ನಾನು ರಾಜ್ ಕುಂದ್ರಾ ಅವರ ಒಂದು ಆಪ್ ನೋಡಿದ್ದೇನೆ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ: ಮಿಕಾ ಸಿಂಗ್

Raj Kundra: ರಾಜ್ ಕುಂದ್ರಾ ಅವರ ಒಂದು ಆಪ್​ ಅನ್ನು ನೋಡಿದ್ದೇನೆ. ಅದರಲ್ಲಿ ಅಂಥದ್ದೇನೂ ಇರಲಿಲ್ಲ ಎಂದಿದ್ದಾರೆ ಭಾರತದ ಖ್ಯಾತ ಗಾಯಕ ಮಿಕಾ ಸಿಂಗ್!

ನಾನು ರಾಜ್ ಕುಂದ್ರಾ ಅವರ ಒಂದು ಆಪ್ ನೋಡಿದ್ದೇನೆ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ: ಮಿಕಾ ಸಿಂಗ್
ಮಿಕಾ ಸಿಂಗ್ ಮತ್ತು ರಾಜ್ ಕುಂದ್ರಾ (ಸಾಂದರ್ಭಿಕ ಚಿತ್ರ)

ಬಾಲಿವುಡ್​​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ತಯಾರಿಕೆ ಮತ್ತು ಅದರ ಹಂಚುವಿಕೆಯ ಆರೋಪದಲ್ಲಿ ಬಂಧಿಸಲಾಗಿದೆ. ಭಾರತದ ಖ್ಯಾತ ಗಾಯಕ ಮಿಕಾ ಸಿಂಗ್ ರಾಜ್ ಕುಂದ್ರಾ ಅವರ ಒಂದು ಆಪ್ ಅನ್ನು ತಾನು ನೋಡಿದ್ದೇನೆ ಎಂದು ಹೇಳಿಕೆ ನೀಡಿ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ ಎಂದಿದ್ದಾರೆ. ಈ ಮಾತು ಈಗ ಎಲ್ಲರ ಗಮನ ಸೆಳೆದಿದೆ.

ಗಾಯಕ ಮಿಕಾ ಸಿಂಗ್ ಅವರು ಮುಂಬೈನಲ್ಲಿ ನೀಡಿದ ಹೇಳಿಕೆಯಲ್ಲಿ, ರಾಜ್ ಕುಂದ್ರಾ ಅವರನ್ನು ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೊಗಳಿದ್ದಾರೆ. ರಾಜ್ ಕುಂದ್ರಾ ಅವರು ಆಪ್​ಗಳ ಮೂಲಕ ಹಂಚಿಕೆ ಮಾಡುತ್ತಿದ್ದರು ಎನ್ನಲಾದ ಆರೋಪದ ಕುರಿತು ಉತ್ತರಿಸಿದ ಅವರು, “ನನಗೆ ಕುಂದ್ರಾರ ಇತರ ಆಪ್​ಗಳ ಕುರಿತು ಅಷ್ಟಾಗಿ ತಿಳಿದಿಲ್ಲ. ಆದರೆ  ಅವರ ಒಂದು ಆಪ್ ಅನ್ನು ನೋಡಿದ್ದೇನೆ. ಅದರಲ್ಲಿ ಅಶ್ಲೀಲವಾಗಿದ್ದು ಏನೂ ಇರಲಿಲ್ಲ. ಈಗ ತನಿಖೆ ನಡೆಯುತ್ತಿರುವುದು ನಡೆಯಲಿ; ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂಬ ನಂಬಿಕೆ ನನಗಿದೆ” ಎಂದು ಮಿಕಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಅಶ್ಲೀಲ ದೃಶ್ಯವನ್ನು ಚಿತ್ರೀಕರಿಸಿ ಅದನ್ನುಅವರ ಒಡೆತನದ ಆಪ್​ಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಕುಂದ್ರಾ ಒಡೆತನದ ಆಪ್​ಗಳ ಕುರಿತು ಇದೇ ಮೊದಲ ಬಾರಿಗೆ ತಾರೆಯೊಬ್ಬರು ಧನಾತ್ಮಕವಾಗಿ ಮಾತನಾಡಿದ್ದಾರೆ. ಆದ್ದರಿಂದಲೇ ಮಿಕಾ ಸಿಂಗ್ ಅವರ ಮಾತುಗಳು ಮಹತ್ವ ಪಡೆದುಕೊಂಡಿದೆ.

ರಾಜ್ ಕುಂದ್ರಾ (45) ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಒಟ್ಟು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ಕುಂದ್ರಾ ಮೇಲೆ ಬಲವಾದ ಸಾಕ್ಷಾಧಾರಗಳು ಲಭ್ಯವಾಗಿರುವುದರಿಂದಲೇ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಅವರ ಬಂಧನಾನಂತರ ಹಲವು ನಟಿಯರು ಕುಂದ್ರಾ ಅವರಿಂದ ದೌರ್ಜನ್ಯಕ್ಕೊಳಗಾದ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ಶಿಲ್ಪಾ ಶೆಟ್ಟಿ ಅವರ ಕೈವಾಡವಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಅಬ್ಬಾ.. ನೀಲಿಚಿತ್ರಗಳಿಂದ ರಾಜ್​ ಕುಂದ್ರಾ ಗಳಿಸುತ್ತಿದ್ದ ಹಣ ಇಷ್ಟೊಂದಾ? ಲೀಕ್​ ಆಯ್ತು ವಾಟ್ಸಾಪ್​ ಚ್ಯಾಟ್​

Raj Kundra: ಪತಿ ರಾಜ್​ ಕುಂದ್ರಾರ ನೀಲಿ ಚಿತ್ರ ದಂಧೆಯಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿ?!-ಮೌನ ಮುರಿದ ಮುಂಬೈ ಪೊಲೀಸರು

(I have seen Raj Kundra s one app and there is nothing in it says Mika Singh)