ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್​ ವೈರಲ್​

ಶಿಲ್ಪಾ ಶೆಟ್ಟಿ ಮಾಡಿದ ಒಂದು ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದೆ. ಯೋಗ ಬಗ್ಗೆ ಅವರು ಬರೆದುಕೊಂಡಿದ್ದರು. ಆದರೂ ಅದು ಯಾಕೋ ಕೊಂಚ ಮಾರ್ಮಿಕವಾಗಿದೆ ಎಂಬುದು ಹಲವರ ಅಭಿಪ್ರಾಯ.

ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್​ ವೈರಲ್​
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ (Raj Kundra) ಮೇಲೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ನೀಲಿ ಚಿತ್ರ (Porn) ತಯಾರಿಕೆಯಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇಡೀ ಬಾಲಿವುಡ್​ಗೆ ಶಾಕ್​ ನೀಡಿದೆ. ರಾಜ್​ ಕುಂದ್ರಾ ಜೊತೆ ಸಂಪರ್ಕ ಹೊಂದಿದ್ದ ಅನೇಕರಿಗೆ ನಡುಕ ಶುರು ಆಗಿದೆ. ಅದರ ಜೊತೆ ಶಿಲ್ಪಾ ಶೆಟ್ಟಿ (Shilpa Shetty) ಕೂಡ ಸುದ್ದಿ ಆಗುತ್ತಿದ್ದಾರೆ.

ಸೋಮವಾರ (ಜು.19) ರಾಜ್​ ಕುಂದ್ರಾ ಅವರು ಅರೆಸ್ಟ್​ ಆದರು. ಅದಕ್ಕೂ ಮುನ್ನ ಶಿಲ್ಪಾ ಶೆಟ್ಟಿ ಅವರು ಮಾಡಿದ ಒಂದು ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದೆ. ಹಾಗಂತ ಅದಕ್ಕೂ, ಅಶ್ಲೀಲ ಸಿನಿಮಾ ದಂಧೆಗೂ ಏನಾದರೂ ಸಂಬಂಧ ಇದೆಯಾ? ಒಳಾರ್ಥ ಬಲ್ಲವರು ಈ ಪ್ರಶ್ನೆಗೆ ಉತ್ತರಿಸಬೇಕು. ಅಂದಹಾಗೆ, ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿರುವುದು ಯೋಗ ಬಗ್ಗೆ. ಆದರೂ ಅದು ಯಾಕೋ ಕೊಂಚ ಮಾರ್ಮಿಕವಾಗಿದೆ ಎಂಬುದು ಹಲವರ ಅಭಿಪ್ರಾಯ. ಎಲ್ಲರಿಗೂ ತಿಳಿದಿರುವಂತೆ ಅವರು ಉತ್ತಮ ಯೋಗ ಪಟು. ಆ ಕುರಿತು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

‘ನಮ್ಮ ಸುತ್ತಮುತ್ತ ನಡೆಯುತ್ತಿರುವುದನ್ನು ನಾವು ಸದಾ ಕಾಲ ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಮ್ಮೊಳಗೆ ನಡೆಯುತ್ತಿರುವುದನ್ನು ನಾವು ಖಂಡಿತವಾಗಿ ಬದಲಾಯಿಸಬಹುದು. ಅದು ಯೋಗದಿಂದ ಮಾತ್ರ ಸಾಧ್ಯ. ತ್ರಾಟಕ ಮೆಡಿಟೇಷನ್​ ಮೂಲಕ ನಿಮ್ಮ ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳಿ. ಮನಸ್ಸನ್ನು ಶಾಂತಗೊಳಿಸುವ ಶಕ್ತಿಯನ್ನು ಪಡೆದುಕೊಳ್ಳಿ. ಬೇಡದ ಆಲೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದರು.

ರಾಜ್​ ಕುಂದ್ರಾ ಅರೆಸ್ಟ್​ ಆಗುತ್ತಿದ್ದಂತೆಯೇ ಅನೇಕ ನಟಿಯರ ಹೆಸರು ಕೂಡ ಹೊರಬರುತ್ತಿವೆ. ಅಶ್ಲೀಲ ಸಿನಿಮಾಗಳನ್ನು ತಯಾರಿಸಿ, ಆ್ಯಪ್​ಗಳ ಮೂಲಕ ಹಣ ಸಂಪಾದನೆ ಮಾಡುವ ಈ ಕೃತ್ಯದಲ್ಲಿ ಹಲವು ಸುಂದರಿಯರು ಭಾಗಿ ಆಗಿರುವ ಸಾಧ್ಯತೆ ದಟ್ಟವಾಗಿದೆ. ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ರಾಜ್​ ಕುಂದ್ರಾ ಜೊತೆ ಒಡನಾಟ ಹೊಂದಿದ್ದ ಅನೇಲ ನಟಿಯರು ಈಗ ಸುದ್ದಿ ಆಗುತ್ತಿದ್ದಾರೆ.

ಬಾಲಿವುಡ್​ ನಟಿ ಶರ್ಲಿನ್​ ಚೋಪ್ರಾ ಅವರು ಕೂಡ ನೀಲಿ ಚಿತ್ರಗಳ ದಂಧೆಯಲ್ಲಿ ಭಾಗಿ ಆಗಿದ್ದರು. ಈ ಬಗ್ಗೆ ಅವರನ್ನು ಪೊಲೀಸರು ಈ ಮೊದಲೇ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ರಾಜ್​ ಕುಂದ್ರಾ ಬಗ್ಗೆ ಶರ್ಲಿನ್​ ಚೋಪ್ರಾ ಬಾಯಿ ಬಿಟ್ಟಿದ್ದರು. ‘ಈ ದಂಧೆಗೆ ರಾಜ್​ ಕುಂದ್ರಾ ನನ್ನನ್ನು ನೂಕಿದರು’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಪ್ರತಿ ಪ್ರಾಜೆಕ್ಟ್​ನಲ್ಲಿ ಶರ್ಲಿನ್​ ಚೋಪ್ರಾಗೆ 30 ಲಕ್ಷ ರೂ. ಸಿಗುತ್ತಿತ್ತು. ಆ ರೀತಿ 15ರಿಂದ 30 ಪ್ರಾಜೆಕ್ಟ್​ಗಳಲ್ಲಿ ರಾಜ್​ ಕುಂದ್ರಾ ಜೊತೆ ಶರ್ಲಿನ್​ ಚೋಪ್ರಾ ಕೆಲಸ ಮಾಡಿದ್ದರು ಎಂಬುದು ಮೂಲಗಳ ಮಾಹಿತಿ.

ಇದನ್ನೂ ಓದಿ:

Raj Kundra: ಪತಿ ರಾಜ್​ ಕುಂದ್ರಾರ ನೀಲಿ ಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿ?!-ಮೌನ ಮುರಿದ ಮುಂಬೈ ಪೊಲೀಸರು

ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್​ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್​ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?

Click on your DTH Provider to Add TV9 Kannada