ಬಿಗ್​ ಬಾಸ್​ ನಿಯಮ ಉಲ್ಲಂಘನೆ? ಇದೇ ಮೊದಲ ಬಾರಿಗೆ ಫೋನ್​ ಬಳಕೆ ಮಾಡಿದ ಶಮಂತ್​

Bigg Boss Kannada 8: ಬಿಗ್​ ಬಾಸ್​ ಮನೆಯಲ್ಲಿ ಸ್ಥಾಪನೆಯಾಗಿರುವ ಫೋನ್​ ಬೂತ್ ​ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಚರ್ಚೆ ಮಾಡಿದ್ದಾರೆ. ಶಮಂತ್​ ಬಿಗ್​ ಬಾಸ್​ ನಿಯಮ ಮೀರಿದ್ದಾರೆ ಎಂದು ಕೆಲವರು ನಗೆಚಟಾಕಿ ಹಾರಿಸಿದ್ದಾರೆ.

ಬಿಗ್​ ಬಾಸ್​ ನಿಯಮ ಉಲ್ಲಂಘನೆ? ಇದೇ ಮೊದಲ ಬಾರಿಗೆ ಫೋನ್​ ಬಳಕೆ ಮಾಡಿದ ಶಮಂತ್​
ಶಮಂತ್​ ಬ್ರೋ ಗೌಡ
Follow us
TV9 Web
| Updated By: Digi Tech Desk

Updated on:Jul 27, 2021 | 10:48 AM

ಬಿಗ್​ ಬಾಸ್​ ಸೇರಿದ ಮೇಲೆ ಹೊರ ಜಗತ್ತಿನ ಸಂಪರ್ಕ ಇರುವುದಿಲ್ಲ. ಅಲ್ಲಿ ಮೊಬೈಲ್​ ಬಳಕೆ ಮಾಡುವಂತಿಲ್ಲ. ಮನೆಯವರ ಸಂಪರ್ಕಕ್ಕೆ ಒಳಪಡುತ್ತೀರಿ ಎಂದರೂ ಅದು ಸಾಧ್ಯವಿಲ್ಲ. ಆದರೆ, ಇದೇ ಮೊದಲ ಬಾರಿಗೆ ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಫೋನ್​ನಲ್ಲಿ ಮಾತನಾಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಅಚ್ಚರಿಗೊಂಡಿದ್ದಾರೆ.

ಹಾಗಾದರೆ ಶಮಂತ್​ ಕದ್ದುಮುಚ್ಚಿ ಏನಾದರೂ ಮೊಬೈಲ್​ ಬಳಕೆ ಮಾಡಿದ್ರಾ? ಖಂಡಿತವಾಗಿಯೂ ಇಲ್ಲ. ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಫೋನ್​ಬೂತ್​ ಒಂದನ್ನು ಸ್ಥಾಪನೆ ಮಾಡಲಾಗಿದೆ. ಸೋಮವಾರದ (ಜುಲೈ 26) ಮುಂಜಾನೆ ಎಲ್ಲಾ ಸ್ಪರ್ಧಿಗಳು ನಿದ್ರೆ ಮಾಡುತ್ತಾ ಇದ್ದರು. ಈ ವೇಳೆ ಫೋನ್​ ರಿಂಗ್​ ಆಗಿದೆ.

ಎಲ್ಲಾ ಸ್ಪರ್ಧಿಗಳು ಮನೆ ಹೊರಗೆ ಹೋಗಿ ನೋಡಿದ್ದಾರೆ. ಈ ವೇಳೆ ಅಲ್ಲಿ ಟೆಲಿಫೋನ್​ಬೂತ್​ ಇರೋದು ಕಂಡು ಬಂದಿದೆ. ಈ ಟೆಲಿಫೋನ್​ ಬೂತ್​ನಲ್ಲಿ ಮೊದಲು ಪ್ರಶಾಂತ್​ ಹೋಗಿ ಮಾತನಾಡಿದ್ದಾರೆ. ಆದರೆ, ಆಗಲೇ ಕಟ್​ ಆಗಿತ್ತು. ನಂತರ ಶಮಂತ್​ ಹೋದಾಗ ಅಲ್ಲಿಂದ ಒಂದು ಪುರುಷ ಧ್ವನಿ ಕೇಳಿಸಿತು.

‘ಬಿಗ್​ ಬಾಸ್​ನಲ್ಲಿ ಇದೇ ಮೊದಲ ಬಾರಿಗೆ ನೀವು ಫೋನ್​ನಲ್ಲಿ ಮಾತಾಡ್ತಾ ಇದೀರಾ. ಹೇಗನಿಸ್ತಿದೆ’ ಎಂದು ಫೋನ್​ನಲ್ಲಿ ಮಾತನಾಡಿದ ವ್ಯಕ್ತಿ ಕೇಳಿದರು. ಶಮಂತ್​ ಇದಕ್ಕೆ ಸಾಕಷ್ಟು ಖುಷಿಪಟ್ಟರು. ಅಲ್ಲದೆ, ನೀವು ಬಿಗ್​ ಬಾಸ್​ ಅಲ್ವಾ ಎಂದು ಪ್ರಶ್ನೆ ಮಾಡಿದರು. ಆದರೆ, ಆ ಕಡೆಯಿಂದ ಉತ್ತರ ಬಂದಿಲ್ಲ. ನಂತರ ಬೆಳಗ್ಗೆ ಶುಭಾ ಹೋಗಿ ಕರೆ ಸ್ವೀಕರಿಸಿದರು. ಈ ವೇಳೆ ‘ಯಾವುದೇ ಸಂದೇಶ ಬರೋದಾದ್ರೂ ಈ ಫೋನ್​ ಮೂಲಕವೇ ಬರಲಿದೆ’ ಎಂದರು ಬಿಗ್​ ಬಾಸ್.

ಬಿಗ್​ ಬಾಸ್​ ಮನೆಯಲ್ಲಿ ಸ್ಥಾಪನೆಯಾಗಿರುವ ಫೋನ್​ ಬೂತ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಚರ್ಚೆ ಮಾಡಿದ್ದಾರೆ. ಶಮಂತ್​ ಬಿಗ್​ ಬಾಸ್​ ನಿಯಮ ಮೀರಿದ್ದಾರೆ ಎಂದು ಕೆಲವರು ನಗೆಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ:

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ

Published On - 7:19 am, Tue, 27 July 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್