AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಿಂದ ಒಂದೇ ವಾರದಲ್ಲಿ ಎಲಿಮಿನೇಟ್​ ಆಗಲಿದ್ದಾರೆ ಮೂರು ಸ್ಪರ್ಧಿಗಳು?

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಒಂದೇ ವಾರದಲ್ಲಿ ಎಲಿಮಿನೇಟ್​ ಆಗಲಿದ್ದಾರೆ ಮೂರು ಸ್ಪರ್ಧಿಗಳು?
ಕಿಚ್ಚ ಸುದೀಪ್​
TV9 Web
| Edited By: |

Updated on:Jul 28, 2021 | 2:48 PM

Share

‘ಕನ್ನಡ ಬಿಗ್​ ಬಾಸ್ ಸೀಸನ್​ 8​’ ಫಿನಾಲೆಗೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿವೆ. ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದ್ದು, ಕಾಂಪಿಟೇಷನ್​ ಹೆಚ್ಚುತ್ತಿದೆ. ಈ ಮಧ್ಯೆ ಒಬ್ಬೊಬ್ಬರಾಗಿಯೇ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಷನ್​ ಆಗುತ್ತಿದ್ದಾರೆ. ಸದ್ಯ, ಬಿಗ್​ ಬಾಸ್​ ಮನೆಯಲ್ಲಿ ಎಂಟು ಜನರಿದ್ದು, ಒಂದೇ ವಾರದಲ್ಲಿ ಮೂವರು ಎಲಿಮಿನೇಟ್​ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಈ ವಾರ ಹಾಗಾಗಿಲ್ಲ. ವಾರದ ಮಧ್ಯದಲ್ಲೆ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಚಕ್ರವರ್ತಿ ಚಂದ್ರಚೂಡ್​ ಮನೆಯಿಂದ ಹೊರ ಹೋಗುತ್ತಿದ್ದಂತೆ ಈ ವಾರದ ಎಲಿಮಿನೇಷನ್​ಗೆ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಫಿನಾಲೆ ವಾರಕ್ಕೆ ಐದು ಜನರನ್ನು ಉಳಿಸಿಕೊಳ್ಳಲಾಗುತ್ತದೆ. ಈಗ ಉಳಿದುಕೊಂಡವರು ಎಂಟು ಸ್ಪರ್ಧಿಗಳು. ಹೀಗಾಗಿ, ಈ ವಾರ ಡಬಲ್​ ಎಲಿಮಿನೇಷನ್​ ನಡೆದು, ಮುಂದಿನ ವಾರದ ಆರಂಭದಲ್ಲಿ ಒಬ್ಬರನ್ನು ಎಲಿಮಿನೇಷನ್​ ಮಾಡಬಹುದು ಅಥವಾ ಇದೇ ವಾರದಲ್ಲಿ ಮೂವರು ಎಲಿಮಿನೇಟ್​ ಆಗಬಹುದು. ಹೀಗಾಗಿ, ಏಳು ದಿನಗಳ ಅಂತರದಲ್ಲಿ ಮೂವರು ಎಲಿಮಿನೇಟ್​ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಇನ್ನು, ಫಿನಾಲೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಅನೇಕರು ತಮ್ಮತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಂಜು, ಅರವಿಂದ್ ಕೆ.ಪಿ. ಹಾಗೂ ವೈಷ್ಣವಿ ಬಗ್ಗೆ ವೀಕ್ಷಕರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಇವರ ಪೈಕಿ ಫಿನಾಲೆ ಯಾರು ಗೆಲ್ಲಲಿದ್ದಾರೆ ಅನ್ನೋದು ಆಗಸ್ಟ್​ 8ಕ್ಕೆ ತಿಳಿಯಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಬಿಗ್​ ಟ್ವಿಸ್ಟ್​; ಈ ವಾರದ ಎಲಿಮಿನೇಷನ್​ ನೋಡಿ ಚಕಿತಗೊಂಡ ಫ್ಯಾನ್ಸ್​

ಬಿಗ್​ ಬಾಸ್​ ಮನೆಯಲ್ಲಿ ಮಂಗಳವಾರ ನಡೆಯಿತು ಎಲಿಮಿನೇಷನ್​; ದೊಡ್ಮನೆಯಿಂದ ಔಟ್​ ಆಗಿದ್ದು ಇವರೇ

Published On - 2:41 pm, Wed, 28 July 21