ಚಾರ್ಮಾಡಿ ಘಾಟ್​ ಬಳಿ ಟ್ರಾಫಿಕ್​ ಜಾಮ್​; ಭಾರೀ ಮಳೆಯ ನಡುವೆ ವಾಹನ ಸವಾರರ ಪರದಾಟ

ಚಾರ್ಮಾಡಿ ಘಾಟ್​ ಬಳಿ ಟ್ರಾಫಿಕ್​ ಜಾಮ್​; ಭಾರೀ ಮಳೆಯ ನಡುವೆ ವಾಹನ ಸವಾರರ ಪರದಾಟ

TV9 Web
| Updated By: Skanda

Updated on: Jul 24, 2021 | 9:17 AM

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಹಿನ್ನೆಲೆ ಕೊಟ್ಟಿಗೆಹಾರದ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಮಸ್ಯೆ ಎದುರಿಸಿದ್ದಾರೆ.

ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್​ ಬಳಿ ರಸ್ತೆ ಕುಸಿತ ಸಂಭವಿಸಿದ ಪರಿಣಾಮ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಚಾರ್ಮಾಡಿ ಘಾಟ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಆದರೆ, ಚಾರ್ಮಾಡಿ ಮಾರ್ಗದಲ್ಲಿ ವಾಹನ ಸಂಚಾರ ಹೆಚ್ಚಳವಾಗುತ್ತಿದ್ದಂತೆಯೇ ಮರಗಳು ನೆಲಕ್ಕುರುಳಲಾರಂಭಿಸಿದ ಕಾರಣ ಹಠಾತ್ತಾಗಿ ಚಾರ್ಮಾಡಿ ಘಾಟ್ ಮಾರ್ಗವನ್ನು ಸಂಜೆ 7 ರಿಂದ ಬೆಳಗ್ಗೆ 6 ರ ತನಕ ಬಂದ್​ ಮಾಡುವುದಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಿನ್ನೆ ಆದೇಶಿಸಿದ್ದಾರೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಹಿನ್ನೆಲೆ ಕೊಟ್ಟಿಗೆಹಾರದ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಮಸ್ಯೆ ಎದುರಿಸಿದ್ದಾರೆ. ಡಿಸಿ ಆದೇಶ ಹಿನ್ನೆಲೆ ವಾಹನಗಳನ್ನ ಪೊಲೀಸರು ತಡೆ ಹಿಡಿದಿದ್ದರಿಂದ ವಿಷಯ ತಿಳಿಯದೇ ಆಗಮಿಸಿದ್ದ ಜನರು ಮಾರ್ಗಮಧ್ಯೆ ಪರದಾಡುವಂತಾಯಿತು. ಅಲ್ಲದೇ, ದಿಢೀರನೆ ರಸ್ತೆ ಸಂಚಾರ ಬಂದ್ ಮಾಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ ಕ್ಷಣಕ್ಷಣಕ್ಕೂ ನಿಲುವು ಬದಲಿಸಿದರೆ ಜನಸಾಮಾನ್ಯರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

(Travelers suffered from Traffic Jam in Charmadi Ghat in between Heavy Rain)

ಇದನ್ನೂ ಓದಿ:
ಕರ್ನಾಟಕದಲ್ಲಿ ಮಳೆ ಅನಾಹುತ, 21 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತ: ಡಿಸಿಎಂ ಗೋವಿಂದ ಕಾರಜೋಳ

Charmady Ghat: ಪ್ರಯಾಣಿಕರೇ ಗಮನಿಸಿ: ರಾತ್ರಿ ಸಂಚಾರಕ್ಕೆ ಚಾರ್ಮಾಡಿ ಘಾಟ್ ಬಂದ್: ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನಲ್ಲಿ ರಾತ್ರಿ 10 ಗಂಟೆಯವರೆಗೂ ವಾಹನ ಸಂಚಾರಕ್ಕೆ ಅವಕಾಶ