ಬಾಲಿವುಡ್​​ನಷ್ಟು ದೊಡ್ಡದಾಗಿ ಪಾರ್ನ್​ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್​ ಕುಂದ್ರಾ ಕನಸಾಗಿತ್ತು

ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ. ಈ ಬಂಧನದ ನಂತರ ಒಂದಾದಮೇಲೆ ಒಂದು ಸತ್ಯಗಳು ಹೊರ ಬೀಳುತ್ತಿವೆ.  

ಬಾಲಿವುಡ್​​ನಷ್ಟು ದೊಡ್ಡದಾಗಿ ಪಾರ್ನ್​ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್​ ಕುಂದ್ರಾ ಕನಸಾಗಿತ್ತು
ರಾಜ್​ ಕುಂದ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 21, 2021 | 9:07 PM

ಅಶ್ಲೀಲ ಸಿನಿಮಾ ಮಾಡಿ ಅದನ್ನು ವಿವಿಧ ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ. ಈ ಬಂಧನದ ನಂತರ ಒಂದಾದಮೇಲೆ ಒಂದು ಸತ್ಯಗಳು ಹೊರ ಬೀಳುತ್ತಿವೆ.  

ಬಾಲಿವುಡ್​​ನಷ್ಟು ದೊಡ್ಡದಾಗಿ ಪಾರ್ನ್​ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್​ ಕುಂದ್ರಾ ಕನಸಾಗಿತ್ತಂತೆ! ಇದಲ್ಲದೆ, ಪಾರ್ನ್​ ವಿಡಿಯೋ ಲೈವ್​ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಭಾರೀ ಬೇಡಿಕೆ ಬರಲಿದೆ ಎಂಬುದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತು ಎಂದು ವರದಿಯಾಗಿದೆ.

ರಾಜ್ ಕುಂದ್ರಾ ಮತ್ತು ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಅವರ ಸಹೋದರ ಇಬ್ಬರೂ ಸೇರಿ ಕೆನ್ರಿನ್ ಹೆಸರಿನ ಕಂಪನಿಯನ್ನು ಆರಂಭಿಸಿದ್ದರು. ನೀಲಿ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿ ನಂತರ ವಿ ಟ್ರಾನ್ಸ್‌ಫರ್ (ಫೈಲ್ ವರ್ಗಾವಣೆ ಸೇವೆ) ಮೂಲಕ ಅದು ಈ ಕಂಪನಿ ಸೇರುತ್ತಿತ್ತು. ಭಾರತದ ಸೈಬರ್ ಕಾನೂನಿಂದ ತಪ್ಪಿಸಿಕೊಳ್ಳಲು ಈ ಕಂಪನಿಯನ್ನು ವಿದೇಶದಲ್ಲಿ ನೋಂದಾಯಿಸಿಕೊಳ್ಳಲಾಗಿತ್ತು.

ರಾಜ್ ಬಂಧನದ ನಂತರ, ಅಕ್ಟೋಬರ್​ನಲ್ಲಿ ನಡೆದ ಕೆಲವು ವಾಟ್ಸಾಪ್ ಚಾಟ್‌ಗಳು ಹೊರ ಬಂದಿವೆ. ಪಾರ್ನ್​ ಸಿನಿಮಾ ವ್ಯವಹಾರದಿಂದ ರಾಜ್ ಕುಂದ್ರಾ ಸಾಕಷ್ಟು ಹಣ ಸಂಪಾದಿಸಿದ್ದರು ಎಂಬುದು ಬಹಿರಂಗವಾಗಿದೆ. ‘ಎಚ್ ಅಕೌಂಟ್ಸ್’  ಹೆಸರಿನ ಗ್ರೂಪ್​ನ ಚಾಟ್​ಗಳು ಇವಾಗಿದೆ. ಇದರ ಅಡ್ಮಿನ್​ ರಾಜ್ ಕುಂದ್ರಾ. ಈ ಗ್ರೂಪ್​ನಲ್ಲಿ ರಾಜ್ ಅವರು ತಮ್ಮ ಸಂಬಂಧಿ ಮತ್ತು ಕೆನ್ರಿನ್ ಪ್ರೊಡಕ್ಷನ್ ಹೌಸ್ ಅಧ್ಯಕ್ಷ ಪ್ರದೀಪ್ ಭಕ್ಷಿ ಅವರೊಂದಿಗೆ ಹಣದ ವ್ಯವಹಾರದ ಬಗ್ಗೆ ಚರ್ಚಿಸಿರುವುದು ಕಂಡು ಬಂದಿದೆ. ಸಿನಿಮಾದಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ಹಣ ಬರುತ್ತಿತ್ತು ಎಂಬುದು ಚಾಟ್​ನಿಂದ ಗೊತ್ತಾಗಿದೆ.

ಈ ಗ್ರೂಪ್​ನಲ್ಲಿ ಐದು ಜನರಿದ್ದಾರೆ. ಪ್ರದೀಪ್ ಮತ್ತು ರಾಜ್ ಕುಂದ್ರಾ ನಡುವೆ ವ್ಯವಹಾರದಲ್ಲಿನ ಗಳಿಕೆ, ಮಾರ್ಕೆಟಿಂಗ್ ತಂತ್ರ, ಅಶ್ಲೀಲ ಸಿನಿಮಾದಲ್ಲಿ ನಟಿಸಿದವರಿಗೆ ಸಂಭಾವನೆ ಸಿಕ್ಕಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಮುಕ್ತ ಚರ್ಚೆ ನಡೆದಿದೆ. ಇದು ಪೊಲೀಸರಿಗೆ ಮಹತ್ವದ ದಾಖಲೆಯಾಗಿದೆ.

ಇದನ್ನೂ ಓದಿ: ‘ನೀವು ಬಂದು ಲೈವ್​ ನೋಡಬೇಕು’; ಅಂಜಿಕ್ಯಾ ರಹಾನೆಗೆ ರಾಜ್​ ಕುಂದ್ರಾ ಹೀಗೆ ಹೇಳಿದ್ರು

Raj Kundra: ಆ ಒಂದು ‘ಬಂಗಲೆ’ಯಿಂದಾಗಿ ರಾಜ್​ ಕುಂದ್ರಾ ಸಿಕ್ಕಿ ಹಾಕಿಕೊಂಡರಾ? ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ