ನೀಲಿಚಿತ್ರ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನದ ನಂತರದಲ್ಲಿ ಸಾಕಷ್ಟು ಹಳೆಯ ಟ್ವೀಟ್ಗಳು ವೈರಲ್ ಆಗಿವೆ. ಅಲ್ಲದೆ, ಈ ಬಗ್ಗೆ ಮೀಮ್ಗಳು ಕೂಡ ಹರಿದಾಡಿದೆ.
ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಹಾಗೂ ರಾಜ್ ಕುಂದ್ರಾ 2012ರಲ್ಲಿ ಟ್ವೀಟ್ ಮೂಲಕ ಸಂಭಾಷಣೆ ನಡೆಸಿದ್ದರು. ರಾಜ್ ಬಗ್ಗೆ ರಹಾನೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ, ಎಲ್ಲರೂ ಈ ಬಗ್ಗೆ ನಗೆಚಟಾಕಿ ಹಾರಿಸುತ್ತಿದ್ದಾರೆ. ಅಷ್ಟಕ್ಕೂ ರಹಾನೆ ಅವರು ರಾಜ್ ಕುಂದ್ರಾ ಅವರನ್ನು ಹೊಗಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಹಾನೆ 2012ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. 2019ರವರೆಗೂ ರಹಾನೆ ಆರ್ಆರ್ ತಂಡದ ಪರವಾಗಿಯೆ ಆಡಿದ್ದಾರೆ. 2012ರಲ್ಲಿ ಆರ್ಆರ್ ತಂಡದ ಸಹ ಮಾಲೀಕರಾಗಿದ್ದರು ರಾಜ್ ಕುಂದ್ರಾ. ಈ ಅವಧಿಯಲ್ಲಿ ರಹಾನೆ ಮಾಡಿದ ಟ್ವೀಟ್ ಈಗ ಟ್ರೋಲ್ ಪೇಜ್ಗಳಿಗೆ ಆಹಾರವಾಗಿದೆ.
ಟ್ವೀಟ್ನಲ್ಲೇನಿತ್ತು?
‘ರಾಜ್ ಕುಂದ್ರಾ ಸರ್ ನೀವು ಬಹಳ ಉತ್ತಮ ಕೆಲಸ ಮಾಡುತ್ತಿದ್ದೀರಿ’ ಎಂದು ರಹಾನೆ ಹೇಳಿದ್ದರು. ‘ರಹಾನೆ ಅವರೇ ಧನ್ಯವಾದಗಳು. ನೀವು ಒಮ್ಮೆ ಬಂದು ಲೈವ್ ನೋಡಬೇಕು’ ಎಂದು ಉತ್ತರಿಸಿದ್ದಾರೆ ರಾಜ್. ಇದಕ್ಕೆ ‘ಖಂಡಿತವಾಗಿಯೂ ನೋಡುತ್ತೇನೆ’ ಎನ್ನುವ ಉತ್ತರ ರಹಾನೆ ಕಡೆಯಿಂದ ಬಂದಿದೆ.
If Ajinkya Rahane wasn’t a Cricketer https://t.co/r53XLlELyC pic.twitter.com/U9ese2F0W6
— 𝐃𝐞𝐯 (@Mohali_Monster) July 19, 2021
ಮುಂಬೈ ಪೊಲೀಸರು ಹೇಳಿದ್ದೇನು?
‘ಫೆಬ್ರವರಿ 2021ರಂದು ಕ್ರೈಮ್ ಬ್ರ್ಯಾಂಚ್ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್ಗಳ ಮೂಲಕ ಇದನ್ನು ಅಪ್ಲೋಡ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಇಂದು (ಜುಲೈ 19) ನಾವು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರುವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Sagarika Shona: ರಾಜ್ ಕುಂದ್ರಾ ನಗ್ನವಾಗಿ ಆಡಿಶನ್ ಕೊಡಲು ಹೇಳಿದ್ದರು: ನಟಿ ಸಾಗರಿಕಾ ಶೋನಾ ಗಂಭೀರ ಆರೋಪ