ಬಿಗ್​ ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ ನಿರ್ಧಾರ ಆಗೋದು ಹೇಗೆ? ಇಲ್ಲಿದೆ ದೊಡ್ಮನೆ ಸೀಕ್ರೆಟ್​

ಬಿಗ್​ ಬಾಸ್​ನಲ್ಲಿ ಸ್ಪರ್ಧಿಗಳಿಗೆ ನೀಡಲಾಗುವ ಟಾಸ್ಕ್​ಗಳ ಬಗ್ಗೆ ವೀಕ್ಷಕರಿಗೆ ಪ್ರತಿ ದಿನ ಕುತೂಹಲ ಇರುತ್ತದೆ. ಈ ಟಾಸ್ಕ್​ಗಳನ್ನು ಆಯೋಜನೆ ಮಾಡುವುದರ ಹಿಂದೆ ಒಂದು ದೊಡ್ಡ ತಂಡ ಕೆಲಸ ಮಾಡುತ್ತಿರುತ್ತದೆ.

ಕಿರುತೆರೆಯಲ್ಲಿ ಬಿಗ್​ ಬಾಸ್​ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಕನ್ನಡದಲ್ಲಿ ಬಿಗ್​ ಬಾಸ್​ 8ನೇ ಸೀಸನ್​ ಯಶಸ್ವಿಯಾಗಿ ನಡೆದುಕೊಂಡುಬರುತ್ತಿದ್ದು, ಫಿನಾಲೆ ಸಮೀಪಿಸುತ್ತಿದೆ. ಈವರೆಗೂ ಎಲ್ಲ ಸ್ಪರ್ಧಿಗಳಿಗೆ ಬಗೆಬಗೆಯ ಟಾಸ್ಟ್​ಗಳನ್ನು ನೀಡಲಾಗಿದೆ. ಹಾಗಾದರೆ ಈ ಟಾಸ್ಕ್​ಗಳ ಹಿಂದಿನ ಮಾಸ್ಟರ್​ ಮೈಂಡ್​ ಯಾರು? ಯಾವ ದಿನ ಯಾವ ಟಾಸ್ಕ್​ ನೀಡಬೇಕು ಎಂದು ನಿರ್ಧರಿಸೋದು ಹೇಗೆ? ಈ ಎಲ್ಲ ವಿಚಾರಗಳ ಬಗ್ಗೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಡೈರೆಕ್ಟರ್​ ಜಯದೇವ್​ ಶ್ರೀನಿವಾಸ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಫಿನಾಲೆಗೆ ಯಾರು ಕಾಲಿಡುತ್ತಾರೆ? ಬಿಗ್​ ಬಾಸ್​ ಟ್ರೋಫಿ ಯಾರ ಪಾಲಾಗಲಿದೆ ಎಂಬ ಕೌತುಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಲ್ಲಿ ಮಂಗಳವಾರ ನಡೆಯಿತು ಎಲಿಮಿನೇಷನ್​; ದೊಡ್ಮನೆಯಿಂದ ಔಟ್​ ಆಗಿದ್ದು ಇವರೇ

ಅರವಿಂದ್​ಗೆ ಗೆಲುವಿನ ಮಾಲೆ, ಮಂಜು ರನ್ನರ್​ ಅಪ್​; ಇದು ಬಿಗ್​ ಬಾಸ್​ ಮನೆ ಭವಿಷ್ಯ

Click on your DTH Provider to Add TV9 Kannada