AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

‘ಒಂದು ಸೂಕ್ತವಲ್ಲದ ಸಮಯದಲ್ಲಿ ನಾನು ನನ್ನ ಮಗನಿಗೆ ಬಜರಂಗಿ ಭಾಯಿಜಾನ್​ ಚಿತ್ರದ ಕಥೆ ಹೇಳಿದೆ. ಆ ಸಂದರ್ಭದಲ್ಲಿ ಅವನು ಬಾಹುಬಲಿ ಚಿತ್ರದಲ್ಲಿನ ಯುದ್ಧದ ಸನ್ನಿವೇಶದ ಶೂಟಿಂಗ್​ ಮಾಡುತ್ತಿದ್ದ’ ಎಂದು ಅಂದಿನ ಘಟನೆಯನ್ನು ವಿಜಯೇಂದ್ರ ಪ್ರಸಾದ್​ ನೆನಪಿಸಿಕೊಂಡಿದ್ದಾರೆ.

ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ
ಸಲ್ಮಾನ್​ ಖಾನ್​, ರಾಜಮೌಳಿ
TV9 Web
| Updated By: ಮದನ್​ ಕುಮಾರ್​|

Updated on: Jul 25, 2021 | 8:57 AM

Share

ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ರಾಜಮೌಳಿ (SS Rajamouli) ಸೋಲಿಲ್ಲದ ಸರದಾರ. ದೊಡ್ಡ ಕನಸು ಕಾಣುವ ಅವರು ಅದನ್ನು ನನಸಾಗಿಸಿ ತೋರಿಸುತ್ತಾರೆ. ‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾಗಳನ್ನು ಮಾಡಿ ಜಗತ್ತಿನಾದ್ಯಂತ ಫೇಮಸ್​ ಆದ ಅವರು ಈಗ ಆರ್​ಆರ್​ಆರ್​ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಸಿನಿಮಾ ಮಾಡಲು ಹಲವು ವರ್ಷಗಳ ಸಮಯ ಮೀಸಲಿಡುವುದು ಅವರ ಸ್ಟೈಲ್​. ಅದರಿಂದಾಗಿ ಅವರು ಬೇರೆ ಕೆಲವು ಸಿನಿಮಾಗಳನ್ನು ರಿಜೆಕ್ಟ್​ ಮಾಡಬೇಕಾಗುತ್ತದೆ. ಬಾಲಿವುಡ್​ ಸ್ಟಾರ್​ ನಟ ಸಲ್ಮಾನ್ ಖಾನ್ (Salman Khan) ಜೊತೆ ಸಿನಿಮಾ ಮಾಡುವ ಅವಕಾಶವನ್ನು ಕೂಡ ಅವರು ಕೈ ಚೆಲ್ಲಿದ್ದರು ಎಂಬ ವಿಷಯ ಈಗ ಬಹಿರಂಗ ಆಗಿದೆ. 

2015ರಲ್ಲಿ ಸಲ್ಮಾನ್​ ಖಾನ್​ ನಟಿಸಿದ ‘ಬಜರಂಗಿ ಭಾಯಿಜಾನ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಅದಕ್ಕೆ ನಿರ್ದೇಶನ ಮಾಡಿದವರು ಕಬೀರ್​ ಖಾನ್​. ಕಥೆ ಬರೆದವರು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​. ರಾಜಮೌಳಿ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂಬುದು ವಿಜಯೇಂದ್ರ ಪ್ರಸಾದ್​ ಅವರ ಆಸೆ ಆಗಿತ್ತು. ಆದರೆ ಅವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಆ ಆಸೆ ಈಡೇರಲಿಲ್ಲ. ಆ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್​ ಈಗ ಬಾಯಿ ಬಿಟ್ಟಿದ್ದಾರೆ.

‘ಒಂದು ಸೂಕ್ತವಲ್ಲದ ಸಮಯದಲ್ಲಿ ನಾನು ನನ್ನ ಮಗನಿಗೆ ಬಜರಂಗಿ ಭಾಯಿ​ಜಾನ್​ ಚಿತ್ರದ ಕಥೆ ಹೇಳಿದೆ. ಆ ಸಂದರ್ಭದಲ್ಲಿ ಅವನು ಬಾಹುಬಲಿ ಚಿತ್ರದಲ್ಲಿನ ಯುದ್ಧದ ಸನ್ನಿವೇಶದ ಶೂಟಿಂಗ್​ ಮಾಡುತ್ತಿದ್ದ. ಅದು ತುಂಬ ಬ್ಯುಸಿ ಸಮಯವಾಗಿತ್ತು. ನಮ್ಮೆಲ್ಲರ ಗಮನ ಶೂಟಿಂಗ್​ ಮೇಲಿತ್ತು. ಹಾಗಾಗಿ ಬಜರಂಗಿ ಭಾಯಿಜಾನ್​ ಕಥೆಯ ಕಡೆಗೆ ರಾಜಮೌಳಿಗೆ ಗಮನ ನೀಡಲು ಸಾಧ್ಯವಾಗಲಿಲ್ಲ. ಬೇರೆ ಯಾವುದಾದರೂ ಸರಿಯಾದ ಸಮಯ ನೋಡಿಕೊಂಡು ನಾನು ಕಥೆ ಹೇಳಬೇಕಿತ್ತು’ ಎಂದು ಈಗ ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ ಪಟ್ಟಿದ್ದಾರೆ.

ಮಾಮೂಲಿ ಸಲ್ಮಾನ್​ ಖಾನ್​ ಸಿನಿಮಾಗಳಿಗಿಂತ ತುಂಬ ಡಿಫರೆಂಟ್​ ಆದ ಕಥೆಯನ್ನು ‘ಬಜರಂಗಿ ಭಾಯಿಜಾನ್​’ ಚಿತ್ರ ಹೊಂದಿತ್ತು. ಕಬೀರ್​ ಖಾನ್​ ಅತ್ಯುತ್ತಮವಾಗಿ ನಿರ್ದೇಶನ ಮಾಡಿದ್ದರು. ಪುಟ್ಟ ಬಾಲಕಿ ಹರ್ಷಾಲಿ ಮಲ್ಹೋತ್ರಾ, ನಾಯಕಿ ಕರೀನಾ ಕಪೂರ್​, ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ನವಾಜುದ್ದೀನ್​ ಸಿದ್ಧಿಖಿ ಸೇರಿದಂತೆ ಎಲ್ಲರ ನಟನೆಯೂ ಗಮನಾರ್ಹವಾಗಿತ್ತು.

ಇದನ್ನೂ ಓದಿ:

ವಿದೇಶದಲ್ಲಿದ್ದಾರಾ ಸಲ್ಮಾನ್​ ಖಾನ್​ ಪತ್ನಿ ನೂರ್​ ಮತ್ತು 17 ವರ್ಷದ ಮಗಳು? ಹೊಸ ರಹಸ್ಯ

‘ಅವರನ್ನು ನೆಲದಲ್ಲಿ ಕೂರಿಸಿದ್ರು, ಬೀದಿ ನಾಯಿ ತೋರಿಸಿದ್ರು’; ನಿರ್ದೇಶಕ ರಾಜಮೌಳಿ ತೀವ್ರ ಬೇಸರ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!