AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​

ದೇಶದ ಹಲವು ಭಾಗಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಆಸ್ತಿ ಹೊಂದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ಅವರು ಅನೇಕ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ.

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​
ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ
TV9 Web
| Edited By: |

Updated on: Jul 22, 2021 | 4:24 PM

Share

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾ ಈಗ ಪೊಲೀಸರ ವಶದಲ್ಲಿದ್ದಾರೆ. ನೀಲಿ ಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಎದುರಾಗಿದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಸಾಕ್ಷಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ. ರಾಜ್​ ಕುಂದ್ರಾ (Raj Kundra) ಬಂಧನದ ನಂತರ ಅವರ ಕುರಿತು ಅನೇಕ ಸುದ್ದಿಗಳು ಜೀವ ಪಡೆದುಕೊಂಡಿವೆ. ಹಲವು ಉದ್ಯಮಗಳನ್ನು ನಡೆಸುತ್ತಿರುವ ಅವರ ಒಟ್ಟು ಆಸ್ತಿ (Net Worth) ಎಷ್ಟಿರಬಹುದು ಎಂಬ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.

ರಾಜ್​ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ಐಷಾರಾಮಿ ಜೀವನ ನಡೆಸುತ್ತಿರುವ ಅವರು ಅನೇಕ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಅಶ್ಲೀಲ ಸಿನಿಮಾ ದಂಧೆಯಲ್ಲಿ ರಾಜ್​ ಕುಂದ್ರಾ ಸಿಕ್ಕಿಬಿದ್ದ ನಂತರ ಅವರ ನೆಟ್​ ವರ್ತ್​ ಬಗ್ಗೆ ಪ್ರಶ್ನೆ ಎದ್ದಿದೆ. ಒಂದು ಮೂಲದ ಪ್ರಕಾರ, ಅವರು 350 ಮಿಲಿಯನ್​ ಡಾಲರ್​ ಹೊಂದಿದ್ದಾರೆ. ಅಂದರೆ, ಸುಮಾರು 2600 ಕೋಟಿ ರೂ.! ಇನ್ನೊಂದು ಮೂಲದ ಪ್ರಕಾರ 550 ಮಿಲಿಯನ್​ ಡಾಲರ್​ (4 ಸಾವಿರ ಕೋಟಿ ರೂ.) ಮೊತ್ತದ ಆಸ್ತಿಯನ್ನು ರಾಜ್​ ಕುಂದ್ರಾ ಹೊಂದಿದ್ದಾರೆ.

ಇನ್ನು, ನಟಿ ಶಿಲ್ಪಾ ಶೆಟ್ಟಿ ಆದಾಯ ಕೂಡ ಭರ್ಜರಿಯಾಗಿದೆ. ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಒಂದು ಸಿನಿಮಾಗೆ ಅವರು 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿರುವ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ರಿಯಾಲಿಟಿ ಶೋಗಳಿಗೆ ಜರ್ಡ್​ ಆಗಿಯೂ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದು, ಅಲ್ಲಿಯೂ ಅವರಿಗೆ ಒಳ್ಳೆಯ ಸಂಭಾವನೆ ಸಿಗುತ್ತಿದೆ.

ದೇಶದ ಹಲವು ಭಾಗಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಆಸ್ತಿ ಹೊಂದಿದ್ದಾರೆ. ಪ್ರತಿ ವರ್ಷ ಅಂದಾಜು 120 ಕೋಟಿ ರೂ. ಆದಾಯ ರಾಜ್​ ಕುಂದ್ರಾಗೆ ಬರುತ್ತದೆ ಎನ್ನಲಾಗಿದೆ. ಐಪಿಎಲ್​ನಲ್ಲಿ ರಾಜಸ್ತಾನ್​ ರಾಯಲ್ಸ್​ ತಂಡದ ಸಹ-ಮಾಲೀಕತ್ವವನ್ನು ಈ ದಂಪತಿ ಹೊಂದಿದ್ದಾರೆ. ವಿಯಾನ್​ ಇಂಡಸ್ಟ್ರೀಸ್​, ಗ್ರೂಪ್​ಕೋ ಡೆವೆಲಪರ್ಸ್​, ಟಿಎಂಟಿ ಗ್ಲೋಬಲ್​, ಜೆಎಲ್​ ಸ್ಟ್ರೀಮ್​ ಪ್ರೈವೇಟ್​ ಲಿಮಿಡೆಟ್​ ಸೇರಿದಂತೆ ಹಲವು ಉದ್ಯಮಗಳನ್ನು ರಾಜ್​ ಕುಂದ್ರಾ ಹೊಂದಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​​ನಷ್ಟು ದೊಡ್ಡದಾಗಿ ಪಾರ್ನ್​ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್​ ಕುಂದ್ರಾ ಕನಸಾಗಿತ್ತು

ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್​ ವೈರಲ್​

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ