ವಿಂಡೀಸ್ ತಂಡದ ಸಪೋರ್ಟ್ ಸ್ಟಾಫ್ ಸದಸ್ಯನಿಗೆ ಕೊವಿಡ್-19 ಸೋಂಕು ದೃಢ, ಟಾಸ್ ನಂತರ ಆಸ್ಟ್ರೇಲಿಯ-ವಿಂಡೀಸ್ 2ನೇ ಒಡಿಐ ಪಂದ್ಯ ರದ್ದು!
ಈ ಪಂದ್ಯದಲ್ಲಿ ಆಸ್ಟ್ರೇಲಿಯ ಪರ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಬೇಕಿದ್ದ ವೇಗದ ಬೌಲರ್ ರೈಲೀ ಮೆರಿಡಿತ್ ತನ್ನ ಅವಕಾಶಕ್ಕಾಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. ಮಾಹಿತಿಗಳ ಪ್ರಕಾರ ಎರಡೂ ತಂಡಗಳ ಸದಸ್ಯರನ್ನು ಐಸೋಲೇಷನ್ನಲ್ಲಿ ಇಡಲಾಗುವುದು.
ಬಾರ್ಬಡೋಸ್: ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಬೇಕಿದ್ದ ಎರಡನೇ ಒಂದ ದಿನದ ಅಂತರರಾಷ್ಟ್ರೀಯ ಪಂದ್ಯ ಆಟಗಾರನಲ್ಲದ ಒಬ್ಬ ಸದಸ್ಯನಿಗೆ ಕೋವಿಡ್ ಸೋಂಕು ದೃಢಪಟ್ಟ ನಂತರ ಒಂದೂ ಎಸೆತ ಕಾಣದೆ ರದ್ದಾಯಿತು. ಗಮನಿಸಬೇಕಿರುವ ಅಂಶವೆಂದರೆ ಪಂದ್ಯವನ್ನು ಟಾಸ್ ಪ್ರಕ್ರಿಯೆ ಮುಗಿದ ನಂತರ ರದ್ದುಗೊಳಿಸಲಾಯಿತು. ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲುಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಟಾಸ್ ಆದ ನಂತರವೇ ವಿಷಯ ಬಯಲಿಗೆ ಬಂದಿದ್ದು ಮತ್ತು ಟೀಮುಗಳಿಗೆ ಮಾಹಿತಿಯನ್ನು ನೀಡಿದ್ದು.
ಈ ಪಂದ್ಯದಲ್ಲಿ ಆಸ್ಟ್ರೇಲಿಯ ಪರ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಬೇಕಿದ್ದ ವೇಗದ ಬೌಲರ್ ರೈಲೀ ಮೆರಿಡಿತ್ ತನ್ನ ಅವಕಾಶಕ್ಕಾಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. ಮಾಹಿತಿಗಳ ಪ್ರಕಾರ ಎರಡೂ ತಂಡಗಳ ಸದಸ್ಯರನ್ನು ಐಸೋಲೇಷನ್ನಲ್ಲಿ ಇಡಲಾಗುವುದು.
ಪಂದ್ಯ ರದ್ದಾದ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಒಂದು ಹೇಳಿಕೆಯನ್ನು ಬಿಡಿಗಡೆ ಮಾಡಿದೆ. ‘ವೆಸ್ಟ್ ಇಂಡೀಸ್ ತಂಡದ ಒಬ್ಬ ಆಟಗಾರನಲ್ಲದ ಸದಸ್ಯನಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿರುವುದರಿಂದ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಆಸ್ಟ್ರೇಲಿಯ ನಡುವೆ ಇಂದು ನಡೆಯಬೇಕಿದ್ದ ಸರಣಿಯ ಎರಡನೇ ಒಂದು ದಿನದ ಅಂತರರಾಷ್ಟ್ರಿಯ ಪಂದ್ಯವನ್ನು ರದ್ದುಗೊಳಿಸಲಾಗಿದೆ,’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಬಾರ್ಬಡೋಸ್ ಬ್ರಿಜ್ಟೌನ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಟಾಸ್ ನಡೆದ ನಂತರ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಕೋವಿಡ್ ಶಿಷ್ಟಾಚಾರದ ಹಿನ್ನೆಲೆಯಲ್ಲಿ ರಿಸಲ್ಟ್ಗಳು ಗೊತ್ತಾದ ನಂತರ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ಎರಡೂ ತಂಡದ ಎಲ್ಲ ಸದಸ್ಯರನ್ನು ಇಂದು ಮತ್ತೆ ಟೆಸ್ಟ್ಗೊಳಪಡಿಸಲಾಗುವುದು. ಟೆಸ್ಟ್ ರಿಸಲ್ಟ್ಗಳು ಸಿಕ್ಕ ನಂತರ ಸದರಿ ಪಂದ್ಯವನ್ನು ಮತ್ತೊಂದು ದಿನ ಆಡಿಸಬೇಕೇ ಇಲ್ಲವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಆಟಗಾರರ ಪಿಸಿಆರ್-ಟೆಸ್ಟ್ ರಿಸಲ್ಟ್ ಬರುವವರಗೆ ಅವರೆಲ್ಲ ತಮ್ಮ ಹೋಟೆಲ್ ರೂಮುಗಳಲ್ಲೇ ತಂಗುವರು,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಬೆಳವಣಿಗೆಯಿಂದಾಗಿ, ಆಸ್ಟ್ರೇಲಿಯಾದ ಮುಂದಿನ ಸರಣಿಗಳು ಸಹ ಪ್ರಭಾವಕ್ಕೊಳಗಾಗಿವೆ. ವಿಂಡೀಸ್ ವಿರುದ್ಧ ಜುಲೈ 24 ರಂದು ಕೊನೆಯ ಒಡಿಐ ಆಡಿದ ನಂತರ ಆಸ್ಟ್ರೇಲಿಯ ಬಾಂಗ್ಲಾದೇಶಗೆ ಪ್ರಯಾಣ ಬೆಳಸಿ ಆಗಸ್ಟ್ 3 ರಿಂದ 5-ಪಂದ್ಯಗಳ ಟಿ20 ಐ ಸರಣಿಯನ್ನು ಆಡಬೇಕಿದೆ.
Unfortunate. It’s the risk taken in these testing times. Hope the person is not to. Adversely affected.
— Ian Raphael Bishop (@irbishi) July 22, 2021
ಇದನ್ನೂ ಓದಿ: Howzzat! ಕ್ರಿಕೆಟ್ ಕುರಿತಾದ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೇ? ಹಾಗಿದ್ರೆ ಟಿವಿ9 ನೀಡುತ್ತಿದೆ ಸುವರ್ಣಾವಕಾಶ