ಸಿನಿಮಾ ಶೂಟಿಂಗ್​ ಆರಂಭವಾದ ಬೆನ್ನಲ್ಲೇ ನಟ ಸೋನು ಸೂದ್​ ತೆಗೆದುಕೊಂಡ್ರು ಮಹತ್ವದ ನಿರ್ಧಾರ

ಸೋನು ಸೂದ್​ ಅವರು ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಕೆಲ ಟಾಲಿವುಡ್​ ಸಿನಿಮಾಗಳಿವೆ. ಇನ್ನೂ ಕೆಲವನ್ನು ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.

ಸಿನಿಮಾ ಶೂಟಿಂಗ್​ ಆರಂಭವಾದ ಬೆನ್ನಲ್ಲೇ ನಟ ಸೋನು ಸೂದ್​ ತೆಗೆದುಕೊಂಡ್ರು ಮಹತ್ವದ ನಿರ್ಧಾರ
ಸೋನು ಸೂದ್​
TV9kannada Web Team

| Edited By: Rajesh Duggumane

Jul 16, 2021 | 5:01 PM

ನಟ ಸೋನು ಸೂದ್​ ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅವರು ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ. ಸಹಾಯ ಕೇಳಿದ ಕೆಲವೇ ನಿಮಿಷಗಳಲ್ಲಿ ಸೋನು ಸೂದ್​ ಕಡೆಯಿಂದ ಸ್ಪಂದನೆ ಸಿಗುತ್ತಿದೆ. ಸೋನು ಸೂದ್​ ಮಾಡಿದ ಸಮಾಜಮುಖಿ ಕಾರ್ಯದಿಂದ ಅವರಿಗೆ ಸಿನಿಮಾ ಆಫರ್​ಗಳ ಸಂಖ್ಯೆಯೂ ಹೆಚ್ಚಿದೆ. ಈಗ ಸೋನು ಸೂದ್​ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಸೋನು ಸೂದ್​ ಅವರು ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಕೆಲ ಟಾಲಿವುಡ್​ ಸಿನಿಮಾಗಳಿವೆ. ಇನ್ನೂ ಕೆಲವನ್ನು ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಈ ಕಾರಣಕ್ಕೆ ಅವರು ಶೂಟಿಂಗ್​​ಗಾಗಿ ಹೈದರಾಬಾದ್​ಗೆ ತೆರಳಬೇಕು. ಹೀಗಾಗಿ, ಅವರು ಹೈದರಾಬಾದ್​ನಲ್ಲಿ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಬಂಜಾರ ಹಿಲ್ಸ್​ನಲ್ಲಿ ಸೋನು ಮನೆ ಖರೀದಿ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು. ಸಾಕಷ್ಟು ಸಿನಿಮಾ ಶೂಟಿಂಗ್​ ಇದ್ದಾಗ ಹೋಟೆಲ್​ನಲ್ಲಿ ತಿಂಗಳಾನುಗಟ್ಟಲೆ ಉಳಿದುಕೊಳ್ಳೋದು ಕಷ್ಟವಾಗುತ್ತದೆ. ಕೊವಿಡ್​ ಸಂದರ್ಭದಲ್ಲಿ ಅದು ಸುರಕ್ಷಿತವೂ ಅಲ್ಲ. ಈ ಕಾರಣಕ್ಕೆ ಸ್ವಂತ ಮನೆ ಹೊಂದಿದರೆ ಉತ್ತಮ ಎನ್ನುವ ನಿರ್ಧಾರ ಅವರದ್ದು. ಈ ಕಾರಣಕ್ಕೆ ಸೋನು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮನೆಯನ್ನು ಕೇವಲ ಉಳಿದುಕೊಳ್ಳೋಕೆ ಮಾತ್ರ ಸೋನು ಬಳಕೆ ಮಾಡಿಕೊಳ್ಳುತ್ತಿಲ್ಲ. ಚಾರಿಟಿ ಕೆಲಸಕ್ಕೂ ಈ ಮನೆ ಬಳಕೆ ಆಗಲಿದೆ. ಅಗತ್ಯವಿರುವ ವಸ್ತುಗಳನ್ನು ಇದೇ ಮನೆಯಲ್ಲಿ ಸ್ಟೋರ್​ ಮಾಡಿ ಇಡಬಹುದು ಎಂಬುದು ಸೋನು ಸೂದ್​ ಆಲೋಚನೆ. ಈ ಕಾರಣಕ್ಕೆ ಅವರಿಗೆ ಮನೆ ಖರೀದಿ ಮಾಡುವುದು ಅತ್ಯಗತ್ಯವಾಗಿತ್ತು.

ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಸೋನು ಸೂದ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಟಾಲ ಶಿವ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.  ಇತ್ತೀಚೆಗೆ ಸಿನಿಮಾ ಕೊನೆಯ ಹಂತದ ಶೂಟಿಂಗ್​ ಆರಂಭಗೊಂಡಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು.

ಕೊವಿಡ್​ ಮೊದಲನೆ ಅಲೆ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್​ ಸಹಾಯಕ್ಕೆ ನಿಂತಿದ್ದರು. ಇದಕ್ಕೆ ಭಾರೀ ಮೆಚ್ಚುಗೆ ಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಅವರು ತೆಲುಗು ಚಿತ್ರರಂಗದ ಮಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: Sonu Sood: ದೂಕುಡು ಸಿನಿಮಾದಲ್ಲಿ ಸೋನು ಸೂದ್​ಗೆ ಹೊಡೆದದ್ದಕ್ಕೆ ಸಿಟ್ಟಿನಿಂದ ಮನೆಯ ಟಿವಿ ಕುಟ್ಟಿ ಪುಡಿ ಮಾಡಿದ ಪೋರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada