ಕೆಎಸ್ ಈಶ್ವರಪ್ಪ ಜೊತೆ ಶಿವರಾಜ್ಕುಮಾರ್ ನಡೆಸಿದ ಮಾತುಕತೆ ಏನು? ಇಲ್ಲಿದೆ ವಿಡಿಯೋ
ಶಿವರಾಜ್ಕುಮಾರ್ ಅವರು ಈವರೆಗೂ ನೇರವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದವರಲ್ಲ. ಆದರೆ ಅವರ ಕುಟುಂಬಕ್ಕೂ ರಾಜಕೀಯಕ್ಕೂ ನಂಟು ಮೊದಲಿನಿಂದಲೂ ಇದೆ.
ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಮೈಸೂರಿನಲ್ಲಿ ಭೇಟಿ ಆಗಿದ್ದಾರೆ. ಇದೊಂದು ಸಹಜ ಭೇಟಿಯಾಗಿದ್ದು, ಇದಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಇಂದು (ಜು.30) ಆಷಾಢ ಶುಕ್ರವಾರವಾದ ಕಾರಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಈಶ್ವರಪ್ಪ ಬಂದಿದ್ದಾರೆ. ಬಳಿಕ ಉಪಾಹಾರಕ್ಕಾಗಿ ಖಾಸಗಿ ಹೋಟೆಲ್ಗೆ ಅವರು ತೆರಳಿದರು. ಇದೇ ವೇಳೆ ಆ ಹೋಟೆಲ್ನಲ್ಲಿದ್ದ ಶಿವರಾಜ್ಕುಮಾರ್ ಅವರನ್ನು ಈಶ್ವರಪ್ಪ ಭೇಟಿಯಾದರು.
ಶಿವರಾಜ್ಕುಮಾರ್ ಮತ್ತು ಈಶ್ವರಪ್ಪ ಅವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಅವರ ಫಿಟ್ನೆಸ್ಗೆ ಈಶ್ವರಪ್ಪ ಮೆಚ್ಚುಗೆ ಸೂಚಿಸಿದ್ದಾರೆ. ಹೋಟೆಲ್ನಲ್ಲಿದ್ದ ಅಭಿಮಾನಿಗಳು ಇಬ್ಬರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಡಾ. ರಾಜ್ಕುಮಾರ್ ಅವರ ತಂಗಿ (ನಾಗತ್ತೆ) ಅವರನ್ನು ನೋಡಿಕೊಂಡು ಬರಲು ಶಿವರಾಜ್ಕುಮಾರ್ ಗಾಜನೂರಿನತ್ತ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ:
ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್ಕುಮಾರ್; 10 ಲಕ್ಷ ರೂ. ನೆರವು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

