‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’: ರಾಜ್​ ಕುಂದ್ರಾ

ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಆದರೂ ಕೂಡ ರಾಜ್ ಕುಂದ್ರಾ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.

‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’: ರಾಜ್​ ಕುಂದ್ರಾ
ರಾಜ್​ ಕುಂದ್ರಾ

ನೀಲಿ ಚಿತ್ರಗಳ (Porn) ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಎದುರಿಸುತ್ತಿರುವ ಉದ್ಯಮಿ, ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಹಲವು ಬಗೆಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜು.19ರಿಂದ ಜು.23ರವರೆಗೆ ಅವರನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಆದರೆ ತನಿಖೆ ಸಂದರ್ಭದಲ್ಲಿ ರಾಜ್​ ಕುಂದ್ರಾ (Raj Kundra) ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ. ಶುಕ್ರವಾರಕ್ಕೆ (ಜು.23) ಅವರ ಕಸ್ಟಡಿ ಅವಧಿ ಮುಗಿಯಲಿದೆ. ಆದರೆ ತನಿಖೆಗೆ ಸೂಕ್ತ ಸಹಕಾರ ನೀಡದ ಕಾರಣ ಇನ್ನಷ್ಟು ದಿನಗಳ ಕಾಲ ಅವರನ್ನು ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಪೊಲೀಸರು ಅನುಮತಿ ಕೇಳುವ ಸಾಧ್ಯತೆ ದಟ್ಟವಾಗಿದೆ.

ಅನೇಕ ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಆದರೂ ಕೂಡ ರಾಜ್ ಕುಂದ್ರಾ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಹೊಸ ವಾದವನ್ನು ಮಾಡುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರಗಳಲ್ಲ. ಅವು ಬರೀ ಕಾಮೋದ್ರೇಕ (Erotic) ಸಿನಿಮಾಗಳು’ ಎಂದು ರಾಜ್​ ಕುಂದ್ರಾ ಹೇಳುತ್ತಿದ್ದಾರೆ. ಈ ವಾದವನ್ನು ನ್ಯಾಯಾಲಯ ಯಾವ ರೀತಿ ಒಪ್ಪಲಿದೆ ಎಂಬ ಕೌತುಕ ಈಗ ಮೂಡಿದೆ.

ರಾಜ್​ ಕುಂದ್ರಾ ನಡೆಸುತ್ತಿದ್ದರು ಎನ್ನಲಾದ ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ಗೆಹನಾ ವಸಿಷ್ಠ ಕೂಡ ಅರೆಸ್ಟ್​ ಆಗಿದ್ದರು. ಈ ಬಗ್ಗೆ ಗೆಹನಾ ಪರ ವಕ್ತಾರರು ಕೆಲವೇ ದಿನಗಳ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದರು. ‘ಗೆಹನಾ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಅದನ್ನು ಅಶ್ಲೀಲ ಅಥವಾ ನೀಲಿ ಚಿತ್ರಗಳ ಜೊತೆ ಹೋಲಿಸಬಾರದು. ಮುಂಬೈ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಯಾರು ನಿಜವಾದ ಅಪರಾಧಿಗಳು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಸದ್ಯ ಗೆಹನಾ ವಸಿಷ್ಠ ಜಾಮೀನು ಪಡೆದು ಹೊರಬಂದಿದ್ದಾರೆ. ಗೆಹನಾ ಮತ್ತು ರಾಜ್​ ಕುಂದ್ರಾ ಅವರು ಈ ಸಿನಿಮಾಗಳನ್ನು ನೀಲಿ ಚಿತ್ರ ಅಥವಾ ಅಶ್ಲೀಲ ಸಿನಿಮಾ ಎಂದು ಒಪ್ಪಿಕೊಳ್ಳುವ ಬದಲು ಮಾದಕ ಅಥವಾ ಕಾಮೋದ್ರೇಕಿಸುವ ಸಿನಿಮಾಗಳು ಎನ್ನುತ್ತಿದ್ದಾರೆ.

ಇದನ್ನೂ ಓದಿ:

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​

ಬಾಲಿವುಡ್​​ನಷ್ಟು ದೊಡ್ಡದಾಗಿ ಪಾರ್ನ್​ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್​ ಕುಂದ್ರಾ ಕನಸಾಗಿತ್ತು

Click on your DTH Provider to Add TV9 Kannada