Howzzat! ಕ್ರಿಕೆಟ್ ಕುರಿತಾದ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೇ? ಹಾಗಿದ್ರೆ ಟಿವಿ9 ನೀಡುತ್ತಿದೆ ಸುವರ್ಣಾವಕಾಶ
ಟಿವಿ9 ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ಯುಟ್ಯೂಬ್ ಹಾಗೂ ಫೇಸ್ಬುಕ್ ಮೂಲಕ ಕ್ರಿಕೆಟ್ ಕುರಿತಾದ ಹೆಚ್ಚಿನ ಮಾಹಿತಿ ದೊರೆಯಲಿದೆ. ಈ ಎರಡು ಪ್ಲಾಟ್ಫಾರ್ಮ್ನಲ್ಲೂ ಕ್ರಿಕೆಟ್ ಪಂದ್ಯಗಳಿರುವ ದಿನ ಲೈವ್ ಸಂವಾದ ಹಾಗೂ ವಿಶ್ಲೇಷಣೆ ಇರಲಿದೆ.
ನೀವು ಕ್ರಿಕೆಟ್ ಪ್ರೇಮಿಗಳಾ…ಅದರಲ್ಲೂ ಕನ್ನಡದಲ್ಲೇ ಕ್ರಿಕೆಟ್ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಲು ಬಯಸುತ್ತೀರಾ…ಅದರೊಂದಿಗೆ ಕ್ರಿಕೆಟ್ ಪಂದ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೀರಾ…ಹಾಗಿದ್ರೆ ಟಿವಿ9 ಕನ್ನಡ ಒದಗಿಸುತ್ತಿದೆ ಸುವರ್ಣಾವಕಾಶ. ಹೌದು, ಟಿವಿ9 ಕನ್ನಡ ಡಿಜಿಟಲ್ ‘ಹೌಝಾಟ್’ ಎನ್ನುವ ವಿಭಿನ್ನ ವೇದಿಕೆ ರೂಪಿಸಿದೆ. ಈ ಪ್ಲಾಟ್ಫಾರ್ಮ್ ಮೂಲಕ ನೀವು ಕನ್ನಡದಲ್ಲೇ ಲೈವ್ ಕ್ರಿಕೆಟ್ ಕಾಮೆಂಟರಿ ಕೇಳಬಹುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೆ ಕ್ರಿಕೆಟ್ ಬಗೆಗಿನ ಆಸಕ್ತಿಕರ ಪ್ರಶ್ನೆಗಳಿಗೆ ಉತ್ತರಿಸಬಹುದು. ಹಾಗೆಯೇ ಪ್ರತಿ ಪಂದ್ಯದ ವೇಳೆ ಕೇಳಲಾಗುವ ರಸಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಬಹುದು. ಈ ಮೂಲಕ ನಿಮ್ಮ ಕ್ರಿಕೆಟ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅದರ ಜೊತೆಗೆ ಇತರೊಂದಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಬಹುದು.
ಏನಿದು ಟಿವಿ9 ಹೌಝಾಟ್? ಟಿವಿ9 ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ಯುಟ್ಯೂಬ್ ಹಾಗೂ ಫೇಸ್ಬುಕ್ ಮೂಲಕ ಕ್ರಿಕೆಟ್ ಕುರಿತಾದ ಹೆಚ್ಚಿನ ಮಾಹಿತಿ ನೀಡಲಿದೆ. ಈ ಎರಡು ಪ್ಲಾಟ್ಫಾರ್ಮ್ನಲ್ಲೂ ಕ್ರಿಕೆಟ್ ಪಂದ್ಯಗಳಿರುವ ದಿನ ಲೈವ್ ಸಂವಾದ ಹಾಗೂ ವಿಶ್ಲೇಷಣೆ ಇರಲಿದೆ. ಈ ವೇಳೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಾಗೂ ಕರೆ ಮಾಡಿ ತಿಳಿಸಬಹುದು. ಉದಾಹರಣೆಗೆ ಪಂದ್ಯದ ಟಾಸ್ ಭವಿಷ್ಯ, ಪ್ಲೇಯಿಂಗ್ ಇಲೆವೆನ್, ಪಂದ್ಯದ ಸೋಲಿಗೆ ಕಾರಣ, ತಂಡದ ಆಯ್ಕೆ ಹೇಗಿರಬೇಕಿತ್ತು, ಯಾರಿಗೆ ಅವಕಾಶ ನೀಡಬೇಕಿತ್ತು ಎಂಬಿತ್ಯಾದಿ ವಿಷಯಗಳನ್ನು ಮಾಜಿ ಕ್ರಿಕೆಟರುಗಳೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು. ಅಥವಾ ಕಮೆಂಟ್ ಮೂಲಕ ತಿಳಿಸಿ ನಿಮ್ಮ ಕ್ರಿಕೆಟ್ ಪಾಂಡಿತ್ಯವನ್ನು ಇಡೀ ಕರ್ನಾಟಕಕ್ಕೆ ಪ್ರದರ್ಶಿಸಬಹುದು.
ಜುಲೈ 25 ರಂದು ಭಾರತ-ಶ್ರೀಲಂಕಾ ನಡುವೆ ಟಿ20 ಸರಣಿ ಆರಂಭವಾಗಲಿದ್ದು, ಅದರೊಂದಿಗೆ ಟಿವಿ9 ಡಿಜಿಟಲ್ ಹೌಝಾಟ್ ಕೂಡ ಶುರುವಾಗಲಿದೆ. ಸಂಜೆ 7 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, 08022360301/ 05 ನಂಬರ್ಗಳಿಗೆ ಕರೆ ಮಾಡುವ ಮೂಲಕ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಹಾಗಿದ್ರೆ ಪಂದ್ಯದ ವಿಶ್ಲೇಷಕರಿಗೆ ಹಾಗೂ ಮಾಜಿ ಕ್ರಿಕೆಟರುಗಳಿಗೆ ನಿಮ್ಮ ಪ್ರಶ್ನೆಗಳ ಬೌನ್ಸರ್ಗಳನ್ನು ಎಸೆಯಲು ನೀವು ರೆಡಿಯಾಗಿರುತ್ತೀರಿ ಅಲ್ಲವೇ..?
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್
Published On - 9:56 pm, Thu, 22 July 21