ಕೆಸು ಸಾರು; ಕೊಡಗು ಸ್ಪೆಷಲ್ ಅಡುಗೆ ಮಾಡಿ ಸವಿಯಿರಿ
ಮಳೆಗಾಲದಲ್ಲಿ ಅನೇಕ ವಿಶೇಷ ಮತ್ತು ಅಪರೂಪದ ಅಡುಗೆ ಮಾಡುತ್ತಾರೆ. ಅದರಲ್ಲಿ ಪತ್ರೊಡೆ ಮತ್ತು ಕೆಸುವಿನ ಸಾರು ಹೆಚ್ಚು ಮಾಡಲಾಗುತ್ತದೆ. ಹಾಗಿದ್ದರೆ ಕೆಸುವಿನ ಸಾರು ಹೇಗೆ ಮಾಡುವುದು ಎಂದು ಇಂದು ತಿಳಿದುಕೊಳ್ಳೋಣ.
ಮಳೆಗಾಲ ಬಂತ್ತು ಎಂದರೆ ಹಲಸಿನ ಹಣ್ಣಿನ ಕಡುಬು, ದೋಸೆ, ಮುಳ್ಕ ಮಾಡುತ್ತೇವೆ. ಅದೇ ರೀತಿ ಮಳೆಗಾಲದಲ್ಲಿ ಇನ್ನೂ ಅನೇಕ ವಿಶೇಷ ಮತ್ತು ಅಪರೂಪದ ಅಡುಗೆ ಮಾಡುತ್ತಾರೆ. ಅದರಲ್ಲಿ ಪತ್ರೊಡೆ ಮತ್ತು ಕೆಸುವಿನ ಸಾರು ಹೆಚ್ಚು ಮಾಡಲಾಗುತ್ತದೆ. ಹಾಗಿದ್ದರೆ ಕೆಸುವಿನ ಸಾರು ಹೇಗೆ ಮಾಡುವುದು ಎಂದು ಇಂದು ತಿಳಿದುಕೊಳ್ಳೋಣ.
ಕೆಸು ಸಾರು ಮಾಡಲು ಬೇಕಾಗುವ ಸಾಮಾಗ್ರಿ ಕೆಸು ಸೊಪ್ಪು, ಉಪ್ಪು, ಅರಿಶಿಣ, ಸಾಸಿವೆ, ಕರಿ ಬೇವು, ಬೆಳ್ಳುಳ್ಳಿ, ಗಾಂಧಾರಿ ಮೆಣಸು, ಈರುಳ್ಳಿ, ಸಾಂಬಾರ್ ಪುಡಿ, ನಿಂಬೆ ಹಣ್ಣು.
ಕೆಸು ಸಾರು ಮಾಡುವ ವಿಧಾನ
ಕೆಸುವಿನ ಎಲೆಯನ್ನು ಮೊದಲು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ, ನಂತರ ಅದನ್ನು ಕುಕ್ಕರ್ಗೆ ಹಾಕಿ, ಉಪ್ಪು, ಅರಿಶಿಣ ಹಾಕಿ ಬೇಯಿಸಿ. ನಂತರ ಒಂದು ಬಣಾಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಕರಿ ಬೇವು, ಬೆಳ್ಳುಳ್ಳಿ, ಗಾಂಧಾರಿ ಮೆಣಸು, ಈರುಳ್ಳಿ, ಸಾಂಬಾರ್ ಪುಡಿ, ಬೇಯಿಸಿದ ಕೆಸದ ಸೊಪ್ಪು ಹಾಕಿ ಚೆನ್ನಾಗಿ ಕಲಸಬೇಕು. ನಂತರ ನಿಂಬೆಹಣ್ಣಿನ ರಸ ಹಾಕಿದರೆ, ಬಿಸಿ ಬಿಸಿ ಕೆಸು ಸಾರು ಸವಿಯಲು ಸಿದ್ಧ.
ಇದನ್ನೂ ಓದಿ:
ರಾಜ್ ಕಚೋರಿ: ರಾಜಸ್ಥಾನ ಸ್ಪೆಷಲ್ ಅಡುಗೆ ಮಾಡಿ ಸವಿಯಿರಿ
ಕರಾವಳಿ ಸ್ಪೆಷಲ್ ಪತ್ರೊಡೆ; ಹೊಸ ತರಹದ ಅಡುಗೆಯನ್ನೊಮ್ಮೆ ಮಾಡಿ ಸವಿಯಿರಿ