ತಾಯಿ ಫೋಟೋ ಜೊತೆ ಸೋನು ಸೂದ್​ ಭಾವುಕ ಪತ್ರ; ಮನಮುಟ್ಟುವ ಸಾಲುಗಳು ಇಲ್ಲಿವೆ..

ತಾಯಿಯ ಸುಂದರವಾದ ಮೂರು ಫೋಟೋಗಳನ್ನು ಸೋನು ಸೂದ್ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ. ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್​ ಲೈಕ್​ ಮಾಡಿದ್ದಾರೆ.

ತಾಯಿ ಫೋಟೋ ಜೊತೆ ಸೋನು ಸೂದ್​ ಭಾವುಕ ಪತ್ರ; ಮನಮುಟ್ಟುವ ಸಾಲುಗಳು ಇಲ್ಲಿವೆ..
ತಾಯಿ ಫೋಟೋ ಜೊತೆ ಸೋನು ಸೂದ್​ ಭಾವುಕ ಪತ್ರ
Follow us
TV9 Web
| Updated By: Digi Tech Desk

Updated on:Jul 21, 2021 | 1:44 PM

ಕೋಟ್ಯಂತರ ಜನರ ಮನಸ್ಸಿನಲ್ಲಿ ನಟ ಸೋನು ಸೂದ್​ ಅವರಿಗೆ ವಿಶೇಷ ಸ್ಥಾನವಿದೆ. ಸಿನಿಮಾ ಮೂಲಕ ಸಂಪಾದಿಸಿದ್ದಕ್ಕಿಂತಲೂ ಹೆಚ್ಚು ಅಭಿಮಾನಿಗಳನ್ನು ಅವರು ತಮ್ಮ ಸಮಾಜಸೇವೆಯ ಮುಖಾಂತರ ಸಂಪಾದಿಸಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಅವರು ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅಂಥ ರಿಯಲ್​ ಹೀರೋಗೆ ಜನ್ಮ ನೀಡಿದವರು ಸರೋಜ್​ ಸೂದ್​. ಆದರೆ ಹಲವು ವರ್ಷಗಳ ಹಿಂದೆಯೇ ಅವರು ಇಹಲೋಕ ತ್ಯಜಿಸಿದರು. ಇಂದು (ಜು.21) ಸರೋಜ್​ ಸೂದ್​ ಜನ್ಮದಿನ. ಆ ಪ್ರಯುಕ್ತ ಅಮ್ಮನನ್ನು ನೆನಪಿಸಿಕೊಂಡು ಸೋನು ಸೂದ್​ ಭಾವುಕ ಪತ್ರ ಬರೆದಿದ್ದಾರೆ.

‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್​ ಮಾಡುವಂತಿರಬೇಕಿತ್ತು ಎಂದು ಬಯಸುತ್ತೇನೆ. ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ’ ಎಂದು ಸೋನು ಸೂದ್​ ಪತ್ರ ಬರೆದಿದ್ದಾರೆ.

‘ನಾನು ನಿಮ್ಮನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್​ಗಳಿಂದ ತಿಳಿಸಲು ಸಾಧ್ಯವೇ ಇಲ್ಲ. ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್​ ಯೂ ಅಮ್ಮ’ ಎಂದು ಸೋನು ಸೂದ್​ ಪತ್ರ ಮುಗಿಸಿದ್ದಾರೆ.

View this post on Instagram

A post shared by Sonu Sood (@sonu_sood)

ತಾಯಿಯ ಸುಂದರವಾದ ಮೂರು ಫೋಟೋಗಳನ್ನು ಸೋನು ಸೂದ್ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ. ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್​ಗೆ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್​ ಮೂಲಕ ಸೋನು ಸೂದ್​ ತಾಯಿಯ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.

ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಅನೇಕ ಸಿನಿಮಾಗಳಲ್ಲಿ ಸೋನು ಸೂದ್​ ಬ್ಯುಸಿ ಆಗಿದ್ದಾರೆ. ಮೊದಲೆಲ್ಲ ವಿಲನ್​ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರನ್ನು ಈಗ ನೆಗೆಟಿವ್​ ಶೇಡ್​ನಲ್ಲಿ ನೋಡಲು ಜನರು ಇಷ್ಟಪಡುತ್ತಿಲ್ಲ. ತೆಲುಗಿನ ಆಚಾರ್ಯ, ಹಿಂದಿಯ ಪೃಥ್ವಿರಾಜ್​, ಕಿಸಾನ್​ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:

ಸಿನಿಮಾ ಶೂಟಿಂಗ್​ ಆರಂಭವಾದ ಬೆನ್ನಲ್ಲೇ ನಟ ಸೋನು ಸೂದ್​ ತೆಗೆದುಕೊಂಡ್ರು ಮಹತ್ವದ ನಿರ್ಧಾರ

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?

Published On - 1:24 pm, Wed, 21 July 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್