AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

India vs Sri Lanka T20 Series Full Schedule: ಪೃಥ್ವಿ ಶಾ , ಶಿಖರ್ ಧವನ್ (ನಾಯಕ) , ಸಂಜು ಸ್ಯಾಮ್ಸನ್ , ಮನೀಶ್ ಪಾಂಡೆ , ಸೂರ್ಯಕುಮಾರ್ ಯಾದವ್ , ನಿತೀಶ್ ರಾಣಾ , ಹಾರ್ದಿಕ್ ಪಾಂಡ್ಯ , ಕೃಷ್ಣಪ್ಪ ಗೌತಮ್ , ರಾಹುಲ್ ಚಹರ್ , ನವದೀಪ್ ಸೈನಿ , ಚೇತನ್ ಸಕರಿಯಾ, ದೇವದತ್ ಪಡಿಕ್ಕಲ್

India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
IND vs SL T20 Schedule
TV9 Web
| Updated By: ಝಾಹಿರ್ ಯೂಸುಫ್|

Updated on: Jul 24, 2021 | 2:44 PM

Share

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯವನ್ನು ಭಾರತ 7 ವಿಕೆಟ್​ಗಳಿಂದ ಗೆದ್ದುಕೊಂಡರೆ, 2ನೇ ಪಂದ್ಯದಲ್ಲಿ 3 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಲಂಕಾ 3 ವಿಕೆಟ್​​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು. ಶಿಖರ್ ಧವನ್ ನೇತೃತ್ವದಲ್ಲಿ ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಯುವ ಪಡೆ ಇದೀಗ ಟಿ20 ಸರಣಿಗೆ ಸಜ್ಜಾಗುತ್ತಿದೆ. ಇದೇ ಭಾನುವಾರದಿಂದ ಶ್ರೀಲಂಕಾ ವಿರುದ್ದದ ಚುಟುಕು ಕದನಕ್ಕೆ ಚಾಲನೆ ಸಿಗಲಿದೆ.

ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಜುಲೈ 25 ರಂದು ನಡೆಯಲಿದ್ದು, ಎರಡನೇ ಪಂದ್ಯ ಜುಲೈ 27 ರಂದು ಆಯೋಜಿಸಲಿದೆ. ಹಾಗೆಯೇ ಅಂತಿಮ ಟಿ20 ಪಂದ್ಯವನ್ನು ಜುಲೈ 29 ರಂದು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಪಂದ್ಯಗಳು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ಇಂಡಿಯಾ ಪಡೆದುಕೊಂಡಿದ್ದು ಸೋನಿ ಟೆನ್ 1, ಸೋನಿ ಟೆನ್ 3, ಸೋನಿ ಟೆನ್ 4 ಹಾಗೂ ಸೋನಿ ಸಿಕ್ಸ್‌ ಚಾನೆಲ್‌ಗಳಲ್ಲಿ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದು.

ಟಿ20 ಸರಣಿಗಾಗಿ ಆಯ್ಕೆಯಾಗಿರುವ ಟೀಮ್ ಇಂಡಿಯಾ ಹೀಗಿದೆ:- ಪೃಥ್ವಿ ಶಾ , ಶಿಖರ್ ಧವನ್ (ನಾಯಕ) , ಸಂಜು ಸ್ಯಾಮ್ಸನ್ , ಮನೀಶ್ ಪಾಂಡೆ , ಸೂರ್ಯಕುಮಾರ್ ಯಾದವ್ , ನಿತೀಶ್ ರಾಣಾ , ಹಾರ್ದಿಕ್ ಪಾಂಡ್ಯ , ಕೃಷ್ಣಪ್ಪ ಗೌತಮ್ , ರಾಹುಲ್ ಚಹರ್ , ನವದೀಪ್ ಸೈನಿ , ಚೇತನ್ ಸಕರಿಯಾ, ದೇವದತ್ ಪಡಿಕ್ಕಲ್ , ಇಶಾನ್ ಕಿಶನ್ ,ಕೃನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ರುತುರಾಜ್ ಗಾಯಕವಾಡ್ , ಕುಲದೀಪ್ ಯಾದವ್ , ವರುಣ್ ಚಕ್ರವರ್ತಿ

ಟಿವಿ9 ಹೌಝಾಟ್​ನಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ: ನೀವು ಕ್ರಿಕೆಟ್ ಪ್ರೇಮಿಗಳಾ…ಅದರಲ್ಲೂ ಕನ್ನಡದಲ್ಲೇ ಕ್ರಿಕೆಟ್ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಲು ಬಯಸುತ್ತೀರಾ…ಅದರೊಂದಿಗೆ ಕ್ರಿಕೆಟ್ ಪಂದ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೀರಾ…ಹಾಗಿದ್ರೆ ಟಿವಿ9 ಕನ್ನಡ ಒದಗಿಸುತ್ತಿದೆ ಸುವರ್ಣಾವಕಾಶ. ಹೌದು, ಟಿವಿ9 ಕನ್ನಡ ಡಿಜಿಟಲ್ ‘ಹೌಝಾಟ್’ ಎನ್ನುವ ವಿಭಿನ್ನ ವೇದಿಕೆ ರೂಪಿಸಿದೆ. ಈ ಪ್ಲಾಟ್​ಫಾರ್ಮ್​ ಮೂಲಕ ನೀವು ಪಂದ್ಯ ವೀಕ್ಷಿಸುತ್ತಲೇ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿದೆ ಅವಕಾಶ. ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯದ ವೇಳೆ ಟಿವಿ9 ಡಿಜಿಟಲ್​ನಲ್ಲಿ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ ಇರಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ ಸಿಗಲಿದೆ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್​ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಮಾಜಿ ಟೆಸ್ಟ್ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಜನಪ್ರಿಯ ಕನ್ನಡ ವೀಕ್ಷಕ ವಿವರಣೆಕಾರ ನವೀನ್ ಶೌರಿ ಮತ್ತು ನಮ್ಮ ಆ್ಯಂಕರ್ ಅವಿನಾಶ್ ಜೊತೆ ನೀವು ಮಾತಾಡಬಹುದು. ಬನ್ನಿ ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ.

ಏನಿದು ಟಿವಿ9 ಹೌಝಾಟ್? ಟಿವಿ9 ಡಿಜಿಟಲ್ ಪ್ಲಾಟ್​ಫಾರ್ಮ್​​ಗಳಾದ ಯುಟ್ಯೂಬ್ ಹಾಗೂ ಫೇಸ್​ಬುಕ್ ಮೂಲಕ ನೀವು ಕ್ರಿಕೆಟ್​ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಎರಡು ಪ್ಲಾಟ್​ಫಾರ್ಮ್​​ನಲ್ಲೂ ಕ್ರಿಕೆಟ್ ಪಂದ್ಯಗಳಿರುವ ದಿನ ಲೈವ್ ಸಂವಾದ ಹಾಗೂ ವಿಶ್ಲೇಷಣೆ ಇರಲಿದೆ. ಈ ವೇಳೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಾಗೂ ಕರೆ ಮಾಡಿ ತಿಳಿಸಬಹುದು. ಉದಾಹರಣೆಗೆ ಪಂದ್ಯದ ಟಾಸ್ ಭವಿಷ್ಯ, ಪ್ಲೇಯಿಂಗ್ ಇಲೆವೆನ್, ಪಂದ್ಯದ ಸೋಲಿಗೆ ಕಾರಣ, ತಂಡದ ಆಯ್ಕೆ ಹೇಗಿರಬೇಕಿತ್ತು, ಯಾರಿಗೆ ಅವಕಾಶ ನೀಡಬೇಕಿತ್ತು ಎಂಬಿತ್ಯಾದಿ ವಿಷಯಗಳನ್ನು ಮಾಜಿ ಕ್ರಿಕೆಟರುಗಳೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು. ಅಥವಾ ಕಮೆಂಟ್ ಮೂಲಕ ತಿಳಿಸಿ ನಿಮ್ಮ ಕ್ರಿಕೆಟ್ ಪಾಂಡಿತ್ಯವನ್ನು ಇಡೀ ಕರ್ನಾಟಕಕ್ಕೆ ಪ್ರದರ್ಶಿಸಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ..ಭಾನುವಾರ ಸಂಜೆ 7 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, 08022360301/ 05 ನಂಬರ್​ಗಳಿಗೆ ಕರೆ ಮಾಡಿ ಪಂದ್ಯದ ಕುರಿತಾದ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಹಾಗಿದ್ರೆ ಪಂದ್ಯದ ವಿಶ್ಲೇಷಕರಿಗೆ ಹಾಗೂ ಮಾಜಿ ಕ್ರಿಕೆಟರುಗಳಿಗೆ ನಿಮ್ಮ ಪ್ರಶ್ನೆಗಳ ಬೌನ್ಸರ್​ಗಳನ್ನು ಎಸೆಯಲು ನೀವು ರೆಡಿಯಾಗಿರುತ್ತೀರಿ ಅಲ್ಲವೇ..?

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ