ಗಂಡನ ಪ್ರಮಾದಗಳನ್ನು ಬದಿಗಿಟ್ಟು ಮಾಧ್ಯಮಗಳನ್ನು ದೂಷಿಸಲಾರಂಭಿಸಿದ ನಟಿ ಶಿಲ್ಪಾ ಶೆಟ್ಟಿ

ಅಸಲಿಗೆ, ಶಿಲ್ಪಾ ತನ್ನ ಮತ್ತು ಪತಿಯ ವಿರುದ್ಧ ಯಾವುದೇ ಸುದ್ದಿ ಬಿತ್ತರಿಸದಂತೆ ಮಾಧ್ಯಮಗಳಿಗೆ ತಾಕೀತು ಮಾಡಬೇಕೆಂದು ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ತಮ್ಮಿಬ್ಬರ ಬಗ್ಗೆ ಈಗಾಗಲೇ ಬಿತ್ತರಗೊಂಡಿರುವ ಸುದ್ದಿಗಳನ್ನು ತೆಗೆದುಹಾಕಲು ಮಾಧ್ಯಮಗಳಿಗೆ ಆದೇಶಿಸಬೇಕೆಂದು ಸಹ ಶಿಲ್ಪಾ ತಮ್ಮ ಮನವಿಯಲ್ಲಿ ಅವಲತ್ತುಕೊಂಡಿದ್ದಾರೆ

ನಿನ್ನೆಯವರೆಗೆ ತನ್ನ ಪತಿಯ ಅರೋಪಿತ ಅಪರಾಧಗಳನ್ನು ಅವುಡುಗಚ್ಚಿ ಸಹಿಸಿಕೊಂಡು, ಮನೆಯ ಮಹಜರ್ ನಡೆಸಲು ಪೊಲೀಸರೊಂದಿಗೆ ಮನೆಗೆ ಬಂದಿದ್ದ ಪತಿಯ ಮೇಲೆ ಮನಬಂದಂತೆ ರೇಗಾಡಿ, ಕೂಗಾಡಿ ಮತ್ತು ಜೋರಾಗಿ ಅತ್ತುಬಿಟ್ಟಿದ್ದ ಶಿಲ್ಪಾಶೆಟ್ಟಿಗೆ; ಈಗ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳು ತನ್ನ ಮತ್ತು ಪತಿ ರಾಜ್ ಕುಂದ್ರಾರ ಮಾನ ಹರಾಜು ಹಾಕಿತ್ತಿವೆ ಅನಿಸಿದೆ. ಸೋಶಿಯಲ್ ನೆಟ್ವರ್ಕ್ ಮತ್ತು ನ್ಯೂಸ್ ಚ್ಯಾನೆಲ್ಗಳಲ್ಲಿ ತಮ್ಮಿಬ್ಬರಿಗೆ ಸಂಬಂಧಿಸಿದಂತೆ ಬೇಕಾಬಿಟ್ಟಿ ವರದಿಗಳನ್ನು ಮಾಡಲಾಗುತ್ತಿದೆ, ಇದನ್ನು ಕೂಡಲೇ ನಿಲ್ಲಿಸದಿದ್ದರೆ ಅವುಗಳ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವ ಬೆದರಿಕೆಯನ್ನು ಅವರು ಹಾಕಿದ್ದಾರೆ. ಇದೇ ಬೆದರಿಕೆ ಗಂಡನಿಗೆ ಹಾಕಿದ್ದರೆ ಇಂಥ ದಿನಗಳನ್ನು ನೋಡುವುದು ತಪ್ಪುತ್ತಿತ್ತಲ್ಲ ಶಿಲ್ಪಾ ಮೇಡಂ ಅಂತ ನೆಟ್ಟಿಗರು ಹೇಳುತ್ತಿದ್ದಾರೆ!

ಅಸಲಿಗೆ, ಶಿಲ್ಪಾ ತನ್ನ ಮತ್ತು ಪತಿಯ ವಿರುದ್ಧ ಯಾವುದೇ ಸುದ್ದಿ ಬಿತ್ತರಿಸದಂತೆ ಮಾಧ್ಯಮಗಳಿಗೆ ತಾಕೀತು ಮಾಡಬೇಕೆಂದು ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ತಮ್ಮಿಬ್ಬರ ಬಗ್ಗೆ ಈಗಾಗಲೇ ಬಿತ್ತರಗೊಂಡಿರುವ ಸುದ್ದಿಗಳನ್ನು ತೆಗೆದುಹಾಕಲು ಮಾಧ್ಯಮಗಳಿಗೆ ಆದೇಶಿಸಬೇಕೆಂದು ಸಹ ಶಿಲ್ಪಾ ತಮ್ಮ ಮನವಿಯಲ್ಲಿ ಅವಲತ್ತುಕೊಂಡಿದ್ದಾರೆ. ಹೈಕೋರ್ಟ್ ಜುಲೈ 30 ರಂದು ಅವರ ಅರ್ಜಿಯ ವಿಚಾರಣೆ ನಡೆಸಲಿದೆ.

ವಾಸ್ತವದಲ್ಲಿ ಶಿಲ್ಪಾ ಹತಾಷರಾಗಿದ್ದಾರೆ. ಅವರ ಮಾನವನ್ನು ಹರಾಜಿಗೆ ಹಾಕಿದ್ದು ಮಾಧ್ಯಮಗಳಲ್ಲ, ಅವರ ಪತಿ ರಾಜ್ ಕುಂದ್ರಾ. ಅದು ಅವರಿಗೂ ಗೊತ್ತಿರುವ ವಿಷಯವೇ. ಅದರೆ ತಾನು ಮೌನವಾಗಿದ್ದರೆ, ಪತಿಯನ್ನು ಸಮರ್ಥಸಿಕೊಂಡಂತಾಗುತ್ತದೆ ಅಂತ ಅವರು ಮಾಧ್ಯಮಗಳ ಮೇಲೆ ಹರಿಹಾಯಲಾರಂಭಿಸಿದ್ದಾರೆ. ಮೊನ್ನೆಯಷ್ಟೇ, ಅವರು ನೀಲಿ ಚಿತ್ರ ಮತ್ತು ಎರೋಟಿಕಾ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಅಂತ ಹೇಳಿ ತೇಪೆ ಹಚ್ಚುವ ಪ್ತಯತ್ನ ಮಾಡಿದ್ದರು.

ಆಕೆಯ ಸ್ಥಿತಿ ಕಂಡು ಆಯ್ಯೋ ಪಾಪ ಅನಿಸುತ್ತದೆ, ಅವರ ಅಸಾಹಯಕತೆ ಕಂಡು ಮರುಕ ಹುಟ್ಟುತ್ತದೆ. ಹಾಗಂತ ಅವರು ಮಾಧ್ಯಮಗಳನ್ನು ದೂಷಿಸುವುದು ಸರ್ವಥಾ ಸರಿಯಲ್ಲ.

ಇದನ್ನೂ ಓದಿ: Shilpa Shetty: ಡಾನ್ಸ್​ ಮಾಡುವಾಗಲೇ ಎಡವಿದ ಶಿಲ್ಪಾ ಶೆಟ್ಟಿ; ಜರಾ ದೇಖ್​ ಕೆ ಚಲೋ ಎಂದ ವಿಡಿಯೋ ವೈರಲ್​

Click on your DTH Provider to Add TV9 Kannada