ಬಂಧನಕ್ಕೆ ಒಳಗಾಗದಿರಲು ಅಧಿಕಾರಿಗಳಿಗೆ 25 ಲಕ್ಷ ಲಂಚ ನೀಡಿದ್ದ ರಾಜ್ ಕುಂದ್ರಾ: ವರದಿ

Raj Kundra: ಬಂಧನವನ್ನು ತಪ್ಪಿಸುವುದಕ್ಕಾಗಿಯೇ ರಾಜ್ ಕುಂದ್ರಾ ದೊಡ್ಡ ಮೊತ್ತವನ್ನು ಅಧಿಕಾರಿಗಳಿಗೆ ನೀಡಿದ್ದರು ಎಂದು ವರದಿಯೊಂದು ಹೇಳಿದೆ. ಪಾರ್ನ್ ಸಿನಿಮಾ ದಂಧೆಯಲ್ಲಿ ಪ್ರಮುಖ ಕಿಂಗ್​ಪಿನ್ ಎಂದು ಕರೆಯಲ್ಪಡುವ, ತಲೆ ಮರೆಸಿಕೊಂಡಿರುವ ಆರೋಪಿ ಅರವಿಂದ್ ಶ್ರೀವಾಸ್ತವ ಈ ಕುರಿತು ಮಾರ್ಚ್​ನಲ್ಲಿ ಎಸಿಬಿಗೆ ದೂರು ನೀಡಿದ್ದು ಈಗ ಮುನ್ನೆಲೆಗೆ ಬಂದಿದೆ.

ಬಂಧನಕ್ಕೆ ಒಳಗಾಗದಿರಲು ಅಧಿಕಾರಿಗಳಿಗೆ 25 ಲಕ್ಷ ಲಂಚ ನೀಡಿದ್ದ ರಾಜ್ ಕುಂದ್ರಾ: ವರದಿ
ಉದ್ಯಮಿ ರಾಜ್​ ಕುಂದ್ರಾ (ಫೈಲ್ ಚಿತ್ರ)

ಮುಂಬೈ: ರಾಜ್ ಕುಂದ್ರಾ ಬಂಧನದಿಂದಾಗಿ ಮುಂಬೈ ನಗರದಲ್ಲಿ ನಡೆಯುತ್ತಿದ್ದ ವಯಸ್ಕ ಚಿತ್ರಗಳ ತಯಾರಿಕೆಯ ಕುರಿತು ಅಚ್ಚರಿಯ ಮಾಹಿತಿಗಳು ಹೊರಬರುತ್ತಿವೆ. ಇತ್ತೀಚೆಗೆ ಮಿಡ್-ಡೇ ವರದಿ ಮಾಡಿರುವ ಪ್ರಕಾರ, ರಾಜ್ ಕುಂದ್ರಾ ಅಪರಾಧ ತಡೆ ವಿಭಾಗದಿಂದ ಬಂಧನಕ್ಕೊಳಗಾಗದಿರಲು ಇದುವರೆಗೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಅಂದರೆ, ಕೇವಲ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಈ ಪರಿ ಮೊತ್ತವನ್ನು ಕುಂದ್ರಾ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಮಾಡಿರುವುದು ಮತ್ಯಾರೂ ಅಲ್ಲ, ಪಾರ್ನ್ ಸಿನಿಮಾ ದಂಧೆಯ ಪ್ರಮುಖ ಕಿಂಗ್​ಪಿನ್ ಅರವಿಂದ್ ಶ್ರೀವಾಸ್ತವ!

ಪಾರ್ನ್ ಸಿನಿಮಾ ದಂಧೆಯ ಪ್ರಮುಖ ಕಿಂಗ್​ಪಿನ್ ಎಂದು ಕರೆಯಲ್ಪಡುವ ಅರವಿಂದ್ ಶ್ರೀವಾಸ್ತವ (ಯಶ್ ಠಾಕೂರ್) ಭ್ರಷ್ಟಾಚಾರ ತಡೆ ವಿಭಾಗಕ್ಕೆ(ಎಸಿಬಿ) ನೀಡಿದ ದೂರಿನ ಆಧಾರದಲ್ಲಿ ವರದಿಯನ್ನು ತಯಾರಿಸಲಾಗಿದೆ. ಆದರೆ ಸ್ವತಃ ಅರವಿಂದ್ ಶ್ರೀವಾಸ್ತವ ತಲೆಮರೆಸಿಕೊಂಡಿದ್ದು ಪೊಲೀಸರಿಗೆ ಇನ್ನೂ ಪತ್ತೆಯಾಗಿಲ್ಲ. ಕಳೆದ ಮಾರ್ಚ್​ನಲ್ಲಿ ಅರವಿಂದ್​ಗೆ ಸೇರಿದ್ದ ‘ಫ್ಲಿಜ್ ಮೂವೀಸ್- ಈ ಮೊದಲು ನ್ಯೂಫ್ಲಿಕ್ಸ್ ಎಂದು ಕರೆಯಲ್ಪಡುತ್ತಿದ್ದದ್ದು- ಅನ್ನು ಪೊಲೀಸರು ಪತ್ತೆ ಮಾಡಿ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಸುಮಾರು 4.50ಕೋಟಿಗೂ ಅಧಿಕ ಮೊತ್ತದ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿ ಲಭಿಸಿತ್ತು.

ತರುವಾಯು ಭ್ರಷ್ಟಾಚಾರ ತಡೆ ವಿಭಾಗಕ್ಕೆ ಇಮೈಲ್ ಮುಖಾಂತರ ದೂರು ಸಲ್ಲಿಸಿದ್ದ ಅರವಿಂದ್ ಲಂಚದ ಕುರಿತು ಪ್ರಸ್ತಾಪಿಸಿದ್ದರು. ಅರವಿಂದ್ ನೀಡಿದ ಇಮೈಲ್ ದೂರಿನಲ್ಲಿ ಲಂಚದ ಕುರಿತು ಮಾಹಿತಿ ಮತ್ತು ಸ್ಕ್ರೀನ್​ಶಾಟ್​ಗಳು ಇದ್ದರೂ ಅದರಲ್ಲಿ ರಾಜ್ ಕುಂದ್ರಾ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಆದರೆ ಈ ಕುರಿತು ಬಲವಾಗಿ ಆರೋಪಿಸಿದ್ದ ಅರವಿಂದ್, ರಾಜ್ ಕುಂದ್ರಾ ಲಂಚ ನೀಡುತ್ತಿರುವುದರಿಂದಲೇ ಅವರನ್ನು ಬಂಧಿಸಲಾಗುತ್ತಿಲ್ಲ ಎಂದಿದ್ದರು. ಇದರ ಕುರಿತು ಎಸಿಬಿ ಮುಂಬೈ ಪೊಲೀಸರಿಂದ ಸ್ಪಷ್ಟೀಕರಣ ಕೇಳಿದ್ದರೂ ಸಹ ಅವರಿಂದ ಇದುವರೆಗೆ ಯಾವುದೇ ಉತ್ತರ ಸಲ್ಲಿಕೆಯಾಗಿರಲಿಲ್ಲ.

ಇದುವರೆಗೂ, ಎಸಿಬಿಗೆ ಅರವಿಂದ್ ನೀಡಿದ್ದ ದೂರು ತನಿಖೆಯಾಗದೇ ಹಾಗೇ ಉಳಿದುಕೊಂಡಿದೆ. ಹಿರಿಯ ಎಸಿಬಿ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಎಸಿಬಿ ಅಕ್ರಮ ಹಣ ವರ್ಗಾವಣೆ, ಲಂಚದ ಕುರಿತು ತನಿಖೆ ನಡೆಸುತ್ತದೆ. ಆದರೆ ಈ ಪ್ರಕರಣದಲ್ಲಿ ಹಣವು ಹಲವಾರು ಜನರಿಗೆ ವರ್ಗಾವಣೆಯಾಗಿದೆ. ಅರವಿಂದ್ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ಕೈಗೊಳ್ಳಲು ಮುಂಬೈ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

ಇದನ್ನೂ ಓದಿ: ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ

(A accused alleged to ACB that Raj Kundra paid 25 lakhs to avoid arrest says reports)