ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನಡುಗಡ್ಡೆಯಂತೆ ಗೋಚರಿಸುತ್ತಿರುವ ಮುಂಬೈ; ಇನ್ನೂ ಎರಡು ದಿನ ಭಾರಿ ಮಳೆ ಸುರಿಯಲಿದೆ!

ರಸ್ತೆಬದಿ ಮತ್ತು ಕಚೇರಿಗಳ ಮುಂದೆ ನಿಲ್ಲಿಸಿದ್ದ ಹಲವಾರು ಕಾರು ಮತ್ತು ಬೈಕ್​ಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಮನೆಗಳು ಕುಸಿದಿವೆ. ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಭೂ ಮತ್ತು ಮನೆ ಕುಸಿತಗಳಿಂದಾಗಿ ಸುಮಾರು 40 ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮುಂಬೈ ಮಹಾನಗರಕ್ಕೆ ಯಾವುದೇ ಕಂಟಕ ತಪ್ಪಿದರೂ ವರುಣನ ಕಂಟಕ ಮಾತ್ರ ತಪ್ಪಲಾರದು. ಪ್ರತಿ ಮಾನ್ಸೂನ್ ಸೀಸನ್​ನಲ್ಲಿ ರಾಷ್ಟ್ರದ ವಾಣಿಜ್ಯ ರಾಜಧಾನಿ ಮಳೆ ಆರ್ಭಟಕ್ಕೆ ಸಿಲುಕಿ ಕಷ್ಟಪಡುತ್ತಿದೆ. ಕಳೆದ ಬುಧವಾರ ಭಾರತದ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಶನಿವಾರ ಮತ್ತೊಂದು ಸೂಚನೆ ನೀಡಿರುವ ಇಲಾಖೆಯು ಇನ್ನೂ ಎರಡು ದಿನಗಳ ಕಾಲ ಮುಂಬೈ ಕುಂಭದ್ರೋಣಕ್ಕೆ ಸಾಕ್ಷಿಯಾಗಲಿದೆ ಅಂತ ಎಚ್ಚರಿಸಿದೆ.

ನಗರದಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ. ನೋಡಿದೆಲ್ಲಡೆ ನೀರು, ಪ್ರಮುಖ ರಸ್ತೆಗಳಲ್ಲೂ ಮೊಣಕಾಲಿನ ಮಟ್ಟ ನೀರು ಹರಿಯುತ್ತಿದೆ. ರಸ್ತೆಬದಿ ಮತ್ತು ಕಚೇರಿಗಳ ಮುಂದೆ ನಿಲ್ಲಿಸಿದ್ದ ಹಲವಾರು ಕಾರು ಮತ್ತು ಬೈಕ್​ಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಮನೆಗಳು ಕುಸಿದಿವೆ. ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಭೂ ಮತ್ತು ಮನೆ ಕುಸಿತಗಳಿಂದಾಗಿ ಸುಮಾರು 40 ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮಳೆ ನೀರು ರೇಲ್ವೆ ಹಳಿಗಳ ಮೇಲೂ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಸೆಂಟ್ರಲ್ ರೇಲ್ವೇ ಕೆಲಭಾಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿದೆ. ನೀರಿನಲ್ಲಿ ಸಿಕ್ಕಿಕೊಂಡಿರುವ ಜನರನ್ನು ರಕ್ಷಿಸಲು ವಾಯುದಳದ ಹೆಲಿಕ್ಯಾಪ್ಟರ್, ನೌಕಾದಳದ 7 ರಕ್ಷಣಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ ಎರಡು ತಂಡಗಳು ಕಾರ್ಯನಿರತವಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತಾಡಿ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿನ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.

ಇದನ್ನೂ ಓದಿ: ಮುಂಬೈ ನಗರದ ಎರಡು ಕಡೆಗಳಲ್ಲಿ ಸಂಭವಿಸಿದ ಗೋಡೆ ಕುಸಿತ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Click on your DTH Provider to Add TV9 Kannada