‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​

ಮಾಧ್ಯಮದ ಜತೆಗೆ ಮಾತನಾಡುವಾಗ ಸುನೀಲ್​ಗೆ ರಾಜ್​ ಕುಂದ್ರಾ ಅವರ ಪಾರ್ನ್​ ದಂಧೆ ಬಗ್ಗೆ ಪ್ರಶ್ನಿಸಲಾಗಿದೆ. ಆದರೆ, ಈ ಪ್ರಶ್ನೆಗೆ ಸುನೀಲ್​ ಉತ್ತರ ನೀಡಿಲ್ಲ.

‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​
ಮನೋಜ್​ ಬಾಜಪೇಯಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 25, 2021 | 3:49 PM

ನಟ ಮನೋಜ್​ ಬಾಜ್​ಪೇಯಿ ಬಾಲಿವುಡ್​ನ ಅದ್ಭುತ ನಟ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಫ್ಯಾಮಿಲಿ ಮ್ಯಾನ್​ ಸೀರಿಸ್​ನಲ್ಲಿ ಅವರ ನಟನೆ ನೋಡಿ ಮೆಚ್ಚಿಕೊಳ್ಳದವರಿಲ್ಲ. ಈಗ ಅವರ ವಿರುದ್ಧ ಬಾಲಿವುಡ್​ನ ಕಾಮಿಡಿಯನ್​ ಸುನೀಲ್​ ಪಾಲ್​ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಈ ಆರೋಪ ಕೇಳಿದ ನೆಟ್ಟಿಗರು ಸುನೀಲ್​ ವಿರುದ್ಧ ಸಿಟ್ಟನ್ನು ಹೊರ ಹಾಕಿದ್ದಾರೆ.

ಮಾಧ್ಯಮದ ಜತೆಗೆ ಮಾತನಾಡುವಾಗ ಸುನೀಲ್​ಗೆ ರಾಜ್​ ಕುಂದ್ರಾ ಅವರ ಪಾರ್ನ್​ ದಂಧೆ ಬಗ್ಗೆ ಪ್ರಶ್ನಿಸಲಾಗಿದೆ. ಆದರೆ, ಈ ಪ್ರಶ್ನೆಗೆ ಸುನೀಲ್​ ಉತ್ತರ ನೀಡಿಲ್ಲ. ಬದಲಿಗೆ ಫ್ಯಾಮಿಲಿ ಮ್ಯಾನ್​ ವೆಬ್​ ಸೀರಿಸ್​ ಹಾಗೂ ಮನೋಜ್​ ಬಾಜ್​ಪೇಯಿ ಬಗ್ಗೆ ಸುನೀಲ್​ ಪ್ರತಿಕ್ರಿಯಿಸಿದ್ದಾರೆ. ಇದು ಮಾಧ್ಯಮದವರಿಗೂ ಅಚ್ಚರಿ ಮೂಡಿಸಿದೆ.

‘ಕೆಲ ದೊಡ್ಡ ನಟರು ವೆಬ್​ ಸೀರಿಸ್​ಗಳಲ್ಲಿ ಸೆನ್ಸಾರ್​ಶಿಪ್​ ಇಲ್ಲ ಎಂಬುದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಬರುತ್ತಿರುವ ವೆಬ್​ ಸೀರಿಸ್​ಗಳನ್ನು ಮನೆಯಲ್ಲಿ ಕೂತು ನೋಡೋಕೆ ಸಾಧ್ಯವಿಲ್ಲ. ನನಗೆ ಮನೋಜ್​ ಬಾಜ್​ಪೇಯಿ ಸೇರಿ ಮೂರ್ನಾಲ್ಕು ನಟರು ಇಷ್ಟವಾಗುವುದಿಲ್ಲ. ಮನೋಜ್​​ ಅವರಷ್ಟು ದುರ್ವರ್ತನೆ ತೋರುವ ನಟನನ್ನು ನಾನು ಈವರೆಗೆ ನೋಡಿಲ್ಲ’  ಎಂದಿದ್ದಾರೆ ಅವರು.

‘ನಿಮಗೆ (ಮನೋಜ್​ ಬಾಜ್​ಪೇಯಿ) ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಹೀಗಿರುವಾಗ ಫ್ಯಾಮಿಲಿ ಆಡಿಯನ್ಸ್​ಗಾಗಿ ನೀವೇನು ಮಾಡುತ್ತಿದ್ದೀರಿ? ನಿಮ್ಮ ಪತ್ನಿ ಬೇರೆಯವರ ಜತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ವೆಬ್​ ಸೀರಿಸ್​ಗಳನ್ನು (ದಿ ಫ್ಯಾಮಿಲಿ ಮ್ಯಾನ್​) ಮಾಡುತ್ತಿದ್ದೀರಿ. ನಿರ್ದೇಶಕರು ಲೋನಾವಾಲದಲ್ಲಿ ಏನಾಯಿತು ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಹಾಗೆಯೇ ಉಳಿಸಿದ್ದಾರೆ. ಇದು ವೆಬ್​ ಸೀರಿಸ್​ಗಳೇ? ಫ್ಯಾಮಿಲಿ ಮ್ಯಾನ್​, ಮಿರ್ಜಾಪುರ್​ ವೆಬ್​ ಸೀರಿಸ್​ಗಳು  ಪಾರ್ನ್​ ಸಿನಿಮಾಗಳಿದ್ದಂತೆ. ಇದರಲ್ಲಿ ಸ್ಟಾರ್ ನಟರು​ ನಟಿಸಿದ್ದಾರೆ. ಈ ರೀತಿಯ ವೆಬ್​ ಸೀರಿಸ್​ಗಳನ್ನು ಅಶ್ಲೀಲತೆ ಸಾರುತ್ತವೆ ಎಂದು ಬ್ಯಾನ್​ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುನೀಲ್​ ‘ಪಾರ್ನ್​ ಜಾಲವನ್ನು ಭೇದಿಸಿದ್ದಕ್ಕೆ ಪೊಲೀಸರಿಗೆ ನಾನು ಅಭಿನಂದಿಸುತ್ತೇನೆ. ಈ ರೀತಿಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರನ್ನು ರೂಮ್​ನಲ್ಲಿ ಕೂಡಿಟ್ಟು 100 ದಿನಗಳ ಕಾಲ ಹೊಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

Published On - 3:23 pm, Sun, 25 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ