ಮ್ಯಾಂಚೆಸ್ಟರ್ನಲ್ಲಿ ಇನ್ನೊಂದು ಘಟನೆ: ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಯಸಿಗೆ ಪ್ರಪೋಸ್ ಮಾಡುವುದು ಹೊಸ ಸಂಪ್ರದಾಯವೇ?
ಸದರಿ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆದ ಕೇವಲ 30 ನಿಮಿಷಗಳಲ್ಲಿ 70,000 ವ್ಯೂಸ್ ಬಂದಿವೆ. ವಿಡಿಯೋದಲ್ಲಿ ಲಾಯ್ಡ್ ಅವರ ಕಾಮೆಂಟರಿ ಮತ್ತು ಪಂದ್ಯ ಪ್ರಸರಣದ ಹಕ್ಕುಗಳನ್ನು ಪಡೆದ ಕ್ರೀಡಾ ಚ್ಯಾನಲ್ನ ‘Decision Pending’ ಗ್ರಾಫಿಕ್ ಸಹ ಸೇರಿವೆ.
ಮ್ಯಾಂಚೆಸ್ಟರ್: ಪ್ರೇಮಪಾಶಕ್ಕೆ ಸಿಕ್ಕ ಜೋಡಿಗಳಿಗೆ ಮದುವೆ ಬಗ್ಗೆ ಪ್ರಪೋಸ್ ಮಾಡಲು ಹೊಸ ಸ್ಥಳ ಸಿಕ್ಕಿರುವಂತಿದೆ. ನಿಮಗೆ ನೆನಪಿರಬಹುದು, ಕಳೆದ ವರ್ಷ ಭಾರತದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂದ್ಯವೊಂದು ನಡೆಯುತ್ತಿದ್ದಾಗ ಭಾರತದ ಯುವಕನೊಬ್ಬ ಅಸ್ಟ್ರೇಲಿಯಾದ ತನ್ನ ಗರ್ಲ್ಫ್ರೆಂಡ್ಗೆ ‘ಮದುವೆಯಾಗ್ತೀಯಾ?’ ಎಂದು ಪ್ರಪೋಸ್ ಮಾಡಿದ್ದ, ಅವನ ಪ್ರಸ್ತಾವನೆಯಿಂದ ಆ ಆಸ್ಸೀ ಯುವತಿ ನಾಚಿ ನೀರಾಗಿ, ‘ಯೆಸ್!’ ಅಂದಿದ್ದನ್ನು ಕೆಮೆರಾಗಳು ಸೆರೆಹಿಡಿದಿದ್ದವು. ಅಂಥದ್ದೇ ಒಂದು ಘಟನೆ ಮಂಗಳವಾರದಂದು ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟಿ20ಐ ಪಂದ್ಯದ 9ನೇ ಓವರ್ ಜಾರಿಯಲ್ಲಿದ್ದಾಗ ನಡೆದಿದೆ. ಪಂದ್ಯ ನೋಡಲು ತನ್ನ ಪ್ರೇಯಸಿಯೊಂದಿಗೆ ಬಂದಿದ್ದ ಬ್ರಿಟಿಷ್ ಪುರುಷನೊಬ್ಬ ಆಕೆಗೆ, ‘ವಿಲ್ ಯೂ ಮ್ಯಾರಿ ಮೀ?’ ಅಂತ ಪ್ರಪೋಸ್ ಮಾಡಿದಾಗ ಆಕೆಯೂ ನಾಚಿ, ‘ಯೆಸ್!’ ಅಂದಿದ್ದಾಳೆ.
ಸುಮಾರು 20,000 ಪ್ರೇಕ್ಷಕರ ಸಮ್ಮುಖದಲ್ಲಿ ಇದು ನಡೆದಿದೆ. ಪ್ರಪೋಸ್ ಮಾಡಿದವನ ಹೆಸರು ಫಿಲ್ ಮತ್ತು ಅವರ ಪ್ರೇಯಸಿ ಹೆಸರು ಜಿಲ್ ಎಂದು ಕಾಮೆಂಟರಿ ಬಾಕ್ಸ್ನಲ್ಲಿದ್ದ ಡೇವಿಡ್ ಲಾಯ್ಡ್ ಹೇಳಿದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಟ್ವೀಟೊಂದರ ಮೂಲಕ ಈ ಜೋಡಿಗೆ ಶುಭಾಷಯ ಕೋರಿದೆ.
‘ಡಿಸೆಷನ್ ಪೆಂಡಿಂಗ್……ಆಕೆ ಎಸ್ ಅಂದಿದ್ದಾಳೆ! ಫಿಲ್ ಮತ್ತು ಜಿಲ್ಗೆ ಧನ್ಯವಾದಗಳು!’ ಅಂತ ಈಸಿಬಿ ಟ್ವೀಟ್ ಮಾಡಿದೆ.
Decision Pending… ⏳
She said YES! ?
Congrats Phil and Jill! ❤️ pic.twitter.com/SHj0iy45Pw
— England Cricket (@englandcricket) July 21, 2021
ಸದರಿ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆದ ಕೇವಲ 30 ನಿಮಿಷಗಳಲ್ಲಿ 70,000 ವ್ಯೂಸ್ ಬಂದಿವೆ. ವಿಡಿಯೋದಲ್ಲಿ ಲಾಯ್ಡ್ ಅವರ ಕಾಮೆಂಟರಿ ಮತ್ತು ಪಂದ್ಯ ಪ್ರಸರಣದ ಹಕ್ಕುಗಳನ್ನು ಪಡೆದ ಕ್ರೀಡಾ ಚ್ಯಾನಲ್ನ ‘Decision Pending’ ಗ್ರಾಫಿಕ್ ಸಹ ಸೇರಿವೆ.
‘ಹಲೋ ಇಲ್ಲೇನಾಗುತ್ತಿದೆ? ಮತ್ತೊಮ್ಮೆ ಅದೇ ಬೇಡ. ಬಿಗ್ ಸ್ಕ್ರೀನ್ನಲ್ಲಿ ಅದು ಕಾಣುತ್ತಿದೆ…….ಜಿಲ್ ಮತ್ತು ಫಿಲ್, ಡಿಸಿಷನ್ ಪೆಂಡಿಂಗ್ ಇದೆ….ಓಹ್ ಆಕೆ ಯೆಸ್ ಅಂದಿದ್ದಾಳೆ…..’ ಎಂದು ಲಾಯ್ಡ್ ತಮ್ಮ ಕಾಮೆಂಟರಿಯಲ್ಲಿ ವಿವರಿಸಿದ್ದಾರೆ.
ಕ್ರಿಕೆಟ್ ವಿಷಯಕ್ಕೆ ಬಂದರೆ, ಮೂರನೇ ಟಿ20ಐ ಪಂದ್ಯವನ್ನು ಗೆದ್ದ ಅತಿಥೇಯರು ಸರಣಿಯನ್ನು 2-1 ಅಂತರದಿಂದ ತಮ್ಮದಾಗಿಸಿಕೊಂಡರು.
ಬ್ಯಾಟಿಂಗ್ನಲ್ಲಿ ಮಿಂಚಿದ ಆರಂಭ ಆಟಗಾರ ಜೇಸನ್ ರಾಯ್ ಕೇವಲ 36 ಎಸೆತಗಳಲ್ಲಿ 64 ರನ್ ಚಚ್ಚಿ ತಮ್ಮ ತಂಡ 155 ರನ್ ಮೊತ್ತವನ್ನು ಹೆಚ್ಚು ಪ್ರಯಾಸ ಪಡದೆ ದಾಟುವುದನ್ನು ನೋಡಿಕೊಂಡರು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ವಿಕೆಟ್-ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 154 ರನ್ ಮೊತ್ತವನ್ನು ಕಲೆಹಾಕಿತು.
ಇಂಗ್ಲೆಂಡ್-ಪಾಕಿಸ್ತಾನ ನಡುವೆ ನಡೆದ ಎರಡು ಸೀಮಿತ ಓವರ್ಗಳ ಸರಣಿಯಲ್ಲಿ ಅತಿಥೇಯರು ನಿಚ್ಚಳ ಮೇಲುಗೈ ಸಾಧಿಸಿ ಒಡಿಐ ಸರಣಿಯನ್ನು 3-0 ಮತ್ತು ಟಿ20ಐ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಇದನ್ನೂ ಓದಿ: ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್
Published On - 8:53 pm, Wed, 21 July 21