ಗಂಡನ ಅಶ್ಲೀಲ ಸಿನಿಮಾ ಕೇಸ್ ಬಯಲಾದ ಬಳಿಕ ರಿಯಾಲಿಟಿ ಶೋಗೆ ಕೈ ಎತ್ತಿದ ಶಿಲ್ಪಾ ಶೆಟ್ಟಿ

ಜನಪ್ರಿಯ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದರು. ಆದರೆ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಶಿಲ್ಪಾ ಶೆಟ್ಟಿ ಈ ರಿಯಾಲಿಟಿ ಶೋ ಸೆಟ್​ಗೆ ಕಾಲಿಟ್ಟಿಲ್ಲ.

ಗಂಡನ ಅಶ್ಲೀಲ ಸಿನಿಮಾ ಕೇಸ್ ಬಯಲಾದ ಬಳಿಕ ರಿಯಾಲಿಟಿ ಶೋಗೆ ಕೈ ಎತ್ತಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
TV9kannada Web Team

| Edited By: Madan Kumar

Jul 27, 2021 | 4:25 PM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ಕಷ್ಟ ಕಾಲ ಶುರುವಾಗಿದೆ. ಇಷ್ಟು ದಿನ ತಲೆ ಎತ್ತಿಕೊಂಡು ಜೀವನ ನಡೆಸುತ್ತಿದ್ದ ಅವರು ಈಗ ಸಮಾಜದಲ್ಲಿ ತೀವ್ರ ಮುಜುಗರ ಎದುರಿಸುವಂತಾಗಿದೆ. ಅವರ ಪತಿ, ಉದ್ಯಮಿ ರಾಜ್​ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ನಿರ್ಮಾಣದ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ರಾಜ್​ ಕುಂದ್ರಾ ಪೊಲೀಸರ ಅತಿಥಿ ಆದಾಗಿನಿಂದಲೂ ಶಿಲ್ಪಾ ಶೆಟ್ಟಿಯ ದಿನಚರಿ ಬುಡಮೇಲಾಗಿದೆ. ಇಷ್ಟು ದಿನ ಆರಾಮಾಗಿ ನಡೆದುಕೊಂಡು ಬರುತ್ತಿದ್ದ ಅವರ ಕೆಲಸಗಳಿಗೆಲ್ಲ ಬ್ರೇಕ್​ ಬಿದ್ದಿದೆ. ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋನಿಂದ ಅವರು ಕಾಣೆ ಆಗಿಬಿಟ್ಟಿದ್ದಾರೆ. 

ಸೋನಿ ಟಿವಿಯ ಜನಪ್ರಿಯ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಆ ಕಾರ್ಯಕ್ರಮದಲ್ಲಿ ಜಡ್ಜ್​ ಆಗಿ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದರು. ಅವರು ತುಂಬ ಲವಲವಿಕೆಯಿಂದ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದರು. ಆದರೆ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡ ನಂತರದಿಂದ ಶಿಲ್ಪಾ ಶೆಟ್ಟಿ ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋ ಸೆಟ್​ಗೆ ಕಾಲಿಟ್ಟಿಲ್ಲ.

ರಾಜ್​ ಕುಂದ್ರಾ ಕೇಸ್​ ದಿನದಿಂದ ದಿನಕ್ಕೆ ಜಟಿಲ ಆಗುತ್ತಿದೆ. ಶಿಲ್ಪಾ ಶೆಟ್ಟಿ ಕೂಡ ಹಲವು ಬಾರಿ ಪೊಲೀಸರ ತನಿಖೆಗೆ ಒಳಪಡಬೇಕಾಗುತ್ತಿದೆ. ಅವರ ಮನೆ ಮೇಲೆ ಇತ್ತೀಚೆಗೆ ಪೊಲೀಸರು ದಾಳಿ ಮಾಡಿದ್ದರು. ಈ ಎಲ್ಲ ಘಟನೆಗಳಿಂದಾಗಿ ಶಿಲ್ಪಾ ಶೆಟ್ಟಿ ಮನೆ ಬಿಟ್ಟು ಹೊರಬರುತ್ತಿಲ್ಲ. ‘ಸೂಪರ್​ ಡ್ಯಾನ್ಸರ್​ 4’ ಕಾರ್ಯಕ್ರಮದ ಆಯೋಜಕರು ಹಲವು ಬಾರಿ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಕೂಡ ಶಿಲ್ಪಾ ಶೆಟ್ಟಿ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಗಾಗಿ ಜಡ್ಜ್​ ಸ್ಥಾನಕ್ಕೆ ಶಿಲ್ಪಾ ಬದಲು ಬೇರೆ ಸೆಲೆಬ್ರಿಟಿಗಳನ್ನು ಕರೆತರುವುದು ಅನಿವಾರ್ಯ ಆಗಿದೆ.

ಕಳೆದ ವಾರ ನಟಿ ಕರೀಷ್ಮಾ ಕಪೂರ್​ ಅವರು ಜಡ್ಜ್​ ಆಗಿ ಬಂದಿದ್ದರು. ಈ ವಾರ ಸ್ಟಾರ್​ ದಂಪತಿಗಳಾದ ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಅವರು ಜಡ್ಜ್​ ಸ್ಥಾನ ತುಂಬಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಜು.27ರವರೆಗೆ ನ್ಯಾಯಾಲಯವು ರಾಜ್​ ಕುಂದ್ರಾ ಅವರನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿತ್ತು. ಮಂಗಳವಾರ (ಜು.27) ವಿಚಾರಣೆ ನಡೆಸಿ, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಲ್ಲಿ ಇರಿಸಲು ಆದೇಶಿಸಲಾಗಿದೆ. ಜಾಮೀನು ಪಡೆಯಲು ಅವರು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ.

ಇದನ್ನೂ ಓದಿ:

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

‘ನನ್ನ ಗಂಡ ನಿರಪರಾಧಿ; ಅಶ್ಲೀಲ ಸಿನಿಮಾ ಮಾಡಿಲ್ಲ’; ರಾಜ್​ ಕುಂದ್ರಾ ಪರ ಶಿಲ್ಪಾ ಶೆಟ್ಟಿ ಬ್ಯಾಟಿಂಗ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada