ರಾಜ್​ ಕಚೋರಿ: ರಾಜಸ್ಥಾನ​ ಸ್ಪೆಷಲ್ ಅಡುಗೆ ಮಾಡಿ ಸವಿಯಿರಿ

ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಹೇಗೆ ಸಂತೋಷಪಡಿಸುವುದು ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ರಾಜ್​ ಕಚೋರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಮನೆಯಲ್ಲಿ ಹೊಸತೇನಾದರೂ ತಿಂಡಿ ಮಾಡಿ ಮಕ್ಕಳಿಗೆ ಬಡಿಸಬೇಕು ಎಂಬ ಆಸೆ ಎಲ್ಲಾ ಅಮ್ಮಂದಿರದ್ದು, ಹೀಗಾಗಿ ಮಕ್ಕಳಿಗೆ ಹಿಡಿಸುವ ಹಾಗೆ ಸದಾ ನೂತನ ಶೈಲಿಯ ಮೊರೆ ಹೋಗುತ್ತಾರೆ. ತರಕಾರಿ ಇಷ್ಟ ಪಡದ ಮಕ್ಕಳಿಗೆ ಪೋಷಕಾಂಶ ದೊರೆಯುವಂತೆ ಮಾಡಬೇಕು ಎಂಬ ಹಂಬಲದಲ್ಲಿ ಮಾಡುವ ಅಡುಗೆಯನ್ನು ಹೆಚ್ಚು ಆಕರ್ಷಕವಾಗಿಸುತ್ತಾರೆ. ಹೇಗೆ ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಹೇಗೆ ಸಂತೋಷಪಡಿಸುವುದು ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ರಾಜ್​ ಕಚೋರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ರಾಜ್​ ಕಚೋರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಕಡಲೆ ಹಿಟ್ಟು, ಆಮ್ ಚೂರ್​ ಪುಡಿ​, ದನಿಯಾ ಪುಡಿ, ಸೋಂಪು, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು, ಅರಿಶಿಣ, ಕೊತ್ತಂಬರಿ ಕಾಳು, ಗರಂ ಮಸಾಲಾ, ಇಂಗು, ಹೆಸರು ಬೇಳೆ, ಗೋಧಿ ಹಿಟ್ಟು, ಮೈದಾ ಹಿಟ್ಟು. ಪುದೀನಾ ಚಟ್ನಿ, ಹುಳಿ ಸಿಹಿ ಚಟ್ನಿ, ದಾಳಿಂಬೆ, ಚ್ಯಾಟ್​ ಮಸಾಲಾ, ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬಿಟ್​ರೂಟ್​, ಮೊಸರು.

ರಾಜ್​ ಕಚೋರಿ ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸೋಂಪು, ಕೊತ್ತಂಬರಿ ಕಾಳು, ಜೀರಿಗೆ ಪುಡಿ, ದನಿಯಾ ಪುಡಿ, ಆಮ್ ಚೂರ್​ ಪುಡಿ​, ಗರಂ ಮಸಾಲಾ, ಖಾರದ ಪುಡಿ, ಅರಿಶಿಣ, ಇಂಗು, ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ, ರುಬ್ಬಿದ ಹೆಸರು ಬೇಳೆ ಹಾಕಬೇಕು. ನಂತರ ಉಪ್ಪು ಹಾಕಿ ತೆಗೆದಿಟ್ಟುಕೊಳ್ಳಬೇಕು. ಬಳಿಕ ಗೋಧಿ ಹಿಟ್ಟು, ಮೈದಾ ಹಿಟ್ಟು ಹಾಕಿ ಕಲಸಿ ಸಣ್ಣ ಉಂಡೆ ಮಾಡಿ ಅದರ ಮಧ್ಯದಲ್ಲಿ ತಯಾರಿಸಿಕೊಂಡ ಮಿಶ್ರಣ ಹಾಕಿ, ಎಣ್ಣೆಯಲ್ಲಿ ಕರಿಯಬೇಕು. ಬಳಿಕ ಕಚೋರಿಯನ್ನು ಮಧ್ಯ ಒಡೆದು ಅದರಲ್ಲಿ ಪುದೀನಾ ಚಟ್ನಿ, ಆಲೂಗಡ್ಡೆ, ಹುಳಿ ಸಿಹಿ ಚಟ್ನಿ, ದಾಳಿಂಬೆ, ಚ್ಯಾಟ್​ ಮಸಾಲಾ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬಿಟ್​ರೂಟ್​, ಮೊಸರು ಹಾಕಬೇಕು. ಈಗ ರುಚಿಕರವಾದ ರಾಜ್​ ಕಚೋರಿ ಸವಿಯಲು ಸಿದ್ಧ.

ಇದನ್ನೂ ಓದಿ:
ಮೊಸರು ಪೂರಿ; ಸರಳವಾದ ವಿಧಾನದಲ್ಲಿ ಮಾಡಿ ಸವಿಯಿರಿ

ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Click on your DTH Provider to Add TV9 Kannada