Shilpa Shetty: ಹಾಟ್‌ಶಾಟ್ ಗೊತ್ತಾ? ಪೊಲೀಸರ ಪ್ರಶ್ನೆಗೆ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ..!
Raj kundra Case: ಮುಂಬೈ ಪೊಲೀಸರ ಅಪರಾಧ ವಿಭಾಗವು ಸೋಮವಾರ (ಜುಲೈ 19) ರಾತ್ರಿ ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಬಂಧಿಸಿದೆ. ಮುಂಬೈ ನ್ಯಾಯಾಲಯವು ಶುಕ್ರವಾರ (ಜುಲೈ 23) ರಾಜ್ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ವಿಸ್ತರಿಸಿದೆ.
ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಮುಂಬೈ ಪೊಲೀಸ್ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರನ್ನು ಬಂಧಿಸಿ 5 ದಿನ ಕಳೆದಿದೆ. ಮುಂಬೈ ಕ್ರೈಂ ಬ್ರಾಂಚ್ ಇದೀಗ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಅದರಂತೆ ಮುಂಬೈನ ಜುಹುದಲ್ಲಿರುವ ಶಿಲ್ಪಾ ಶೆಟ್ಟಿ (Shilpa Shetty) ಮನೆ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಇದೇ ವೇಳೆ ಶಿಲ್ಪಾ ಶೆಟ್ಟಿಯನ್ನೂ ಕೂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿದೆ.
ರಾಜ್ ಕುಂದ್ರಾ ಅವರ ವ್ಯವಹಾರ ಹಾಗೂ ಸಿನಿಮಾ ನಂಟಿನ ಬಗ್ಗೆ ಶಿಲ್ಪಾ ಶೆಟ್ಟಿ ಮುಂದೆ ಹಲವು ಪ್ರಶ್ನೆಗಳನ್ನು ಮುಂದಿಡಲಾಗಿತ್ತು. ಆದರೆ ಯಾವುದಕ್ಕೂ ಸಮರ್ಪಕ ಉತ್ತರ ನೀಡುವಲ್ಲಿ ನಟಿ ತಡಬಡಿಸಿದ್ದಾರೆ. ಅದರಲ್ಲೂ ಪತಿಯ ಕರಾಳ ದಂಧೆಯ ಬಗ್ಗೆ ಕೇಳಲಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಟಿ ಅಳುತ್ತಾ ಕೂತಿದ್ದರು. ಇದೇ ವೇಳೆ ಈ ಪ್ರಕರಣದಿಂದ ತನ್ನ ಇಮೇಜ್ ಗೆ ಧಕ್ಕೆಯುಂಟಾಗಿದೆ ಎಂದು, ಶಿಲ್ಪಾ ಶೆಟ್ಟಿ (Shilpa Shetty) ಅಪರಾಧ ವಿಭಾಗದ ಅಧಿಕಾರಿಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ ಎಂದು ಮುಂಬೈ ಕ್ರೈಂ ಬ್ರಾಂಚ್ ಮೂಲಗಳಿಂದ ತಿಳಿದು ಬಂದಿದೆ.
ಮುಂಬೈ ಕ್ರೈಂ ಬ್ರಾಂಚ್ ಶಿಲ್ಪಾ ಶೆಟ್ಟಿಯ ಮುಂದಿಟ್ಟ ಪ್ರಶ್ನೆಗಳು ಹೀಗಿವೆ…
* ಹಾಟ್‌ಶಾಟ್ ಬಗ್ಗೆ ನಿಮಗೆ ತಿಳಿದಿದೆಯೇ? ಈ ಪೋರ್ನ್ ಸೈಟ್ ಯಾರು ನಡೆಸುತ್ತಾರೆ? * ಹಾಟ್‌ಶಾಟ್‌ನ ವೀಡಿಯೊ ವಿಷಯದ ಬಗ್ಗೆ ನಿಮಗೆ ಗೊತ್ತಿದೆಯಾ? * ನೀವು ಎಂದಾದರೂ ಹಾಟ್‌ಶಾಟ್‌ನ ಕೆಲಸ ಮಾಡಿದ್ದೀರಾ? * ಎಂದಾದರೂ ಪ್ರದೀಪ್ ಬಕ್ಷಿ (ರಾಜ್ ಕುಂದ್ರಾ ಅವರ ಸೋದರ ಮಾವ) ರೊಂದಿಗೆ ಹಾಟ್‌ಶಾಟ್ ಬಗ್ಗೆ ಸಂವಾದ ನಡೆಸಿದ್ದೀರಾ? * ನೀವು ಕಂಪನಿಯಲ್ಲಿ ಗಣನೀಯ ಪಾಲನ್ನು ಹೊಂದಿದ್ದೀರಿ. ಆದರೆ 2020 ರಲ್ಲಿ ಕಂಪನಿಯನ್ನು ಏಕೆ ತೊರೆದಿದ್ದೀರಿ? * ವಿಯಾನ್ ಮತ್ತು ಕ್ಯಾಮರೂನ್ ನಡುವಿನ ಹಣದ ವ್ಯವಹಾರದ ಬಗ್ಗೆ ನಿಮಗೆ ತಿಳಿದಿದೆಯೇ? * ಲಂಡನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಲು ಅಥವಾ ಅಪ್‌ಲೋಡ್ ಮಾಡಲು ವಿಯಾನ್ ಅವರ ಕಚೇರಿಯನ್ನು ಹಲವಾರು ಬಾರಿ ಬಳಸಲಾಗಿದೆ. ಈ ಬಗ್ಗೆ ನಿಮಗೆ ತಿಳಿದಿದೆಯೇ? * ರಾಜ್ ಕುಂದ್ರಾ ಅವರ ಎಲ್ಲಾ ಕೆಲಸಗಳ ಬಗ್ಗೆ ನಿಮಗೆ ತಿಳಿದಿದೆಯೇ, ಅವರು ಏನು ಕೆಲಸ ಮಾಡುತ್ತಾರೆ? ಅವರ ವ್ಯವಹಾರ ಏನು? ಎಂಬ ಪ್ರಶ್ನೆಗಳನ್ನು ಕೇಳಲಾಯಿತು. ಅಲ್ಲದೆ ತಮ್ಮ ಮನೆಯನ್ನು ಪರಿಶೀಲಿಸಿ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡರು.
ಸದ್ಯ ರಾಜ್ ಕುಂದ್ರಾ ಕುರಿತಾದ ಹಲವು ಸ್ಪೋಟಕ ಮಾಹಿತಿಗಳು ಪೊಲೀಸರಿಗೆ ಲಭಿಸಿದ್ದು, ಅದರಂತೆ ಕುಂದ್ರಾ ಮತ್ತು ಅವರ ಸಹೋದ್ಯೋಗಿಗಳು ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರಗಳನ್ನು ಕೊಡಿಸುವ ಭರವಸೆ ನೀಡಿ ಮೋಸ ಮಾಡಿ ಅಶ್ಲೀಲ ಚಲನಚಿತ್ರಗಳನ್ನು ತಯಾರಿಸುತ್ತಿದ್ದರು ಎಂದು ಹೇಳಲಾಗಿದೆ. ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಸಿಗಬೇಕಾದರೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳ ಬೇಕು ಎಂದು ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪಗಳು ಕೂಡ ಕೇಳಿ ಬರುತ್ತಿದೆ.
ಮುಂಬೈ ಪೊಲೀಸರ ಅಪರಾಧ ವಿಭಾಗವು ಸೋಮವಾರ (ಜುಲೈ 19) ರಾತ್ರಿ ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಬಂಧಿಸಿದೆ. ಮುಂಬೈ ನ್ಯಾಯಾಲಯವು ಶುಕ್ರವಾರ (ಜುಲೈ 23) ರಾಜ್ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ: IPL 2021: ಐಪಿಎಲ್ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್ ಪ್ಲ್ಯಾನ್..!
ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
Published On - 10:17 pm, Sat, 24 July 21