AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ

‘ಭಯಪಟ್ಟುಕೊಂಡು ಎಲ್ಲಿ ಅಡಗಿ ಕುಳಿತಿದ್ದೀಯ? ನೂರ್​ ಎಂಬ ನಿನ್ನ ಹೆಂಡತಿ ಮತ್ತು 17 ವರ್ಷದ ಮಗಳ ಜೊತೆ ದುಬೈನಲ್ಲಿ ಇದ್ದೀಯ ಎಂಬುದು ಇಡೀ ಭಾರತಕ್ಕೆ ಗೊತ್ತಿದೆ’ ಎಂದು ಸಲ್ಮಾನ್​ ಖಾನ್​ ಬಗ್ಗೆ  ನೆಟ್ಟಿಗನೊಬ್ಬ ಕಮೆಂಟ್​ ಮಾಡಿದ್ದಾನೆ.

ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ
ಸಲ್ಮಾನ್​ ಖಾನ್​
TV9 Web
| Edited By: |

Updated on: Jul 22, 2021 | 12:00 PM

Share

ಸಿನಿಮಾ ಮಾತ್ರವಲ್ಲದೆ, ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಸಲ್ಮಾನ್​ ಖಾನ್​ ಅವರು ಆಗಾಗ ಸುದ್ದಿ ಆಗುತ್ತಾರೆ. 55 ವರ್ಷ ಆಗಿದ್ದರೂ ಸಲ್ಲು ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಅವರ ಬದುಕಿನಲ್ಲಿ ಬಾಲಿವುಡ್​ನ ಅನೇಕ ನಟಿಯರು ಬಂದು ಹೋಗಿದ್ದಾರೆ. ಆದರೆ ಯಾರೂ ಪತ್ನಿಯ ಸ್ಥಾನವನ್ನು ತುಂಬಿಲ್ಲ. ಈ ನಡುವೆ ಸಲ್ಮಾನ್​ ಖಾನ್​ ಬಗ್ಗೆ ಹೊಸ ಗಾಸಿಪ್​ ಕೇಳಿಬಂದಿದೆ. ವಿದೇಶದಲ್ಲಿ ಅವರು ಗುಟ್ಟಾಗಿ ಸಂಸಾರ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ವಿಷಯ ಸ್ವತಃ ಸಲ್ಲು ಕಿವಿಗೂ ಬಿದ್ದಿದೆ. ಅದಕ್ಕೆ ಅವರು ಖಡಕ್​ ಆಗಿ ಉತ್ತರ ನೀಡಿದ್ದಾರೆ.

ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​ ಖಾನ್​ ನಡೆಸಿಕೊಡುವ ‘ಕ್ವಿಕ್​ ಹೀಲ್​ ಪಿಂಚ್​ ಬೈ ಅರ್ಬಾಜ್​’ ಕಾರ್ಯಕ್ರಮಕ್ಕೆ ಸಲ್ಲು ಅತಿಥಿಯಾಗಿ ಹೋಗಿದ್ದಾರೆ. ಅಲ್ಲಿ ಅವರಿಗೆ ಸೋಶಿಯಲ್​ ಮೀಡಿಯಾ ಕುರಿತಾಗಿ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅದೇ ರೀತಿ ಕೆಲವು ಟ್ರೋಲ್​ಗಳ ಬಗ್ಗೆಯೂ ತಿಳಿಸಲಾಯಿತು. ನೆಟ್ಟಿಗನೊಬ್ಬ ಸಲ್ಲು ಬಗ್ಗೆ ಮನಬಂದಂತೆ ಕಮೆಂಟ್​ ಮಾಡಿರುವುದು ಕೂಡ ಆಗಲೇ ಬಯಲಾಯಿತು.

‘ಭಯಪಟ್ಟುಕೊಂಡು ಎಲ್ಲಿ ಅಡಗಿ ಕುಳಿತಿದ್ದೀಯ? ನೂರ್​ ಎಂಬ ನಿನ್ನ ಹೆಂಡತಿ ಮತ್ತು 17 ವರ್ಷದ ಮಗಳ ಜೊತೆ ದುಬೈನಲ್ಲಿ ಇದ್ದೀಯ ಎಂಬುದು ಇಡೀ ಭಾರತಕ್ಕೆ ಗೊತ್ತಿದೆ. ಭಾರತದ ಜನರನ್ನು ಇನ್ನೂ ಎಲ್ಲಿಯವರೆಗೆ ಮೂರ್ಖರನ್ನಾಗಿ ಮಾಡುತ್ತೀಯಾ?’ ಎಂದು ಕಮೆಂಟ್​ ಮಾಡಲಾಗಿತ್ತು. ಅದನ್ನು ಕಂಡು ಸ್ವತಃ ಸಲ್ಮಾನ್​ ಖಾನ್​ ಅಚ್ಚರಿಪಟ್ಟಿದ್ದಾರೆ.

‘ಈ ಜನರಿಗೆ ಎಲ್ಲದರ ಬಗ್ಗೆ ಮಾಹಿತಿ ಇದೆ. ಇದೆಲ್ಲ ಅಸಂಬದ್ಧ. ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಇದನ್ನೆಲ್ಲ ಎಲ್ಲಿ ಪೋಸ್ಟ್​ ಮಾಡಿದ್ದಾರೆ ಎಂಬುದೂ ನನಗೆ ತಿಳಿದಿಲ್ಲ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಮೂಲಕ ನಾನು ಇಂಥವರಿಗೆ ಮರ್ಯಾದೆ ಕೊಡುತ್ತೇನೆ ಎಂದು ಅವರು ಅಂದುಕೊಂಡಿದ್ದಾರಾ? ನನಗೆ ಹೆಂಡತಿ ಇಲ್ಲ. ಭಾರತದಲ್ಲೇ ಇದ್ದೇನೆ. 9ನೇ ವಯಸ್ಸಿನಿಂದಲೂ ಗೆಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಇದ್ದೇನೆ. ಅದು ಇಡೀ ಭಾರತಕ್ಕೆ ಗೊತ್ತು. ಈ ವ್ಯಕ್ತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

32 ವರ್ಷದ ಕೆರಿಯರ್​ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್​ಗೆ ಸಹಿ ಹಾಕಿದ ಸಲ್ಮಾನ್​ ಖಾನ್​

ಮೈ ಕಾಣುವಂತೆ ಬಟ್ಟೆ ಧರಿಸಿ ಬಂದಿದ್ದ ಕತ್ರಿನಾ ಕೈಫ್​ ಜೊತೆ ಈ ರೀತಿ ನಡೆದುಕೊಂಡಿದ್ರಾ ಸಲ್ಮಾನ್​ ಖಾನ್​?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ