‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?

ಬಿಗ್​ ಬಾಸ್ ಎಂಟನೇ ಸೀಸನ್​ ಆರಂಭದಲ್ಲಿ ವೈಷ್ಣವಿ ತುಂಬಾನೇ ಸೈಲೆಂಟ್​ ಆಗಿದ್ದರು. ಅವರು ಎಲ್ಲರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈ ವಿಚಾರ ಇಟ್ಟುಕೊಂಡು ಮನೆ ಮಂದಿ ವೈಷ್ಣವಿ ಅವರನ್ನು ಟೀಕೆ ಮಾಡಿದ್ದರು.

‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?
‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 25, 2021 | 7:29 PM

ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಒಂದೇ ಒಂದು ದಿನವೂ ಧ್ಯಾನ ಹಾಗೂ ಯೋಗಾಸನ ಮಾಡುವುದನ್ನು ವೈಷ್ಣವಿ ಗೌಡ ತಪ್ಪಿಸಿಲ್ಲ. ಮನೆ ಹೊರಗೆ ಇದ್ದ ರೂಢಿಯನ್ನು ಅವರು ಇಲ್ಲಿಯೂ ಮುಂದುವರಿಸಿಕೊಂಡು ಹೋಗಿದ್ದಾರೆ. ಅವರು ಟೀ-ಕಾಫಿ ಕುಡಿಯಲ್ಲ. ಇದರ ಮಧ್ಯೆ, ಅವರಲ್ಲಿ ಮಹತ್ವದ ಬದಲಾವಣೆ ಆಗಿದೆ. ಇದು ಮನೆಯವರು ಹಾಗೂ ಸುದೀಪ್​ ಗಮನಕ್ಕೆ ಬಂದಿದೆ. ಇದನ್ನು ‘ಸೂಪರ್ ಸಂಡೆ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಚರ್ಚೆ ಮಾಡಲಾಗಿದೆ.

ಬಿಗ್​ ಬಾಸ್ ಎಂಟನೇ ಸೀಸನ್​ ಆರಂಭದಲ್ಲಿ ವೈಷ್ಣವಿ ತುಂಬಾನೇ ಸೈಲೆಂಟ್​ ಆಗಿದ್ದರು. ಅವರು ಎಲ್ಲರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈ ವಿಚಾರ ಇಟ್ಟುಕೊಂಡು ಮನೆ ಮಂದಿ ವೈಷ್ಣವಿ ಅವರನ್ನು ಟೀಕೆ ಮಾಡಿದ್ದರು. ‘ಅವರ ಗಾಡಿ ಇನ್ನೂ ಸ್ಟಾರ್ಟ್​ ಆಗಿಲ್ಲ ಎಂದು ಅನ್ನಿಸುತ್ತಿದೆ ಎಂದು’ ಕೆಲವರು ಅಭಿಪ್ರಾಯ ಹೊರ ಹಾಕಿದ್ದರು. ಇದನ್ನು ವೈಷ್ಣವಿ ಗಂಭೀರವಾಗಿ ಪರಿಗಣಿಸಿದ್ದರು. ಈ ಕಾರಣಕ್ಕೆ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಟಾಸ್ಕ್​ನಲ್ಲಿ ಅಗ್ರೆಸ್ಸಿವ್​ ಆಗಿ ಆಡೋಕೆ ಆರಂಭಿಸಿದ್ದರು.

ಈಗ ಎರಡನೇ ಸೀಸನ್​ನಲ್ಲಿ ವೈಷ್ಣವಿ ಮತ್ತಷ್ಟು ಬದಲಾಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಅವರು ಮತ್ತಷ್ಟು ಜಾಗೃತರಾಗಿದ್ದಾರೆ. ಇದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಕಳೆದ ಒಂದು ವಾರದಿಂದ ಅವರು ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.

‘ಗೆಲ್ಲಬೇಕು ಎನ್ನುವ ಹಠ ಬಂದಮೇಲೆ ವೈಷ್ಣವಿಗೆ ಕೋಪ ಬರೋಕೆ ಆರಂಭವಾಗಿದೆ’ ಎಂದು ಸುದೀಪ್​ ಪ್ರಶ್ನೆ ಮಾಡಿದರು. ‘ವೈಷ್ಣವಿಗೆ ಮೊದಲಿನಿಂದಲೂ ಕೋಪ ಬರುತ್ತಿತ್ತು. ಅದನ್ನು ಅವರು ಮನೆಯಲ್ಲಿ ತೋರಿಸಿರಲಿಲ್ಲ. ಈಗ ಅದನ್ನು ತೋರಿಸೋಕೆ ಆರಂಭಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ಪ್ರಶಾಂತ್​ ಹೇಳಿದರು.

ಮಂಜು ಕೂಡ ಸುದೀಪ್​ ಪ್ರಶ್ನೆಗೆ ಹೌದು ಎನ್ನುವ ಉತ್ತರ ಕೊಟ್ಟರು. ‘ಮೊದಲು ವೈಷ್ಣವಿ ಕೋಪ ತಡೆದುಕೊಳ್ಳುತ್ತಿದ್ದರು. ಆದರೆ, ಈಗ ಅದನ್ನು ತಡೆದುಕೊಂಡರೂ ಪ್ರಯೋಜನವಿಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ’ ಎಂದರು ಅವರು. ವೈಷ್ಣವಿಗೆ ಈ ಪ್ರಶ್ನೆ ಕೇಳಿದಾಗ ‘ನಾನು ಮನುಷ್ಯಳೇ ಅಲ್ಲವಾ ಸರ್​’ ಎಂದು ಮರು ಪ್ರಶ್ನೆ ಹಾಕಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ