ಖಾರ ಕಾಳು ಕಡುಬು; ಸಂಜೆ ಹೊತ್ತಿಗೆ ಮಾಡಿ ಕುಟುಂಬದವರ ಜತೆ ಸವಿಯಿರಿ

ಖಾರ ಕಾಳು ಕಡುಬು; ಸಂಜೆ ಹೊತ್ತಿಗೆ ಮಾಡಿ ಕುಟುಂಬದವರ ಜತೆ ಸವಿಯಿರಿ

TV9 Web
| Updated By: preethi shettigar

Updated on: Jul 30, 2021 | 3:59 PM

ಮಕ್ಕಳಿಗೆ ಹಿಡಿಸುವ ಹಾಗೆ ಸದಾ ನೂತನ ಶೈಲಿಯ ಮೊರೆ ಹೋಗುತ್ತಾರೆ. ತರಕಾರಿ ಇಷ್ಟ ಪಡದ ಮಕ್ಕಳಿಗೆ ಪೋಷಕಾಂಶ ದೊರೆಯುವಂತೆ ಮಾಡಬೇಕು ಎಂಬ ಹಂಬಲದಲ್ಲಿ ಮಾಡುವ ಅಡುಗೆಯನ್ನು ಹೆಚ್ಚು ಆಕರ್ಷಕವಾಗಿಸುತ್ತಾರೆ.

ಮನೆಯಲ್ಲಿ ಹೊಸತೇನಾದರೂ ತಿಂಡಿ ಮಾಡಿ ಮಕ್ಕಳಿಗೆ ಬಡಿಸಬೇಕು ಎಂಬ ಆಸೆ ಎಲ್ಲಾ ಅಮ್ಮಂದಿರದ್ದು, ಹೀಗಾಗಿ ಮಕ್ಕಳಿಗೆ ಹಿಡಿಸುವ ಹಾಗೆ ಸದಾ ನೂತನ ಶೈಲಿಯ ಮೊರೆ ಹೋಗುತ್ತಾರೆ. ತರಕಾರಿ ಇಷ್ಟ ಪಡದ ಮಕ್ಕಳಿಗೆ ಪೋಷಕಾಂಶ ದೊರೆಯುವಂತೆ ಮಾಡಬೇಕು ಎಂಬ ಹಂಬಲದಲ್ಲಿ ಮಾಡುವ ಅಡುಗೆಯನ್ನು ಹೆಚ್ಚು ಆಕರ್ಷಕವಾಗಿಸುತ್ತಾರೆ. ಹೇಗೆ ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಸಂತೋಷಪಡಿಸುವುದು ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ಖಾರ ಕಾಳು ಕಡುಬು ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಖಾರ ಕಾಳು ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು ಅಕ್ಕಿ ಹಿಟ್ಟು, ಕಲ್ಲುಪ್ಪು, ಉದ್ದಿನ ಬೇಳೆ, ಮೆಂತೆ, ಬೀನ್ಸ್ ಕಾಳು, ಈರುಳ್ಳಿ, ಹುಣಸೆ ಹಣ್ಣು, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಜೀರಿಗೆ, ಲವಂಗ, ಚಕ್ಕೆ, ಕಾಯಿ ತುರಿ, ದನಿಯಾ, ಎಳ್ಳು, ಬೆಲ್ಲ, ಕೊತ್ತಂಬರಿ ಸೊಪ್ಪು, ಗಸಗಸೆ.

ಖಾರ ಕಾಳು ಕಡುಬು ಮಾಡುವ ವಿಧಾನ
ಒಂದು ಕುಕ್ಕರ್ ಇಟ್ಟು, ನೀರು ಹಾಕಿ ಅದು ಕಾದ ಮೇಲೆ, ಕಲ್ಲುಪ್ಪು, ಅಕ್ಕಿ ಹಿಟ್ಟು ಹಾಕಿ 20 ನಿಮಿಷ ಕುದಿಯಲು ಬಿಡಿ. ನಂತರ ನೆನೆಸಿದ ಉದ್ದಿನ ಬೇಳೆ ಮತ್ತು ಮೆಂತೆ ರುಬ್ಬಿಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಅಕ್ಕಿ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಬೇಯಿಸಿದ ಹಿಟ್ಟನ್ನು ಚಿಕ್ಕ ಉಂಡೆ ಆಕಾರಕ್ಕೆ ಮಾಡಿಕೊಳ್ಳಿ. ಬಳಿಕ ಕಡುಬು ಪಾತ್ರೆಗೆ ನೀರು ಹಾಕಿ, ಕಡುಬು ಹಾಕಿ 15 ನಿಮಿಷ ಬೇಯಿಸಿಕೊಳ್ಳಿ.

ಈಗ ಮಸಾಲೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಈರುಳ್ಳಿ, ಹುಣಸೆ ಹಣ್ಣು, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಜೀರಿಗೆ, ಲವಂಗ, ಚಕ್ಕೆ, ಕಾಯಿ ತುರಿ, ದನಿಯಾ, ಎಳ್ಳು, ಬೆಲ್ಲ, ಕೊತ್ತಂಬರಿ ಸೊಪ್ಪು, ಗಸಗಸೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಳಿಕ ಬೇಯಿಸಿದ ಬೀನ್ಸ್ ಕಾಳು ಹಾಕಿ. ಒಂದು ಬಣಾಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಇಂಗು, ಈರುಳ್ಳಿ, ಕರಿ ಬೇವಿನ ಸೊಪ್ಪು, ರುಬ್ಬಿದ ಮಿಶ್ರಣ, ಬೇಯಿಸಿದ ಕಡುಬು ಹಾಕಿ. ಈಗ ಬಿಸಿ ಬಿಸಿಯಾದ ಖಾರ ಕಾಳು ಕಡುಬು ಸವಿಯಲು ಸಿದ್ಧ.

ಇದನ್ನೂ ಓದಿ:
ಮೊಸರು ಪೂರಿ; ಸರಳವಾದ ವಿಧಾನದಲ್ಲಿ ಮಾಡಿ ಸವಿಯಿರಿ

ಮಶ್ರೂಮ್​ ಬಿರಿಯಾನಿ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ