ಟೊಕಿಯೋ ಒಲಂಪಿಕ್ಸ್​ 2020: ಒಟ್ಟು 202 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು ಭಾರತೀಯರೆಲ್ಲ ಗರ್ವದಿಂದ ತಲೆ ಎತ್ತುವಂತೆ ಮಾಡಿದ್ದಾರೆ!

ರಿಯೋ 2016 ಒಲಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಮೀರಾಬಾಯಿ, ಅಗ ನೀಡಿದ್ದ ನಿರಾಶಾದಾಯಕ ಪ್ರದರ್ಶನವನ್ನು ಟೊಕಿಯೋನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡಿದ್ದಾರೆ.

ಟೊಕಿಯೋ ಒಲಂಪಿಕ್ಸ್​ನಲ್ಲಿ ಭಾರತದ ಪದಕ ಬೇಟೆ ಕ್ರೀಡಾಕೂಟದ ಮೊದಲ ದಿನವೇ ಆರಂಭವಾಗಿದೆ. 26-ವರ್ಷ ವಯಸ್ಸಿನ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತಿ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್​ನಲ್ಲಿ 115 ಕೆಜಿ) 140 ಕೋಟಿ ಭಾರತೀಯರನ್ನು ಸಂತೋಷ ಸಾಗರದಲ್ಲಿ ಮುಳುಗಿಸಿದ್ದಾರೆ. ಅವರ ಸಾಧನೆಯನ್ನು ಮೆಚ್ಚಿ ಎಲ್ಲರಗಿಂತ ಮೊದಲು ಅಭಿನಂದನೆ ಸಲ್ಲಿಸಿದವರು ಪ್ರಧಾನ ಮಂತ್ರಿ ನರೆಂದ್ರ ಮೋದಿ. ಮಹಿಳಾ ವೇಟ್-ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಬಾರತಕ್ಕೆ ಮೊಟ್ಟ ಮೊದಲ ಬೆಳ್ಳಿ ಪದಕ ಗೆದ್ದು ಕೊಟ್ಟ ಕೀರ್ತಿಗೆ ಮೀರಾಬಾಯಿ ಪಾತ್ರರಾಗಿದ್ದಾರೆ. ಸಿಡ್ನಿ ಒಲಂಪಿಕ್ಸ್ 2000 ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು.

ರಿಯೋ 2016 ಒಲಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಮೀರಾಬಾಯಿ, ಅಗ ನೀಡಿದ್ದ ನಿರಾಶಾದಾಯಕ ಪ್ರದರ್ಶನವನ್ನು ಟೊಕಿಯೋನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸರಿಪಡಿಸಿಕೊಂಡಿದ್ದಾರೆ. 2017 ರಲ್ಲಿ ಅಮೆರಿಕದ ಅನಹೀಮ್ ನಡೆದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅವರು 48ಕೆಜಿ ವಿಭಾಗದಲ್ಲಿ 194 ಕೆಜಿ ಭಾರ ಎತ್ತಿ ಚಾಂಪಿಯನ್ ಎನಿಸಿಕೊಂಡಿದ್ದರು. 2018 ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್​ನಲ್ಲಿ ನಡೆದ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಭಾರತಕ್ಕೆ ಸ್ವರ್ಣ ಪದಕ ಗೆದ್ದಿದ್ದರು.

ಮಣಿಪುರದ ರಾಜಧಾನಿ ಇಂಫಾಲನಿಂದ ಸುಮಾರು 200 ಕಿಮೀ ದೂರದಲ್ಲಿರುವ ಒಂದು ಚಿಕ್ಕ ಗ್ರಾಮದಲ್ಲಿ ಹುಟ್ಟಿ ಮನೆಯಲ್ಲಿ ಉರುವಲು ಆಗಿ ಬಳಸಲು ಗುಡ್ಡಗಾಡು ಪ್ರದೇಶಗಳಿಂದ ಸೌದೆ ಹೊತ್ತು ತರುತ್ತಿದ್ದ ಮೀರಾಬಾಯಿ ಪ್ರಾಯಶ: ಆಗಲೇ ವೇಟ್​ಲಿಫ್ಟರ್ ಆಗಬೇಕೆಂಬ ಕನಸು ಕಂಡಿದ್ದರು. ಅಣ್ಣನ ಪ್ರೋತ್ಸಾಹದಿಂದ ಅದನ್ನು ಸಾಕಾರ ಮಾಡಿಕೊಂಡು ಈಗ ಇಡೀ ಭಾರತ ಗರ್ವ ಪಡುವಂತೆ ಮಾಡಿದ್ದಾರೆ. ಅಂದ ಹಾಗೆ, 2004 ಅಥೆನ್ಸ್ ಒಲಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರಖ್ಯಾತ ವೇಟ್-ಲಿಫ್ಟರ್ ಕುಂಜಾರಾಣಿ ದೇವಿ ಅವರು ಮೀರಾಬಾಯಿಯ ರೋಲ್ ಮಾಡೆಲ್.

ಇದನ್ನೂ ಓದಿ: Tokyo Olympics 2020: ಹಾಕಿಯಲ್ಲಿ ಗತವೈಭವಕ್ಕೆ ಮರಳಲು ಪ್ರಯತ್ನಿಸುತ್ತಿರುವ ಭಾರತ ತನ್ನ ಅಭಿಯಾನವನ್ನು ಶನಿವಾರದಿಂದ ಆರಂಭಿಸಲಿದೆ

Click on your DTH Provider to Add TV9 Kannada