Raj Kundra: ಆ ಒಂದು ‘ಬಂಗಲೆ’ಯಿಂದಾಗಿ ರಾಜ್​ ಕುಂದ್ರಾ ಸಿಕ್ಕಿ ಹಾಕಿಕೊಂಡರಾ? ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

ರಾಜ್ ಕುಂದ್ರಾ ಪ್ರಕರಣ: ಉತ್ತರ ಮುಂಬೈನ ಪ್ರಸಿದ್ಧ ಮದ್ ಐಲೆಂಡ್​ನಲ್ಲಿ ಫೆಬ್ರವರಿ 4ರಂದು ಪೊಲೀಸರು ದಾಳಿ ನಡೆಸಿದ್ದರು. ಆಗ ನೀಲಿ ಚಿತ್ರ ತಯಾರಿಸುತ್ತಿದ್ದ ಐವರನ್ನು ಬಂಧಿಸಲಾಗಿತ್ತು. ಅಲ್ಲಿಂದಲೇ ಸಿಕ್ಕಿತಾ ಪೊಲೀಸರಿಗೆ ಸುಳಿವು? ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.

Raj Kundra: ಆ ಒಂದು ‘ಬಂಗಲೆ’ಯಿಂದಾಗಿ ರಾಜ್​ ಕುಂದ್ರಾ ಸಿಕ್ಕಿ ಹಾಕಿಕೊಂಡರಾ? ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ
ರಾಜ್ ಕುಂದ್ರಾ (ಫೈಲ್ ಚಿತ್ರ)
Follow us
| Updated By: shivaprasad.hs

Updated on:Jul 21, 2021 | 6:56 PM

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನಕ್ಕೆ ಮೂಲ ಕಾರಣವಾಗಿದ್ದು ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ಬಂಗಲೆಯೊಂದರ ಮೇಲೆ ನಡೆಸಿದ ದಾಳಿ! ಹೌದು. ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ನೀಲಿ ಚಿತ್ರದ ಚಿತ್ರೀಕರಣ ಕೇಂದ್ರಕ್ಕೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದರು. ಬಂಧಿತರು ನೀಡಿದ ಸುಳಿವಿನ ಆಧಾರದಲ್ಲಿಯೇ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದಾರೆ. ಫೆಬ್ರವರಿ 4ರಂದು ಖಚಿತ ಮಾಹಿತಿಯ ಆಧಾರದ ಮೇಲೆ ಮದ್ ಐಲ್ಯಾಂಡ್​ನ ಬಂಗಲೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದರು. ಅಲ್ಲಿಂದ ಪ್ರಾರಂಭವಾದ ತನಿಖೆ, ಬಂಧಿತರು ನೀಡಿದ ಸುಳಿವಿನ ಆಧಾರದಲ್ಲಿ ಸಾಗಿ, ಇದೀಗ ಪ್ರಮುಖ ಆರೋಪಿ ರಾಜ್ ಕುಂದ್ರಾ ಬಂಧನಕ್ಕೆ ಕಾರಣವಾಗಿದೆ.

ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

ಫೆಬ್ರವರಿಯಲ್ಲಿ ನಡೆದ ದಾಳಿಯ ಸಮಯದಲ್ಲಿ ಈರ್ವರು ನಗ್ನವಾಗಿ ಶೃಂಗಾರ ಭರಿತ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಗ, ರೆಡ್​ ಹ್ಯಾಂಡ್ ಆಗಿ ಸೆರೆ ಸಿಕ್ಕಿದ್ದರು ಹಾಗೂ ಓರ್ವ ಮಹಿಳೆಯನ್ನು ರಕ್ಷಿಸಲಾಗಿತ್ತು. ಕೆಲವು ದಿನಗಳ ನಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಈರ್ವರನ್ನು ಬಂಧಿಸಿದ್ದರು. ಅವರಲ್ಲಿ ನಿರ್ಮಾಪಕ ರೋವಾ ಖಾನ್ ಮತ್ತು ನಟಿ ಗೆಹಾನಾ ವಸಿಷ್ಠ ಸೇರಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಗೆಹಾನಾ, ನಾವು ಚಿತ್ರೀಕರಿಸುತ್ತಿದ್ದದ್ದು- ಶೃಂಗಾರ (ಎರೋಟಿಕಾ) ದೃಶ್ಯಗಳನ್ನೇ ಹೊರತು ನೀಲಿ ಚಿತ್ರಗಳನ್ನಲ್ಲ ಎಂದು ಹೇಳಿದ್ದರು.

ಅಲ್ಲಿಂದ ಪೊಲೀಸ್ ತನಿಖೆ ಚಿತ್ರಗಳು ಅಪ್​ಲೋಡ್ ಆಗುತ್ತಿದ್ದ ಆಪ್​ಗಳು ಹಾಗೂ ಅದರ ಹಂಚುವಿಕೆಯ ಮೇಲೆ ಕೇಂದ್ರೀಕೃತಗೊಂಡವು. ಅದರಲ್ಲೂ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್​ನಿಂದ ಬ್ಯಾನ್ ಆದ ‘ಹಾಟ್​ಶಾಟ್ಸ್’ ಆಪ್ ಮೇಲೆ ಮಾಹಿತಿ ಕಲೆಹಾಕಲು ಪ್ರಾರಂಭಿಸಲಾಯಿತು. ಈ ತನಿಖೆಯ ಆಧಾರದ ಮೇಲೆ ‘ಕೆನ್ರಿನ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪೆನಿಗೆ ಕೆಲಸ ಮಾಡುತ್ತಿದ್ದ, ರಾಜ್ ಕುಂದ್ರಾರ ಮಾಜಿ ಆಪ್ತ ಸಹಾಯಕ ಉಮೇಶ್ ಕಾಮತ್ ಬಂಧನವಾಯಿತು. ಉಮೇಶ್ ತನಿಖೆಯ ವೇಳೆ ರಾಜ್ ಕುಂದ್ರಾ ಕೈವಾಡದ ಕುರಿತು ಎಳೆಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟರು.

ಹಾಟ್​ಶಾಟ್ಸ್​ಗೂ ರಾಜ್ ಕುಂದ್ರಾಗೂ ಸಂಬಂಧ ಹೇಗೆ?

ಅಲ್ಲಿಂದ ತನಿಖೆಗೆ ಹೊಸ ಆಯಾಮ ಲಭಿಸಿತು. ಈ ಮೊದಲೂ ಸಹ ರಾಜ್ ಕುಂದ್ರಾ ಹೆಸರು ತನಿಖೆಯಲ್ಲಿ ಪ್ರಸ್ತಾಪಿತವಾಗಿದ್ದರೂ ಪೊಲೀಸ್ ಬಳಿ ಯಾವುದೇ ಸಾಕ್ಷ್ಯ ಲಭ್ಯವಿರಲಿಲ್ಲ. ಉಮೇಶ್ ಕಾಮತ್ ಕಾರಣದಿಂದಾಗಿ ಪೊಲೀಸರಿಗೆ ಬಲವಾದದ ಸಾಕ್ಷ್ಯ ಲಭಿಸಿತು. ‘ಕೆನ್ರಿನ್’ ಕಂಪೆನಿ ‘ಹಾಟ್​ಶಾಟ್ಸ್’ನ ಮಾಲಿಕರಾಗಿದ್ದರೂ ಸಹ ಅದನ್ನು ನಡೆಸುತ್ತಿದ್ದದ್ದು ಮುಂಬೈ ಮೂಲದ ‘ವಿಯಾನ್ ಇಂಡಸ್ಟ್ರೀಸ್’ ಎಂಬ ಕಂಪನಿ. ಅದರ ಮಾಲೀಕ ಮತ್ಯಾರೂ ಅಲ್ಲ- ಸ್ವತಃ ರಾಜ್ ಕುಂದ್ರಾ!

ಪೊಲೀಸರ ಪ್ರಕಾರ ಭಾರತದಲ್ಲಿರುವ ಕಠಿಣ ಸೈಬರ್ ನಿಯಮಾವಳನ್ನು ತಪ್ಪಿಸಿಕೊಂಡು ವಿಡಿಯೊಗಳನ್ನು ಅಪ್​ಲೋಡ್ ಮಾಡಲು ಕೆನ್ರಿನ್ ಕಂಪನಿ ಸಹಾಯ ಮಾಡುತ್ತಿತ್ತು. ಆದರೆ ನೀಲಿ ಚಿತ್ರಗಳ ತಯಾರಿಕೆಯನ್ನು ಭಾರತದಲ್ಲೇ ಮಾಡಿ, ವಿ-ಟ್ರಾನ್ಸ್​ಫರ್ ಆಪ್ ಮೂಲಕ ಲಂಡನ್​ಗೆ ಕಳಿಸಲಾಗುತ್ತಿತ್ತು. ನಂತರ ಹಣ ಪಾವತಿ ಮಾಡಿ ವೀಕ್ಷಿಸಲು ಸಾಧ್ಯವಾಗುವ ಒಟಿಟಿ ಅಥವಾ ಮೊಬೈಲ್ ಆಪ್​ಗಳಲ್ಲಿ ಚಿತ್ರಗಳನ್ನು ಹಂಚಲಾಗುತ್ತಿತ್ತು.

ಪೊಲೀಸರು ರಾಜ್ ಕುಂದ್ರಾ ಆಫೀಸಿನಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಿದಾಗ ರಾಜ್ ಕುಂದ್ರಾ ಪ್ರಮುಖ ಆರೋಪಿ ಎನ್ನುವುದಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ. ‘ಅಗ್ರಿಮೆಂಟ್ ಪತ್ರಗಳು’, ಇಮೈಲ್, ವಾಟ್ಸಾಪ್ ಚಾಟ್​ಗಳು, ಬ್ಯಾಂಕ್ ಖಾತೆಯ ಮಾಹಿತಿಗಳು ಮತ್ತು ವಿಡಿಯೊ ಕ್ಲಿಪ್​ಗಳು ರಾಜ್ ಕುಂದ್ರಾ ವಿರುದ್ಧ ಬಲವಾದ ಸಾಕ್ಷಿಗಳಾಗಿವೆ. ಇವುಗಳ ಆಧಾರದಲ್ಲಿಯೇ ರಾಜ್ ಕುಂದ್ರಾ ಬಂಧನವಾಗಿದೆ ಎಂದು ಜಂಟಿ ಮುಂಬೈ ಪೊಲೀಸ್ ಆಯುಕ್ತ ಮಿಲಿಂದ್ ಭಾರಂಬೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಪೊಲೀಸರು ಈ ಮೊದಲು ಸಲ್ಲಿಸಿದ್ದ ಚಾರ್ಜ್ ಶೀಟ್​ನಲ್ಲಿ ಕುಂದ್ರಾ ಹೆಸರಿರಲಿಲ್ಲ. ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಈ ಮೊದಲು ಕುಂದ್ರಾ ಕೈವಾಡದ ಬಗ್ಗೆ ಖಚಿತವಾಗಿರದ ಕಾರಣ ಅವರ ವಿರುದ್ಧ  ಚಾರ್ಜ್ ಶೀಟ್ ಸಲ್ಲಿಸಲಾಗಿರಲಿಲ್ಲ ಎಂದಿದ್ದಾರೆ. ಭಾರತದ ಕಾನೂನನ್ನು ತಪ್ಪಿಸುವ ಸಲುವಾಗಿಯೇ ರಾಜ್ ಕುಂದ್ರಾ ಮತ್ತು ಅವರ ಸಹೋದರ ಬ್ರಿಟನ್​ನಲ್ಲಿ ತಮ್ಮ ಕಂಪನಿಯನ್ನು ನೋಂದಾಯಿಸಿದ್ದರು. ಭಾರತದಲ್ಲಿ ನೀಲಿಚಿತ್ರ ತಯಾರಿಕೆ ಮತ್ತು ಹಂಚುವಿಕೆ ಕಾನೂನಾತ್ಮಕವಾಗಿ ಗಂಭೀರ ಅಪರಾಧವಾಗಿದೆ. ಆದರೆ ನೀಲಿಚಿತ್ರಗಳನ್ನು ವೈಯಕ್ತಿಕವಾಗಿ ವೀಕ್ಷಿಸುವುದಕ್ಕೆ ಭಾರತದಲ್ಲಿ ಅನುಮತಿ ಇದೆ.

ಪೊಲೀಸರು ತಿಳಿಸಿರುವ ಮಾಹಿತಿಯಂತೆ ಚಿತ್ರಗಳನ್ನು ಮುಂಬೈನ ಮನೆಗಳಲ್ಲಿ, ಹೊಟೆಲ್​ಗಳಲ್ಲಿ ಚಿತ್ರೀಕರಿಸಲಾಗುತ್ತಿತ್ತು. ವೆಬ್​ ಸೀರೀಸ್ ಅಥವಾ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತೇವೆ ಎಂದು ನಂಬಿಸಿ ಯುವತಿಯರನ್ನು ಕರೆತಂದು ನೀಲಿ ಚಿತ್ರಗಳನ್ನು ಒತ್ತಾಯಪೂರ್ವಕವಾಗಿ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.

ರಾಜ್ ಕುಂದ್ರಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ತಮ್ಮ ಒಡೆತನದ ‘ಹಾಟ್​ಶಾಟ್ಸ್’ ಆಪ್​ ಅನ್ನು ಬಹು ಹಿಂದೆಯೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೀಪ್ ಭಕ್ಷಿಗೆ ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದು, ವಾಟ್ಸಾಪ್ ಚಾಟ್​ನಲ್ಲಿ ನೀಲಿ ಚಿತ್ರಗಳ ತಯಾರಿಕೆ ಮತ್ತು ಹಂಚುವಿಕೆಯನ್ನು ಚರ್ಚಿಸುವುದಕ್ಕಾಗಿಯೇ ಒಂದು ಗ್ರೂಪ್ ಅನ್ನು ಕುಂದ್ರಾ ರಚಿಸಿದ್ದು, ಅದಕ್ಕೆ ಅವರೇ ಸ್ವತಃ ಅಡ್ಮಿನ್ ಆಗಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಆಪ್​ನ ಹಣಕಾಸು ವ್ಯವಹಾರವನ್ನು ಸ್ವತಃ ಕುಂದ್ರಾರೇ ನಿರ್ವಹಿಸುತ್ತಿದ್ದರು ಎಂದಿದ್ದಾರೆ.

ಕೊನೆ ಗುಟುಕು: ರಾಜ್ ಕುಂದ್ರಾ ಇಷ್ಟೆಲ್ಲಾ (ಅ)ವ್ಯವಹಾರ ನಡೆಸಿದ್ದು ‘ವಿಯಾನ್ ಇಂಡಸ್ಟ್ರೀಸ್’ ಎಂಬ ಕಂಪನಿಯ ಮುಖಾಂತರ. ವಿಪರ್ಯಾಸವೆಂದರೆ ವಿಯಾನ್ ಎನ್ನುವುದು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯವರ ಪ್ರೀತಿಯ ಪುತ್ರನ ಹೆಸರು!

ಇದನ್ನೂ ಓದಿ:

ನಾನು ರಾಜ್ ಕುಂದ್ರಾ ಅವರ ಒಂದು ಆಪ್ ನೋಡಿದ್ದೇನೆ, ಅದರಲ್ಲಿ ‘ಅಂಥದ್ದೇನೂ’ ಇರಲಿಲ್ಲ: ಮಿಕಾ ಸಿಂಗ್

Crime News: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಸೆಕ್ಸ್​ ದಂಧೆ; ನಿರ್ಮಾಪಕ ಸೇರಿ ಮೂವರ ಬಂಧನ

(Is a bungalow led the police attention towards Raj Kundra in creating and distributing obscene material case?)

Published On - 6:44 pm, Wed, 21 July 21

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು