‘ಆಂಜನೇಯನ ಕೃಪೆಯಿಂದ ಸ್ವಲ್ಪದರಲ್ಲೇ ಬಚಾವ್​ ಆದ್ವಿ’; ಭಜರಂಗಿ 2 ಶೂಟಿಂಗ್ ಅವಘಡ ನೆನೆದ ನಿರ್ದೇಶಕ ಹರ್ಷ

ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್‌ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್​ ಆಗುತ್ತಿದೆ.

ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಶೂಟಿಂಗ್​ ವೇಳೆ ಸಾಕಷ್ಟು ವಿಘ್ನ ಎದುರಾಗಿತ್ತು. ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಚಿತ್ರದ ಪ್ರಮುಖ ದೃಶ್ಯ ಚಿತ್ರೀಕರಣ ಮಾಡುತ್ತಿದ್ದಾಗ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ನಾಲ್ಕು ದಿನದಲ್ಲಿ ‘ಭಜರಂಗಿ 2’ ಚಿತ್ರಕ್ಕೆ ಮೂರು ವಿಘ್ನ ಎದುರಾಗಿತ್ತು. ಈ ಬಗ್ಗೆ ಹರ್ಷ ಮಾತನಾಡಿದ್ದಾರೆ.

ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್‌ 10ರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರ ರಿಲೀಸ್​ ಆಗುತ್ತಿದೆ. ನಿರ್ದೇಶಕ ಹರ್ಷ ಹಾಗೂ ನಟ ಶಿವರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್​ ಆಗಿತ್ತು. ಇದೇ ಕಾಂಬಿನೇಷನ್​ನಲ್ಲಿ  ‘ಭಜರಂಗಿ 2’ ಸಿದ್ಧಗೊಂಡಿದೆ.  ಈ ಮೊದಲು ಮೇ 14ಕ್ಕೆ ‘ ಭಜರಂಗಿ 2’ ತೆರೆಗೆ ತರೋಕೆ ಪ್ಲ್ಯಾನ್​ ನಡೆದಿತ್ತು. ಸಿನಿಮಾ ಬಗ್ಗೆ , ಸಿನಿಮಾ ಶೂಟಿಂಗ್​ ಬಗ್ಗೆ ಹರ್ಷ ಅವರು ಮಾತನಾಡಿದ್ದಾರೆ. ಅವರು ಎದುರಿಸಿದ ಸಮಸ್ಯೆಗಳು ಏನು ಎನ್ನುವ ಬಗ್ಗೆ ಈ ವಿಡಿಯೋದಲ್ಲಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಸಲಗ’ ಮತ್ತು ‘ಭಜರಂಗಿ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

Click on your DTH Provider to Add TV9 Kannada