ವಿಡಿಯೋದಲ್ಲಿ ಅಪ್ಪನ ಜೊತೆಯೇ ಲೈಂಗಿಕತೆ, ಪ್ರೆಗ್ನೆನ್ಸಿ, ಡ್ರಗ್ಸ್​ ಬಗ್ಗೆ ಮಾತಾಡಿದ ಆಲಿಯಾಗೆ ನೆಟ್ಟಿಗರಿಂದ ಕೆಟ್ಟ ಕಮೆಂಟ್​

ಎಷ್ಟೋ ಜನರ ಮನಸ್ಸಿನಲ್ಲಿ ಇಂಥ ವಿಷಯಗಳ ಬಗ್ಗೆ ಪ್ರಶ್ನೆ ಇರುತ್ತದೆ. ಆದರೆ ಅವುಗಳನ್ನು ತಂದೆ-ತಾಯಿ ಜೊತೆ ಹೇಳಿಕೊಳ್ಳಲು ಅವರು ಹಿಂಜರಿಯುತ್ತಾರೆ ಎಂದು ಆಲಿಯಾ ಕಶ್ಯಪ್​ ಹೇಳಿದ್ದಾರೆ.

ವಿಡಿಯೋದಲ್ಲಿ ಅಪ್ಪನ ಜೊತೆಯೇ ಲೈಂಗಿಕತೆ, ಪ್ರೆಗ್ನೆನ್ಸಿ, ಡ್ರಗ್ಸ್​ ಬಗ್ಗೆ ಮಾತಾಡಿದ ಆಲಿಯಾಗೆ ನೆಟ್ಟಿಗರಿಂದ ಕೆಟ್ಟ ಕಮೆಂಟ್​
ವಿಡಿಯೋದಲ್ಲಿ ಅಪ್ಪನ ಜೊತೆಯೇ ಲೈಂಗಿಕತೆ, ಪ್ರೆಗ್ನೆನ್ಸಿ, ಡ್ರಗ್ಸ್​ ಬಗ್ಗೆ ಮಾತಾಡಿದ ಆಲಿಯಾಗೆ ನೆಟ್ಟಿಗರಿಂದ ಕೆಟ್ಟ ಕಮೆಂಟ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 26, 2021 | 9:30 AM

ಬೋಲ್ಡ್​ ಆದಂತ ಸಿನಿಮಾಗಳಿಂದ ಫೇಮಸ್​ ಆದವರು ನಿರ್ದೇಶಕ ಅನುರಾಗ್​ ಕಶ್ಯಪ್​. ‘ಗ್ಯಾಂಗ್ಸ್ ಆಫ್ ವಸ್ಸೇಪುರ್​​’ ರೀತಿಯ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ರಿಯಲ್ ಲೈಫ್​ನಲ್ಲಿಯೂ ಅವರದ್ದು ನೇರ ನಡೆ-ನುಡಿ. ಬೋಲ್ಡ್​ ಹೇಳಿಕೆಗಳ ಮೂಲಕವೂ ಅವರು ಆಗಾಗ ಸುದ್ದಿ ಆಗುತ್ತಾರೆ. ಈ ವಿಚಾರದಲ್ಲಿ ಅವರ ಪುತ್ರಿ ಆಲಿಯಾ ಕಶ್ಯಪ್​ (Aaliyah Kashyap) ಕೂಡ ಕಮ್ಮಿಯೇನಲ್ಲ. ಆ ಕಾರಣದಿಂದ ಆಲಿಯಾ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ಗೆ (Troll) ಒಳಗಾಗುತ್ತಾರೆ. ಆ ಬಗ್ಗೆ ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಆಲಿಯಾ ಕಶ್ಯಪ್​ ಅವರು ಯೂಟ್ಯೂಬ್​ನಲ್ಲಿ ತಮ್ಮದೇ ಚಾನೆಲ್​ ಶುರು ಮಾಡಿದ್ದಾರೆ. ಅದರಲ್ಲಿ ಅವರು ಹಲವು ಬಗೆಯ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಾರೆ. ಆ ಪೈಕಿ ಒಂದು ವಿಡಿಯೋದಲ್ಲಿ ಅವರು ತಮ್ಮ ತಂದೆ ಅನುರಾಗ್​ ಕಶ್ಯಪ್​ ಜೊತೆ ಲೈಂಗಿಕತೆ, ಡ್ರಗ್ಸ್​, ಪ್ರೆಗ್ನೆನ್ಸಿ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು. ಆ ವಿಡಿಯೋ ನೋಡಿದ ಬಹುತೇಕರಿಗೆ ಅದೇಕೋ ಸರಿ ಎನಿಸಿಲ್ಲ. ಹಾಗಾಗಿ ಆಲಿಯಾರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು.

‘ಇಂಥ ಪ್ರಗತಿಪರ ತಂದೆ-ತಾಯಿ ಇರುವುದು ಎಷ್ಟು ಒಳ್ಳೆಯದಲ್ಲವೇ ಎಂದು ಅನೇಕರು ನನಗೆ ಮೆಸೇಜ್​ ಮಾಡಿದರು. ಎಷ್ಟೋ ಜನರ ಮನಸ್ಸಿನಲ್ಲಿ ಇಂಥ ವಿಷಯಗಳ ಬಗ್ಗೆ ಪ್ರಶ್ನೆ ಇರುತ್ತದೆ. ಆದರೆ ಅವುಗಳನ್ನು ತಂದೆ-ತಾಯಿ ಜೊತೆ ಹೇಳಿಕೊಳ್ಳಲು ಅವರು ಹಿಂಜರಿಯುತ್ತಾರೆ. ಅಂಥವರ ಪ್ರಶ್ನೆಗಳಿಗೆ ಉತ್ತರ ಸಿಗಲು ಒಂದು ವೇದಿಕೆಯ ಅವಶ್ಯಕತೆ ಇದೆ. ಆದರೆ ಇನ್ನೊಂದು ವರ್ಗದ ಜನರಿಗೆ ಈ ರೀತಿಯ ವಿಚಾರಗಳನ್ನು ಚರ್ಚೆ ಮಾಡುವುದು ಸರಿ ಎನಿಸುವುದಿಲ್ಲ’ ಎಂದು ಆಲಿಯಾ ಹೇಳಿದ್ದಾರೆ.

‘ನನ್ನ ಆ ವಿಡಿಯೋಗೆ ಬಂದಿರುವ ಕೆಲವು ಕಮೆಂಟ್​ಗಳನ್ನು ನೀವು ನೋಡಬೇಕು. ಸೆಕ್ಸ್​, ಪ್ರೆಗ್ನೆನ್ಸಿ, ಡ್ರಗ್ಸ್​ ಬಗ್ಗೆ ತಂದೆಯ ಜೊತೆ ಚರ್ಚೆ ಮಾಡಿದ್ದಕ್ಕಾಗಿ ಜನರು ನನ್ನನ್ನು ತೀವ್ರವಾಗಿ ದ್ವೇಷ ಮಾಡಿದ್ದಾರೆ. ನಾಚಿಕೆ ಆಗಬೇಕು. ಅಪ್ಪನ ಜೊತೆ ಯಾರಾದರೂ ಇಂಥದ್ದೆಲ್ಲ ಮಾತಾಡ್ತಾರಾ ಎಂದೆಲ್ಲ ಜನರು ಕಮೆಂಟ್​ ಮಾಡಿದ್ದಾರೆ’ ಎಂದು ಆಲಿಯಾ ಹೇಳಿಕೊಂಡಿದ್ದಾರೆ.

‘ನಾನು ನನ್ನ ತಂದೆ-ತಾಯಿ ಜೊತೆ ತುಂಬ ಮುಕ್ತವಾಗಿ ಮಾತನಾಡುತ್ತೇನೆ. ಅವರು ನನ್ನ ಜೊತೆ ಸ್ನೇಹಿತರ ರೀತಿ ಇದ್ದಾರೆ’ ಎಂದು ಸಹ ಆಲಿಯಾ ಹೇಳಿದ್ದಾರೆ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ