ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆ, ಮುಧೋಳದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ, ಗುಡಿಯಲ್ಲಿ 4 ಅಡಿ ನೀರು

ಬಾಗಲಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆ, ಮುಧೋಳದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ, ಗುಡಿಯಲ್ಲಿ 4 ಅಡಿ ನೀರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 24, 2021 | 6:03 PM

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕರ್ನಾಟದ ಗಡಿ ಜಿಲ್ಲೆಗಳಿಗೂ ಪಸರಿಸಿದೆ. ಈಗಾಗಲೇ ವರದಿಯಾಗಿರುವಂತೆ, ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ.

ಇಲ್ಲಿರುವ ದೇವಸ್ಥಾನವನ್ನೊಮ್ಮೆ ನೋಡಿ. ಉತ್ತರ ಕರ್ನಾಟಕದ ಜನ ಇಲ್ಲಿಗೆ ಭೇಟಿ ನೀಡಿರಬಹುದು. ಇದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದಲ್ಲಿರುವ ಹೊಳೆಬಸವೇಶ್ವರ ದೇವಸ್ಥಾನ. ಮಾಚಕನೂರು ಗ್ರಾಮವು ಹೊಳೆ ಪಕ್ಕದಲ್ಲಿರುವುದರಿಂದ ದೇವಸ್ಥಾನವನ್ನು ಹೊಳೆಬಸವೇಶ್ವರ ದೇವಸ್ಥಾನ ಎಂದು ಕರೆಯುತ್ತಿರಬಹುದು. ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಗುಡಿಯನ್ನು ನೀರು ಆವರಿಸಿದೆ. ಸ್ಥಳೀಯರು ಹೇಳವ ಪ್ರಕಾರ ದೇವಸ್ಥಾನದೊಳಗೆ 4 ಅಡಿಗಳಷ್ಟು ನೀರು ಸೇರಿಕೊಂಡಿದೆ.

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕರ್ನಾಟದ ಗಡಿ ಜಿಲ್ಲೆಗಳಿಗೂ ಪಸರಿಸಿದೆ. ಈಗಾಗಲೇ ವರದಿಯಾಗಿರುವಂತೆ, ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಈ ಭಾಗಗಳಲ್ಲ್ಲಿರುವ ನದಿಗಳೆಲ್ಲ ಉಕ್ಕಿ ಹರಿಯುತ್ತಿವೆ. ಮಲಪ್ರಭಾ, ಘಟಪ್ರಭಾ, ವೇದ ಗಂಗೆ, ದೂದ ಗಂಗೆ, ಕೃಷ್ಣ ಮತ್ತು ಹಿರಣ್ಯ ಕೇಶಿ ನದಿಗಳಲ್ಲಿ ನೀರು ರಭಸದಿಂದ ಹರಿಯುತ್ತಿದೆ. ಈ ನದಿಗಳಿಗೆ ಅಡ್ಡಲಾಗಿರುವ ಕಟ್ಟಿರುವ ಸೇತುವೆಗಳು ಮುಳುಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಇದಕ್ಕೆ ಕಟ್ಟಿರುವ ಸೇತುವೆ ಮುಳುಗಲು ಇನ್ನೂ ಕೇವಲ 4 ಅಡಿ ಮಾತ್ರ ಬಾಕಿಯಿದೆ. ರಾಜ್ಯದ ಇತರ ಪ್ರಾಂತ್ಯಗಳ ಹಾಗೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಸುರಿಯುವ ನಿಲ್ಲುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ನದಿಗಳಲ್ಲಿ ಇನ್ನಷ್ಟು ನೀರು ಹರಿದು ಬರಬಹುದು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ; ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ