ದೂಧ್ಸಾಗರ್ ಬಳಿ ಗುಡ್ಡಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲು
ಹಳಿಗಳ ಮೇಲೆ ಮಣ್ಣು ಜರಿದ ಕಾರಣ ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಎಂದು ಮೂಲಗಳು ಹೇಳಿವೆ.
ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಧೂದ್‌ಸಾಗರ್ ಬಳಿ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಳಿಗಳ ಮೇಲೆ ಮಣ್ಣು ಜರಿದ ಕಾರಣ ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಎಂದು ಮೂಲಗಳು ಹೇಳಿವೆ.
ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಕಾರಣ ಮಂಗಳೂರು-ಮುಂಬೈ ರೈಲಿನ ಮಾರ್ಗ ಬದಲಾವಣೆ ಮಾಡಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೂಧ್ಸಾಗರ್-ಸೋನಾಲೆಂ ನಿಲ್ದಾಣಗಳ ನಡುವೆ ಸಂಚರಿಸುವಾಗ ಭೂಕುಸಿತದಿಂದಾಗಿ ರೈಲಿನ ಎಂಜಿನ್, ಒಂದು ಬೋಗಿ ಹಳಿತಪ್ಪಿತು. ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ರೈಲ್ವೆ ಇಲಾಖೆ, ಪ್ರಯಾಣಿಕರನ್ನು ರಕ್ಷಿಸಿ ಮರಳಿ ಅದೇ ರೈಲಿನಲ್ಲಿ ಗೋವಾದ ಮಡಗಾಂವ್‌ಗೆ ವಾಪಸ್ ಕಳುಹಿಸಿಕೊಟ್ಟರು.
Visuals of South Western Railway train which derailed near Doodhsagar due to landslide on the track. pic.twitter.com/uI7Zey30hh
— Goa News Hub (@goanewshub) July 23, 2021
A train passes through the mist of Doodhsagar waterfall, this week, as incessant rains hit the western ghats. (video courtesy: Unknown) pic.twitter.com/s0MhKbvNv6
— Goa News Hub (@goanewshub) July 23, 2021
ತಾಳಗುಪ್ಪ-ಮೈಸೂರು ರೈಲು ರದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈಲು ಹಳಿಗಳ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ರಾತ್ರಿ 8.20ಕ್ಕೆ ಹೊರಡಬೇಕಿದ್ದ ತಾಳಗುಪ್ಪ-ಮೈಸೂರು ರೈಲು ಸಂಚಾರವನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ 30 ರೈಲು ಸಂಚಾರವನ್ನು ಕೇಂದ್ರ ರೈಲ್ವೆ ವಲಯ ರದ್ದುಪಡಿಸಿದೆ. 12 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮುಂಬೈ ಮತ್ತು ಕೊಂಕಣ ಭಾಗದ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
(Maharashtra rains Landslide in Dudhsagar Mangalore Mumbai Train derails)
ಇದನ್ನೂ ಓದಿ: Mumbai Rains: ಮಹಾರಾಷ್ಟ್ರದ ರಾಯಘಡದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿ 36 ಜನ ಸಾವು
ಇದನ್ನೂ ಓದಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ; ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆ