ಸಲ್ಮಾನ್ ಖಾನ್ ದಾಂಪತ್ಯದ ಗುಟ್ಟನ್ನು ಹೇಳುವುದು; ನಾನು ಸ್ಟಾರ್ ಆಗುವುದು ಹೇಗೆ ಎಂಬ ಪಾಠ ಮಾಡುವುದು ಎರಡೂ ಒಂದೇ!: ಅರ್ಬಾಜ್ ಖಾನ್

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಶೋ ಒಂದರಲ್ಲಿ ನಿಮ್ಮ ಕುಟುಂಬದಲ್ಲಿ ಯಾರು ಅತೀ ಕೆಟ್ಟ ರಿಲೇಶನ್​ಶಿಪ್ ಅಡ್ವೈಸ್ ನೀಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಹೋದರನ ಸಲ್ಮಾನ್ ಖಾನ್ ಅವರ ಕಾಲೆಳೆದಿದ್ದಾರೆ.

ಸಲ್ಮಾನ್ ಖಾನ್ ದಾಂಪತ್ಯದ ಗುಟ್ಟನ್ನು ಹೇಳುವುದು; ನಾನು ಸ್ಟಾರ್ ಆಗುವುದು ಹೇಗೆ ಎಂಬ ಪಾಠ ಮಾಡುವುದು ಎರಡೂ ಒಂದೇ!: ಅರ್ಬಾಜ್ ಖಾನ್
ಅರ್ಬಾಜ್ ಖಾನ್ ತಮ್ಮ ಸಹೋದರ ಸಲ್ಮಾನ್ ಖಾನ್ ಹಾಗೂ ಸೊಹೈಲ್ ಖಾನ್ ಅವರೊಂದಿಗೆ

ಸಲ್ಮಾನ್ ಖಾನ್ ಸಹೋದರ, ನಿರೂಪಕ ಅರ್ಬಾಜ್ ಖಾನ್ ಶೋ ಒಂದರಲ್ಲಿ ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದೆ. ನಿಮ್ಮ ಕುಟುಂಬದಲ್ಲಿ ಯಾರು ಅತೀ ಕೆಟ್ಟದಾಗಿ ದಾಂಪತ್ಯದ(ರಿಲೇಶನ್​ಶಿಪ್) ಸಲಹೆಯನ್ನು ನೀಡುತ್ತಾರೆ ಎಂಬ ಪ್ರಶ್ನೆಗೆ ಹಿಂದು ಮುಂದು ಯೋಚಿಸದೇ ನೇರವಾಗಿ ಸಲ್ಮಾನ್ ಖಾನ್ ಹೆಸರನ್ನು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ ಅರ್ಬಾಜ್. ಇದಕ್ಕೆ ಅವರು ಸಮರ್ಥನೆಯನ್ನೂ ನೀಡಿದ್ದಾರೆ. ನನ್ನನ್ನು ಏಕೆಂದು ಕೇಳಬೇಡಿ. ದಾಂಪತ್ಯದ ಕುರಿತು ಅತೀ ಕೆಟ್ಟದಾಗಿ ಸಲಹೆ ನೀಡುವುದು ಸಲ್ಮಾನ್ ಖಾನ್. ಇದನ್ನು ನಾನು ಬಿಡಿಸಿ ಹೇಳಬೇಕಾಗಿಯೂ ಇಲ್ಲ. ಕಾರಣ, ಸಲ್ಮಾನ್ ರಿಲೇಶನ್​ಶಿಪ್ ಅಡ್ವೈಸ್ ನೀಡುವುದು, ನಾನು ಸ್ಟಾರ್ ಆಗುವುದು ಹೇಗೆ ಎಂಬ ಪಾಠ ಮಾಡಿದಂತಿರುತ್ತದೆ ಎಂದು ಅವರು ನಕ್ಕಿದ್ದಾರೆ.

ಅದನ್ನು ಮತ್ತಷ್ಟು  ವಿವರಿಸಿರುವ ಅರ್ಬಾಜ್, ನಾನು ನನ್ನ ಸಹೋದರನಿಗೆ, ನೋಡಪ್ಪಾ, ನೀನು ಹೀಗೆ ಮಾಡಿದರೆ ಸ್ಟಾರ್ ಆಗಬಹುದು… ಎಂದೆಲ್ಲಾ ಸಲಹೆಯನ್ನು ನೀಡಲು ಆಗುವುದಿಲ್ಲ. ಹಾಗೆಯೇ ಅವನೂ ಸಹ ರಿಲೇಶನ್​ಶಿಪ್ ಯಶಸ್ವಿಯಾಗುವ ಬಗ್ಗೆ ಗುಟ್ಟನ್ನು ಹೇಳಲು ಆಗುವುದಿಲ್ಲ. ಒಂದು ವೇಳೆ ನಾನು ಸಲ್ಮಾನ್​ಗೆ ಸ್ಟಾರ್ ಬಗ್ಗೆ ಹೇಳಿದರೂ ಅವನು ನಗುವುದನ್ನು ಬಿಟ್ಟು ಮತ್ತೇನನ್ನು ತಾನೇ ಮಾಡಬಲ್ಲ ಎಂದು ಮರು ಪ್ರಶ್ನಿಸಿದ್ದಾರೆ ಅರ್ಬಾಜ್.

ನಿರೂಪಕರಾಗಿರುವ ಅರ್ಬಾಜ್ ಖಾನ್ ತಮ್ಮ ಟಾಕ್ ಶೋ ‘ಪಿಂಚ್’ನ ಎರಡನೇ ಸೀಸನ್​ಗೆ ತಾಯಾರಿ ನಡೆಸಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿರುವ ಅರ್ಬಾಜ್, ಸಲ್ಮಾನ್​ರನ್ನು ಶೋಗೆ ಕರೆಯುವುದಕ್ಕೂ ಮೊದಲು ಮೊದಲ ಸೀಸನ್​ ಯಶಸ್ವಿಯಾಗುತ್ತದೋ ಇಲ್ಲವೋ ಎಂಬುದನ್ನು ಗಮನಿಸಬೇಕಾಗಿತ್ತು. ಈಗ ಸಲ್ಮಾನ್​ಗೆ ವೇದಿಕೆ  ಸಿದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:

ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್

ಬಿಗ್​ ಬಾಸ್​ ಮನೆಯಲ್ಲಿ ಮಂಜು ಇದ್ದರೂ ದಿವ್ಯಾಗೆ ಕಾಡುತ್ತಿದೆ ಏಕಾಂಗಿತನ

ಅಬ್ಬಾ.. ನೀಲಿಚಿತ್ರಗಳಿಂದ ರಾಜ್​ ಕುಂದ್ರಾ ಗಳಿಸುತ್ತಿದ್ದ ಹಣ ಇಷ್ಟೊಂದಾ? ಲೀಕ್​ ಆಯ್ತು ವಾಟ್ಸಾಪ್​ ಚ್ಯಾಟ್​

(Salman Khan brother Arbaz Khan says that Salman’s advice on relationship like his advice on how to become star)

Click on your DTH Provider to Add TV9 Kannada