ ದೀಪಕ್ ಚಹರ್ ಅವರನ್ನು ಬ್ಯಾಟಿಂಗ್ಗೆ ಇಳಿಸಿದ್ದರು.
ಕ್ರೀಸ್ಗೆ ಇಳಿಯುವ ಮುನ್ನ ಡ್ರೆಸಿಂಗ್ ರೂಮ್ನಲ್ಲಿ ದೀಪಕ್ ಚಹರ್ ಜೊತೆ ಮಾತನಾಡಿದ್ದ ದ್ರಾವಿಡ್, ಎಲ್ಲಾ ಬಾಲ್ಗಳನ್ನು ಆಡಲು ತಿಳಿಸಿದ್ದರು. ಅಷ್ಟೇ ಅಲ್ಲದೆ ದ್ರಾವಿಡ್ ಕೋಚಿಂಗ್ನಲ್ಲಿ ನಾನು ಭಾರತ ಎ ತಂಡದ ಪರ ಕೂಡ ಆಡಿದ್ದೇನೆ. ಅವರು ನನ್ನ ಬ್ಯಾಟಿಂಗ್ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದರು. ಹೀಗಾಗಿಯೇ 50 ಓವರ್ಗಳನ್ನು ಆಡುವಂತೆ ತಿಳಿಸಿದ್ದರು. ಅದರಂತೆ ಅಂತಿಮ ಎಸೆತದವರೆಗೂ ಕ್ರೀಸ್ ಕಚ್ಚಿ ನಿಲ್ಲುವುದು ನಮ್ಮ ಯೋಜನೆಯಾಗಿತ್ತು ಎಂದು ಚಹರ್ ಬಹಿರಂಗಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ಸೂಚನೆಯಂತೆ ಬ್ಯಾಟಿಂಗ್ ಮಾಡಿದ ದೀಪಕ್ ಚಹರ್ ತಂಡದ ಸರಾಸರಿ 6ಕ್ಕಿಂತ ಕಡಿಮೆ ಕುಸಿಯದಂತೆ ನೋಡಿಕೊಂಡರು. ಸಿಕ್ಕ ಅವಕಾಶದಲ್ಲಿ ಆಕ್ರಮಣಕಾರಿ ಹೊಡೆತವನ್ನು ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇತ್ತ ಅನುಭವದೊಂದಿಗೆ ಸಾಥ್ ನೀಡಿದ ಭುವನೇಶ್ವರ್ ಕುಮಾರ್ 28 ಎಸೆತಗಳಲ್ಲಿ 19 ರನ್ ಬಾರಿಸಿದರು. ದಿ ಲೆಜೆಂಡ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡಿದ ಆ ಒಂದು ಬದಲಾವಣೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಅದರಂತೆ ಟೀಮ್ ಇಂಡಿಯಾ 49.1 ಓವರ್ನಲ್ಲಿ 277 ರನ್ ಬಾರಿಸುವ ಮೂಲಕ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!
(Rahul Dravid gives impeccable speech in dressing room after India’s win in 2nd ODI)