ಕೃಷ್ಣಮೃಗಗಳ ಹಿಂಡು ಪಾರ್ಕಿನಲ್ಲಿ ಜಿಗಿಯುತ್ತಾ ರಸ್ತೆ ದಾಟುವ ದೃಶ್ಯ ನೋಡಿ ಮೋಡಿಗೊಳಗಾದ ಪ್ರಧಾನಿ ಮೋದಿ, ‘ಅದ್ಭುತ’ ಅಂತ ಉದ್ಗರಿಸಿದರು!

ವಾರ್ತಾ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಈ ಹಿಂಡಿನಲ್ಲಿ ಕನಿಷ್ಟ 3,000 ಕೃಷ್ಣಮೃಗಗಳಿವೆ. ಅವು ಗುಂಪಾಗಿ ಓಡುತ್ತಾ ಗಾಳಿಯಲ್ಲಿ ಜಿಗಿಯುತ್ತಾ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತದೆ.

ನವದೆಹಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿಸರ್ಗ ಪ್ರೇಮಿ ಅಂತ ಭಾರತೀಯರಿಗೆಲ್ಲ ಗೊತ್ತು. ಪ್ರಕೃತಿಯ ರಮಣೀಯತೆ, ಅದರ ವೈಶಿಷ್ಟ್ಯತೆ ಮತ್ತು ವೈಚಿತ್ರ್ಯಗಳು ತಮ್ಮನ್ನು ಮೋಡಿ ಮಾಡುತ್ತವೆ ಅಂತ ಅವರು ಸಾರ್ವಜನಿಕ ಸಭೆಗಳಲ್ಲಿ ಮತ್ತು ತಮ್ಮ ಮಾಸಿಕ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದದಲ್ಲಿ ಹೇಳುವುದನ್ನು ನಾವು ಕೇಳಿದ್ದೇವೆ. ಅವರ ನಿಸರ್ಗ ಪ್ರೇಮಕ್ಕೆ ಗುಜರಾತಿನ ವಾರ್ತಾ ಇಲಾಖೆ ಪೊಸ್ಟ್ ಮಾಡಿರುವ ಈ ವಿಡಿಯೋ ಇನ್ನೊಂದು ಸಾಕ್ಷಿಯಾಗಿದೆ. ನೂರಾರು ಕೃಷ್ಣಮೃಗಗಳ ಹಿಂಡು ಭಾವನಗರ ಜಿಲ್ಲೆಯ ವೆಲಾವದರ್ ಕೃಷ್ಣಮೃಗ ರಾಷ್ಟ್ರೀಯ ಪಾರ್ಕ್​ನಲ್ಲಿ ಮೈ ನವಿರೇಳಿಸುವ ಸಂಯೋಜನೆಯೊಂದಿಗೆ ರಸ್ತೆ ದಾಟುವ ದೃಶ್ಯದ ವಿಡಿಯೋವನ್ನು ಪ್ರಧಾನಿಗಳು ರೀಟ್ವೀಟ್​ ಮಾಡಿದ್ದಾರೆ.

ಕೇವಲ ರೀಟ್ವೀಟ್ ಮಾಡಿದ್ದಷ್ಟೇ ಅಲ್ಲ, ‘Excellent!’ ಅಂತ ವರ್ಣನೆ ಕೂಡ ಪ್ರಧಾನಿ ಮಾಡಿದ್ದಾರೆ.
ವಾರ್ತಾ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಈ ಹಿಂಡಿನಲ್ಲಿ ಕನಿಷ್ಟ 3,000 ಕೃಷ್ಣಮೃಗಗಳಿವೆ. ಅವು ಗುಂಪಾಗಿ ಓಡುತ್ತಾ ಗಾಳಿಯಲ್ಲಿ ಜಿಗಿಯುತ್ತಾ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತದೆ.

ಕೃಷ್ಣಮೃಗಗಳು ಸಂರಕ್ಷಿತ ಪ್ರಾಣಿಗಳಾಗಿದ್ದು, ವನ್ಯಜೀವಿ ಕಾಯ್ದೆ 1972 ರ ಅಡಿಯಲ್ಲಿ ಅವುಗಳನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ ಕಥೆ ನಿಮಗೆ ನೆನಪಿದೆ ತಾನೆ? ಭಾರತದಲ್ಲಿ ಮೊದಲು ಅಪಾರ ಸಂಖ್ಯೆಯಲ್ಲಿ ಲಭ್ಯವಿದ್ದ ಈ ಸುಂದರ ಪ್ರಾಣಿಗಳು ಈಗ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಗುಂಪಿಗೆ ಸೇರಿವೆ.

ಇದನ್ನೂ ಓದಿ: Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್

Click on your DTH Provider to Add TV9 Kannada