‘ನನ್ನ ಗಂಡ ನಿರಪರಾಧಿ; ಅಶ್ಲೀಲ ಸಿನಿಮಾ ಮಾಡಿಲ್ಲ’; ರಾಜ್​ ಕುಂದ್ರಾ ಪರ ಶಿಲ್ಪಾ ಶೆಟ್ಟಿ ಬ್ಯಾಟಿಂಗ್

‘ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​​ ಆ್ಯಪ್​ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್​ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ’ ಎಂದು ಶಿಲ್ಪಾ ಶೆಟ್ಟಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

‘ನನ್ನ ಗಂಡ ನಿರಪರಾಧಿ; ಅಶ್ಲೀಲ ಸಿನಿಮಾ ಮಾಡಿಲ್ಲ’; ರಾಜ್​ ಕುಂದ್ರಾ ಪರ ಶಿಲ್ಪಾ ಶೆಟ್ಟಿ ಬ್ಯಾಟಿಂಗ್
ಶಿಲ್ಪಾ ಶೆಟ್ಟಿ-ರಾಜ್​​ ಕುಂದ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 24, 2021 | 1:07 PM

ರಾಜ್​ ಕುಂದ್ರಾ (Raj Kundra) ಅವರ ನೀಲಿ ಚಿತ್ರದ ಕೇಸ್​ನಲ್ಲಿ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಅವರನ್ನು ಕೂಡ ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಲವು ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಶಿಲ್ಪಾ ಶೆಟ್ಟಿ ಅವರ ನಿವಾಸದ ಮೇಲೆ ಶುಕ್ರವಾರ (ಜು.23) ದಾಳಿ ನಡೆಸಿ ತಪಾಸಣೆ ಮಾಡಲಾಗಿದೆ. ಈ ವೇಳೆ ಪತಿಯ ಪರವಾಗಿ ಮಾತನಾಡಿರುವ ಶಿಲ್ಪಾ ಶೆಟ್ಟಿ ಅವರು ‘ರಾಜ್​ ಕುಂದ್ರಾ ನಿರಪರಾಧಿ’ ಎಂದು ವಾದ ಮಾಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. 

‘ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​​ ಆ್ಯಪ್​ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್​ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ’ ಎಂದು ಶಿಲ್ಪಾ ಶೆಟ್ಟಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ‘ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ’ ಎಂದು ಅವರು ವಾದಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ರಾಜ್​ ಕುಂದ್ರಾ ಕೂಡ ಪೊಲೀಸರ ಎದುರು ಇದನ್ನೇ ವಾದಿಸುತ್ತಿದ್ದಾರೆ. ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಆ ಕಾರಣದಿಂದಲೇ ಜು.27ರವರೆಗೆ ಅವರನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಹಲವು ಸಾಕ್ಷ್ಯಗಳು ಇವೆ ಎನ್ನಲಾಗಿದೆ. ಆದರೂ ಕೂಡ ರಾಜ್ ಕುಂದ್ರಾ ಈ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಇದೇ ಕೇಸ್​ನಲ್ಲಿ ಅರೆಸ್ಟ್​ ಆಗಿ, ನಂತರ ಜಾಮೀನು ಪಡೆದು ಹೊರಬಂದಿರುವ ನಟಿ-ಮಾಡೆಲ್​ ಗೆಹನಾ ವಸಿಷ್ಠ್​ ಪರ ವಕ್ತಾರರು ಕೆಲವೇ ದಿನಗಳ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದರು. ‘ಗೆಹನಾ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಅದನ್ನು ಅಶ್ಲೀಲ ಅಥವಾ ನೀಲಿ ಚಿತ್ರಗಳ ಜೊತೆ ಹೋಲಿಸಬಾರದು. ಮುಂಬೈ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಯಾರು ನಿಜವಾದ ಅಪರಾಧಿಗಳು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ:

‘ಕುಟುಂಬ ಸಮೇತ ಈ ಸಿನಿಮಾ ನೋಡಿ’; ಗಂಡನ ನೀಲಿ ಚಿತ್ರ ದಂಧೆ ನಡುವೆಯೂ ಶಿಲ್ಪಾ ಶೆಟ್ಟಿ ಹೀಗೆ ಹೇಳಿದ್ದೇಕೆ?

ನೀಲಿ ಚಿತ್ರ ದಂಧೆಯ ಆರೋಪಿ ರಾಜ್​ ಕುಂದ್ರಾ ಒಟ್ಟು ಆಸ್ತಿ ಮೊತ್ತ ಎಷ್ಟು? ಇದು ದಂಗಾಗಿಸುವ ನಂಬರ್​

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ