IND vs SL 3rd ODI Playing 11: ಟೀಮ್ ಇಂಡಿಯಾದಲ್ಲಿ 6 ಬದಲಾವಣೆ: ಕನ್ನಡಿಗನಿಗೆ ಸಿಕ್ಕ ಅವಕಾಶ..!
India vs Sri Lanka 3rd ODI Playing 11: ತಂಡದಲ್ಲಿ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್ಗೆ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗವನ್ನು ನವದೀಪ್ ಸೈನಿ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ಯುವ ಎಡಗೈ ವೇಗಿ ಚೇತನ್ ಸಕರಿಯಾ ಇದ್ದಾರೆ. ಹಾಗೆಯೇ ಸ್ಪಿನರ್ ಆಗಿ ರಾಹುಲ್ ಚಹರ್ ತಂಡದಲ್ಲಿದ್ದಾರೆ.
ಕೊಲಂಬೊದ ಆರ್. ಪ್ರೇಮದಾಸ್ ಸ್ಟೇಡಿಯಂನಲ್ಲಿ ಭಾರತ-ಶ್ರೀಲಂಕಾ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ (Team India) 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಹಾಗೆಯೇ 2ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ಗಳ ರೋಚಕ ಜಯದೊಂದಿಗೆ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ ಶಿಖರ್ ಧವನ್ (Shikhar Dhawan) ನೇತೃತ್ವದ ಯುವ ಪಡೆ. ಅತ್ತ ತವರಿನಲ್ಲಿ ಸರಣಿ ಸೋತಿರುವ ಶ್ರೀಲಂಕಾ ತಂಡವು ಅವಮಾನ ತಪ್ಪಿಸಿಕೊಳ್ಳಲು ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡವು 6 ಪ್ರಮುಖ ಬದಲಾವಣೆ ಮಾಡಿದ್ದು, ಅದರಂತೆ ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ದೀಪಕ್ ಚಹರ್, ಯಜುವೇಂದ್ರ ಚಹಲ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿದಿದ್ದಾರೆ. ಇವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಭುವಿ ಸ್ಥಾನದಲ್ಲಿ ನವದೀಪ್ ಸೈನಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇನ್ನು ಶ್ರೀಲಂಕಾ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಅದರಂತೆ ಪ್ರವೀಣ್ ಜಯವಿಕ್ರಮ, ಅಕಿಲಾ ದಾನಂಜಯ ಮತ್ತು ರಮೇಶ್ ಮೆಂಡಿಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
6 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಟೀಮ್ ಇಂಡಿಯಾ ಪರ ಆರಂಭಿಕ ಜೋಡಿಯಾಗಿ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬ್ಯಾಟ್ ಬೀಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ನಾಲ್ಕನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಆಡಲಿದ್ದಾರೆ. ಹಾಗೆಯೇ 5ನೇ ಕ್ರಮಾಂಕದಲ್ಲಿ ಬಲಗೈ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಬ್ಯಾಟ್ ಮಾಡಲಿದ್ದಾರೆ.
ಇನ್ನು ತಂಡದಲ್ಲಿ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್ಗೆ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗವನ್ನು ನವದೀಪ್ ಸೈನಿ ಮುನ್ನಡೆಸಲಿದ್ದು, ಅವರಿಗೆ ಸಾಥ್ ನೀಡಲು ಯುವ ಎಡಗೈ ವೇಗಿ ಚೇತನ್ ಸಕರಿಯಾ ಇದ್ದಾರೆ. ಹಾಗೆಯೇ ಸ್ಪಿನರ್ ಆಗಿ ರಾಹುಲ್ ಚಹರ್ ತಂಡದಲ್ಲಿದ್ದಾರೆ.
ಉಭಯ ತಂಡಗಳು ಹೀಗಿವೆ (India vs Sri Lanka 3rd ODI Playing 11):-
ಶ್ರೀಲಂಕಾ (Sri Lanka Playing 11): ಶ್ರೀಲಂಕಾ (ಇಲೆವೆನ್ ಪ್ಲೇಯಿಂಗ್): ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ದಾನಂಜಯ, ಜಯವಿಕ್ರಮ
ಭಾರತ (Team India Playing 11): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!
(India vs Sri Lanka 3rd ODI Playing 11)
Published On - 2:41 pm, Fri, 23 July 21