ಮಂಗನಿಂದ ಮಾನವನೆಂಬ ಅಂಶವನ್ನು ಈ ತಾಯಿ ಮಂಗ ಅಕ್ಷರಶಃ ಸಾಬೀತು ಮಾಡುತ್ತಿದೆ! ವಿಡಿಯೋವನ್ನೊಮ್ಮೆ ನೋಡಿ
ಈ ವಿಡಿಯೋ ನೋಡುತ್ತಿದ್ದರೆ, ‘ಮಂಗನಿಂದ ಮಾನವ’ ಅಂತ ಹೇಳುತ್ತಾರಲ್ಲ... ಅದು ಅಕ್ಷರಶಃ ನಿಜವೆನಿಸುತ್ತದೆ! ನಮ್ಮ ಸಮುದಾಯಗಳ ತಾಯಂದಿರು ಮಕ್ಕಳಿಗೆ ಸ್ನಾನ ಮಾಡಿಸುವ ರೀತಿಯಲ್ಲೇ ಈ ಮಂಗ ತನ್ನ ಮರಿಗೆ ಸ್ನಾನ ಮಾಡಿಸುತ್ತಿದೆ.
ನಮಗೆಲ್ಲ ಗೊತ್ತಿರುವ ಜಾಗತಿಕ ಸತ್ಯವೆಂದರೆ, ತಾಯಿ ಶ್ರೀಮಂತೆಯಾಗಿರಲಿ ಅಥವಾ ಬಡವಿ, ತನ್ನ ಮಗುವಿಗೆ ಆಕೆಯೇ ಮೊದಲ ಗುರು. ಆಕೆಯ ಆರೈಕೆಯಲ್ಲೇ ಮಗು ಎಲ್ಲವನ್ನು ಕಲಿಯುತ್ತಾ ಬೆಳೆಯುತ್ತದೆ. ಮನುಷ್ಯರ ಹಾಗೆ ಪ್ರಾಣಿಗಳು ಸಹ ತಮ್ಮ ಸಂತಾನವನ್ನು ಅಷ್ಟೇ ಆರೈಕೆಯಿಂದ, ಪ್ರೀತಿ-ಕರುಣೆ, ವಾತ್ಸಲ್ಯ ಮತ್ತು ಕಕ್ಕುಲತೆಯಿಂದ ಬೆಳಸುತ್ತವೆ. ಅದಕ್ಕೆ ಪೂರಕವೆನಿಸುವ ಅನೇಕ ಚಿತ್ರಗಳನ್ನು, ವಿಡಿಯೋಗಳನ್ನು ನಾವು ನೋಡಿದ್ದೇವೆ ಮತ್ತು ಪತ್ರಿಕೆಗಳಲ್ಲಿ ಅಂಥ ಘಟನೆಗಳ ಬಗ್ಗೆ ಓದಿದ್ದೇವೆ.
ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸುಶಾಂತ್ ನಂದಾ ಅವರು ವನ್ಯಜೀವಿಗಳ ಬಗ್ಗೆ ಬಹಳ ಕುತೂಹಲಕಾರಿ ವಿಡಿಯೋಗಳನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ನಿರಂತರವಾಗಿ ಪೋಸ್ಟ್ ಮಾಡಿರುತ್ತಾರೆ. ಜುಲೈ 27 ರಂದು ತಾಯಿ ಕೋತಿಯೊಂದು ತನ್ನ ಮಗುವಿಗೆ ಅರಣ್ಯಪ್ರದೇಶದ ಒಂದು ಹೊಂಡದಲ್ಲಿ ಸ್ನಾನ ಮಾಡಿಸುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿದ್ದು ಅದನ್ನು ನೆಟ್ಟಿಗರು ಮನಸಾರೆ ಇಷ್ಟಪಟ್ಟು ಲೈಕ್ ಮಾಡುತ್ತಿದ್ದಾರೆ.
ಈ ವಿಡಿಯೋ ನೋಡುತ್ತಿದ್ದರೆ, ‘ಮಂಗನಿಂದ ಮಾನವ’ ಅಂತ ಹೇಳುತ್ತಾರಲ್ಲ… ಅದು ಅಕ್ಷರಶಃ ನಿಜವೆನಿಸುತ್ತದೆ! ನಮ್ಮ ಸಮುದಾಯಗಳ ತಾಯಂದಿರು ಮಕ್ಕಳಿಗೆ ಸ್ನಾನ ಮಾಡಿಸುವ ರೀತಿಯಲ್ಲೇ ಈ ಮಂಗ ತನ್ನ ಮರಿಗೆ ಸ್ನಾನ ಮಾಡಿಸುತ್ತಿದೆ.
ಅನೇಕರು, ಈ ವಿಡಿಯೋಗೆ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜಯಂತಿ ಹೆಸರಿನ ಮಹಿಳೆಯೊಬ್ಬರು, ತಾಯ್ತನ ಎಲ್ಲ ಜೀವಿಗಳಿಗೂ ಕಷ್ಟಕರ ಎಂದು ಹೇಳಿದ್ದಾರೆ.
ವಿಕ್ರಮ್ ಸೂದ್ ಅನ್ನುವವರು, ವಿಡಿಯೋವನ್ನು ‘ಅಬ್ಸಲ್ಯೂಟ್ ಕ್ಲಾಸಿಕ್!’ ಅಂತ ಹೊಗಳಿದ್ದಾರೆ. ಗೋಲಿಮಾಸ್ತ್ರೆ ಅಂತ ಟ್ವಿಟರ್ ಖಾತೆ ಹೊಂದಿರುವವರು, ಎಲ್ಲ ಜೀವ ಸಂಕುಲಕ್ಕೆ ತಾಯಿಯೇ ಮೊದಲ ಗುರು ಎಂದು ಹೇಳಿದ್ದಾರೆ.
ಪಿವಿ ಶಿವಕುಮಾರ್ ಎನ್ನುವವರು, ಭಾರತದ ಅನೇಕ ಮಹಿಳೆಯರು ಹೀಗೆಯೇ, ತಮ್ಮ ಎರಡು ಕಾಲುಗಳ ನಡುವೆ ಮಗುವನ್ನು ಕೂರಿಸಿಕೊಂಡು ಸ್ನಾನ ಹಾಕುತ್ತಾರೆ, ದಕ್ಷಿಣ ಭಾರತದಲ್ಲಿ ಇದು ಬಹಳ ಸಾಮಾನ್ಯವಾಗಿ ಕಂಡುಬರುವ ದೃಶ್ಯ ಎಂದು ಹೇಳಿದ್ದಾರೆ.
This is a absolute classic ~
— Vikram Sood (@midniteviews) July 27, 2021
Many Indian mothers give a similar type of bath by placing the infant between their legs ( spread straight) .In South India it is very common.
— P.V.SIVAKUMAR # ? (@PVSIVAKUMAR1) July 27, 2021
ಇದನ್ನೂ ಓದಿ: Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್