ಇನ್ನೂ ಮೂರು ವರ್ಷದ ಸಹ ತುಂಬದ ಈ ಪೋರ ತಂದೆ-ತಾಯಿಗಳ ಗೂಗಲ್ ಸರ್ಚ್ ಎಂಜಿನ್!

ಇನ್ನೂ ಮೂರು ವರ್ಷದ ಸಹ ತುಂಬದ ಈ ಪೋರ ತಂದೆ-ತಾಯಿಗಳ ಗೂಗಲ್ ಸರ್ಚ್ ಎಂಜಿನ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 27, 2021 | 5:34 PM

2 ವರ್ಷ 11 ತಿಂಗಳು ಪ್ರಾಯದ ಈ ಮಗುವಿನ ಹೆಸರು ಭುವನ್. ಚಿಕ್ಕಮಗಳೂರಿನ ತಾಲ್ಲೂಕಿನಲ್ಲಿರುವ ಗೌಡನಹಳ್ಳಿ ಗ್ರಾಮದ ನಿವಾಸಿಗಳಾಗಿರುವ ಶಿವು ಮತ್ತು ದೀಪಿಕಾ ಅವರ ಮಗ ಭುವನ್. ತಂದೆ-ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರು ಭುವನ್​ನ ಪ್ರತಿಭೆ ಕಂಡು ನಿಬ್ಬೆರಗಾಗಿದ್ದಾರೆ. ಆಷ್ಟ್ಯಾಕೆ ಅವನ ಹೆಸರು ಇಂಡಿಯ ಬುಕ್ ಆಫ್​ ರೆಕಾರ್ಡ್ಸ್​ನಲ್ಲೂ ದಾಖಲಾಗಿದೆ.

ಚಿಕ್ಕಮಗಳೂರು:  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಹೇಳುತ್ತಾರೆ, ಆದರೆ ಈ ವಿಡಿಯೋನಲಲ್ಲಿ ಕಾಣುತ್ತಿರುವ ಮಗುವಿನ ಪ್ರತಿಭೆ ನೋಡುತ್ತಿದ್ದರೆ, ಸದರಿ ಗಾದೆಯನ್ನು ವಯಸ್ಸು ಚಿಕ್ಕದಾದರೂ ಸಾಧನೆ ದೊಡ್ಡದು ಅಂತ ಬದಲಾಯಿಸಬೇಕು ಅಂತ ಅನಿಸದಿರದು. ಅವನಿಗೆ ಇನ್ನೂ 3 ವರ್ಷ ಸಹ ತುಂಬಿಲ್ಲ, ಆದರೆ ತಲೆ ತುಂಬ ಜ್ಞಾನ ತುಂಬಿಕೊಂಡಿದ್ದಾನೆ. ಒಂದರಿಂದ 20 ರವರೆಗಿನ ಮಗ್ಗಿಯನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ನೀರು ಕುಡಿದಷ್ಟೇ ಸುಲಭವಾಗಿ ಹೇಳುತ್ತಾನೆ. ಹೈಸ್ಕೂಲ್ ವಿದ್ಯಾರ್ಥಿಗಳು ಹೇಳಲು ತಡಬಡಾಯಿಸುವ ಇಂಗ್ಲಿಷ್ ಪದ್ಯಗಳನ್ನು ತಾನೇ ಬರೆದಿರುವ ಹಾಗೇ ಬಾಯಿಪಾಠ ಹೇಳುತ್ತಾನೆ. ವಾರ ಮತ್ತು ತಿಂಗಳುಗಳ ಹೆಸರು ಬಿಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕದ ಶ್ರೇಷ್ಠ ಸಾಹಿತಿಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಮಂತ್ರ ಶ್ಲೋಕಗಳನ್ನು ಸಹ ಒಂದೇ ಒಂದು ತಪ್ಪು ಉಚ್ಚಾರಣೆಯಿಲ್ಲದೆ ಹೇಳುತ್ತಾನೆ.

ಅಂದ ಹಾಗೆ, 2 ವರ್ಷ 11 ತಿಂಗಳು ಪ್ರಾಯದ ಈ ಮಗುವಿನ ಹೆಸರು ಭುವನ್. ಚಿಕ್ಕಮಗಳೂರಿನ ತಾಲ್ಲೂಕಿನಲ್ಲಿರುವ ಗೌಡನಹಳ್ಳಿ ಗ್ರಾಮದ ನಿವಾಸಿಗಳಾಗಿರುವ ಶಿವು ಮತ್ತು ದೀಪಿಕಾ ಅವರ ಮಗ ಭುವನ್. ತಂದೆ-ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರು ಭುವನ್​ನ ಪ್ರತಿಭೆ ಕಂಡು ನಿಬ್ಬೆರಗಾಗಿದ್ದಾರೆ. ಆಷ್ಟ್ಯಾಕೆ ಅವನ ಹೆಸರು ಇಂಡಿಯ ಬುಕ್ ಆಫ್​ ರೆಕಾರ್ಡ್ಸ್​ನಲ್ಲೂ ದಾಖಲಾಗಿದೆ. ಅವನಲ್ಲಿರುವ ಪ್ರತಿಭೆ ದೈವದತ್ತ ಎಂದು ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ.

ಯಾವುದಾದರೂ ರಾಜ್ಯ ಇಲ್ಲವೇ ದೇಶದ ರಾಜಧಾನಿಯ ಹೆಸರು ನಮಗೆ ಬೇಕಿದ್ದರೆ, ಗೂಗಲ್​ನಲ್ಲಿ ತಡಕಾಡುತ್ತೇವೆ, ಆದರೆ, ಶಿವು ಮತ್ತು ದೀಪಿಕಾಗೆ ಆ ಸಮಸ್ಯೆ ಇಲ್ಲ. ಅವರಿಗೆ ತಮ್ಮ ಸುಪುತ್ರನೇ ನಡೆದಾಡುವ ಜ್ಞಾನಕೋಶ. ಅವನ ಜ್ಞಾನ ಮತ್ತಷ್ಟು ಹೆಚ್ಚಲಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲೂ ಅವನ ಹೆಸರು ದಾಖಲಾಗಲಿ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಸ್ಟೇಶನ್​ ಗೋಡೆ ಹತ್ತಿದ ಯುವತಿಯನ್ನು ಆಕೆಗೆ ಗೊತ್ತಾಗದಂತೆ ಕಾಪಾಡಿದ ಪೊಲೀಸ್​; ವಿಡಿಯೋ ವೈರಲ್