‘ಆರ್ಆರ್ಆರ್’ ಚಿತ್ರದ ಶೂಟಿಂಗ್ಗಾಗಿ ನಟಿ ವೈಷ್ಣವಿ ಗೌಡ ಹೈದರಾಬಾದ್ಗೆ ಆಗಮಿಸಿದ್ದರು. ಈಗ ಇದರ ಶೂಟಿಂಗ್ ಪೂರ್ಣಗೊಂಡಿದ್ದು, ಆಲಿಯಾ ಮುಂಬೈಗೆ ತೆರಳಿದ್ದಾರೆ. ಅದಕ್ಕೂ ಮೊದಲು ಆಲಿಯಾ ಹೈದರಾಬಾದ್ನಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಲಿಯಾ ಫಿಟ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ಶೂಟಿಂಗ್ ಮಧ್ಯೆಯೂ ಆಲಿಯಾ ಜಿಮ್ನಲ್ಲಿ ಸಮಯ ಕಳೆದಿದ್ದಾರೆ. ಈಗ ಅವರು ಸಡಕ್ 2 ಸಿನಿಮಾದ ಹೀರೋ ಜೀಶು ಸೇನ್ಗುಪ್ತಾ ಜತೆ ಜಿಮ್ನಲ್ಲಿ ವರ್ಕೌಟ್ ಮಾಡಿದ್ದಾರೆ. ಜೀಶು ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ನಟನೆಯ ‘ಆರ್ಆರ್ಆರ್’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಲಾಕ್ಡೌನ್ ಮುಗಿದ ಬಳಿಕ ಚಿತ್ರದ ಶೂಟಿಂಗ್ಗೆ ಚುರುಕು ಮುಟ್ಟಿಸಲಾಗಿದೆ. ರಾಜಮೌಳಿ ಸಾರಥ್ಯದಲ್ಲಿ ಆರ್ಆರ್ಆರ್ ಮೂಡಿಬರುತ್ತಿದ್ದು, ಇತ್ತೀಚೆಗ ಅದರ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು.
View this post on Instagram
ಕೊಮರಾಮ್ ಭೀಮ್ ಪಾತ್ರಕ್ಕೆ ಜ್ಯೂ. ಎನ್ಟಿಆರ್ ಬಣ್ಣ ಹಚ್ಚಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅ.13ರಂದು ಆರ್ಆರ್ಆರ್ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. ಅಂದುಕೊಂಡ ದಿನಾಂಕದಲ್ಲೇ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಇಡೀ ತಂಡ ಶ್ರಮವಹಿಸುತ್ತಿದೆ.
ಇದನ್ನೂ ಓದಿ: ಮತ್ತೆ ಮತ್ತೆ ಆಲಿಯಾ ಭಟ್ ಬೇಕು ಎಂದು ಬಯಸಿದ ರಾಮ್ ಚರಣ್; ಏನಿದು ವಿಷ್ಯ?
ರಾಮ್ ಚರಣ್ Vs ಜ್ಯೂ. ಎನ್ಟಿಆರ್; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್ ಏನು?