ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದು ಬಿದ್ದ ಗುಡ್ಡ; ಪವಾಡ ಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕರು

ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದು ಬಿದ್ದ ಗುಡ್ಡ; ಪವಾಡ ಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕರು

TV9 Web
| Updated By: Skanda

Updated on: Jul 24, 2021 | 10:10 AM

ದೂಧ್​​ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿಹೋಗಿತ್ತು. ಚಲಿಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣು ಹಳಿಯ ಮೇಲೆ ಬಂದು ಅಸ್ತವ್ಯಸ್ತವಾಗಿತ್ತು.

ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಅನೇಕ ಊರುಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ. ಕೆಲವೆಡೆ ಭೂ ಕುಸಿತ ಉಂಟಾಗುತ್ತಿದ್ದು, ನಿಂತ ನೆಲವೇ ಅಲುಗಾಡುತ್ತಿರುವುದರಿಂದ ಜನ ಅಕ್ಷರಶಃ ಕಂಗಾಲಾಗಿದ್ದಾರೆ. ನಿನ್ನೆ ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಡ್ಡ ಕುಸಿದಿದ್ದು, ಅದೃಷ್ಟವಶಾತ್​ ಯಾವುದೇ ಅವಘಡ ಸಂಭವಿಸಿಲ್ಲ. ದೂಧ್​​ಸಾಗರ್​ ಬಳಿ ರೈಲು ಬರುತ್ತಿದ್ದಾಗ ಏಕಾಏಕಿ ಗುಡ್ಡ ಕುಸಿದು ರೈಲು ಹಳಿ ತಪ್ಪಿ ಹೋಗಿತ್ತು.

ದೂಧ್​​ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿಹೋಗಿತ್ತು. ಚಲಿಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣು ಹಳಿಯ ಮೇಲೆ ಬಂದು ಅಸ್ತವ್ಯಸ್ತವಾಗಿತ್ತು. ಪ್ರಯಾಣಿಕರನ್ನು ಹೊತ್ತ ರೈಲಿನ ಮೇಲೆ ಗುಡ್ಡ ಕುಸಿದರೂ ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ತಕ್ಷಣವೇ ಸ್ಥಳಕ್ಕಾಗಮಿಸಿದ ರಕ್ಷಣಾ ಪಡೆ ಸಿಬ್ಬಂದಿ ಎಲ್ಲಾ 345 ಪ್ರಯಾಣಿಕರನ್ನು ಮಡ್ಗಾಂವ್‌ಗೆ ಸುರಕ್ಷಿತವಾಗಿ ವಾಪಸ್ ಕಳುಹಿಸಿದ್ದಾರೆ.

ಇದನ್ನೂ ಓದಿ:
ದೂಧ್​ಸಾಗರ್ ಬಳಿ ಗುಡ್ಡಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ಎಕ್ಸ್​ಪ್ರೆಸ್​ ರೈಲು

Mumbai Rains: ಭಾರೀ ಮಳೆ, ಭೂ ಕುಸಿತಕ್ಕೆ ಸಿಲುಕಿ 129 ಜನ ವಿಧಿವಶ; ಮುಳುಗುತ್ತಿದ್ದ ಬಸ್​ನಿಂದ 11 ಜನ ಪವಾಡ ಸದೃಶ ರೀತಿಯಲ್ಲಿ ಪಾರು

(Landslide Mangaluru Mumbai Express Train No injuries happened)